ಪುಟ:Mysore-University-Encyclopaedia-Vol-6-Part-9.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

448

ಹಲವಾರು ಪ್ರಬೇಧಗಳು ಎರೆಪ್ರಾಣಿಗಳ ಓಡಾಟದ ಸದ್ದಿನ ಮೇಲೇಯೇ ಅವುಗಳನ್ನು ಪತ್ತೆ ಹಚ್ಚಿ ಅವುಗಳ ಮೇಲೆರೆಗಿ ಹಿಡಿಯುತ್ತವೆ.ಹೀಗೆ ಶಬ್ದಗಳನ್ನು ಗ್ರಹಿಸಲು ಅನುಕೂಲವಾಗಲೆಂದೇ ಗೂಬೆಗಳ ಮುಖ ಅಗಲವಾದ ತಟ್ಟೆಯಂತಿದೆಯೆಂದು ನಂಬಲಾಗಿದೆ.ಗೂಬೆಗಳ ಕಿವಿ ದೊಡ್ಡ ಗಾತ್ರದವು;ಇವನ್ನು ಚರ್ಮದ ಮಡಿಕೆಯೊಂದು ಭಾಗಶಃ ಮುಚ್ಚಿರುತ್ತದೆ.ಗೂಬೆಗಳ ಇನ್ನೊಂದು ಮುಖ್ಯ ಲಕ್ಷಣ ನಿಶ್ಯಬ್ದ ಹಾರಾಟ.ಇವು ಹಾರುವಾಗ,ಎರೆ ಪ್ರಾಣಿಗಳ ಮೇಲೆ ಎರಗುವಾಗ ಸ್ವಲ್ಪವೂ ಸದ್ದು ಮಾಡುವುದಿಲ್ಲ.ಇವುಗಳ ರೆಕ್ಕೆಗಳಲ್ಲಿನ ಮತ್ತು ದೇಹದ ಇತರ ಭಾಗಗಳಲ್ಲಿನ ಗರಿಗಳ ಬುಡದಲ್ಲಿ ಸದ್ದನ್ನು ಅಡಗಿಸುವಂತಹ ಮೃದುವಾದ ತುಪ್ಪಳಿನ ರೀತಿಯ ತಂತುಗಳಿರುವುದೇ ಇದಕ್ಕೆ ಕಾರಣ. ಪ್ರರೂಪೀ ಗೂಬೆಗಳ ಸಲವಾರು ಪ್ರಬೇಧಗಳ ತಲೆಯ ಮೇಲೆ ಕೊಂಬುಗಳಂತೆ ಕಾಣುವ ಕರಿಗಳ ಎರಡು ಗುಚ್ಚಗಳಿವೆ.ಉದಾ:ಕೊಂಬಿನ ಗೂಬೆ(ಯುರೇಷಿಯನ್ ಔಲ್).ಗೂಬೆಗಳ ಕತ್ತು ಮೋಟಾಗಿರುವಂತೆ ಕಂಡರೂ ವಾಸ್ತವವಾಗಿ ಉದ್ದವಾಗಿಯೇ ಇದೆ.ಕತ್ತಿನ ಸುತ್ತ ಉದ್ದವಾಗಿ ಮತ್ತು ಸಡಿಲವಾಗಿ ಜೋಡಣೆಯಾದ ಪುಕ್ಕಗಳಿರುವುದರಿಂದ ಕತ್ತು ಮೋಟಾಗಿರುವಂತೆ ಕಾಣುತ್ತದೆ.ಅಲ್ಲದೆ ಕತ್ತು ಯಾವ ಕಡೆಗೆ ಬೇಕಾದರೂ ಬಾಗಬಲ್ಲದು.ಗೂಬೆಗಳ ಕಣ್ಣುಗಳು ಮನುಷ್ಯರಲ್ಲಿರುವಂತೆ ಮುಖದ ಮುಂಭಾಗದಲ್ಲಿರುವುದರಿಂದಲೂ ಕಣ್ಣುಗುಡ್ಡೆಗಳು ಅವುಗಳ ಗುಣಿಗಳಲ್ಲಿ ಆಚೀಚೆ ಹೆಚ್ಚು ಚಲಿಸಲಾರವಾದ್ದರಿಂದಲೂ ಗೂಬೆಗಳು ತಮ್ಮ ಅಕ್ಕಪಕ್ಕದಲ್ಲಿ ಹಾಗೂ ಹಿಂಭಾಗದೆಡೆ ನೋಡಬೇಕಾದರೆ ಈ ತೆರೆನ ಬಳುಕುವ ಕತ್ತು ಬಹಳ ಅನುಕೂಲ.ಗೂಬೆಗಳ ಆಹಾರ ಸೇವನೆಯ ಕ್ರಮವೂ ವಿಚಿತ್ರವೇ.ಇವು ತಮ್ಮ ಆಹಾರವನ್ನು ಹದ್ದು,ಗಿಡುಗಗಳಂತೆ ಕಿತ್ತು ತಿನ್ನದೆ,ಇಡಿಯಾಗಿ ನುಂಗಿಬಿಡುತ್ತವೆ.ಇಲಿ,ಹೆಗ್ಗಣ,ಹಾವು,ಹಕ್ಕಿಗಳು ಇವುಗಳ ಮುಖ್ಯ ಆಹಾರ.ಇವುಗಳ ಜಠರ ರಸ ಅತಿ ತೀಕ್ಷ್ಣ ರೀತಿಯಾಗಿದ್ದು ಆಹಾರದ ಬಹುಪಾಲನ್ನು ಜೀರ್ಣಿಸಿಬಿಡುತ್ತವೆ.ಜೀರ್ಣವಾಗದೆ ಉಳಿಯುವ ಮೂಳೆ ತುಪ್ಪಳು ಗರಿ ಮುಂತಾದ ವಸ್ತುಗಳನ್ನು ಸಣ್ಣ ಗುಳಿಗೆಗಳ ರೂಪದಲ್ಲಿ ಬಾಯಿಂದ ಉಗುಳಿಬಿಡುತ್ತವೆ.ಈ ಪರಿಪಾಠವನ್ನು ಗಳುಮುಳುಕ ಮತ್ತಿತರ ಹಕ್ಕಿಗಳಲ್ಲೂ ಕಂಡುಬರುತ್ತವೆ. ಜೀರ್ಣವಾಗದ ಎಲುಬು ಮುಂತಾದ ವಸ್ತುಗಳು ಸೇರಿ ಗುಳಿಗೆಗಳಾಗಲು ಸಹಾಯಕವಾಗುವಂತೆ ಗಳುಮುಳುಕ ತನ್ನದೇ ಪುಕ್ಕವನ್ನು ಕಿತ್ತು ತಿನ್ನುತ್ತದೆ.ಸಾಮಾನ್ಯವಾಗಿ ಗೂಬೆಗಳು ತಾವು ಬೇಟೆಯಾಡಿದ ಆಹಾರವನ್ನು ಹಿಡಿದ ಸ್ಥಳದಲ್ಲಿಯೇ ತಿನ್ನದ ತಮ್ಮ ಮೆಚ್ಚಿನ ಸ್ಥಳಗಳಿಗೆ ತಂದು ತಿನ್ನುತ್ತವೆ.ಇಂಥ ಜಾಗದ ಮೇಲೆ ನೂರಾರು ವಿಸರ್ಜಿತ ಆಹಾರ ಗುಳಿಗೆಗಳನ್ನು ಕಾಣಬಹುದು.ಇಂಥ ಗುಳಿಗೆಗಳನ್ನು ಬಿಚ್ಚಿ ಣೊ ಡಿದರೆ ಗೂಬೆಗಳ ಆಹಾರ ಪ್ರಾಣಿಗಳು ಯಾವುವು ಎಂಬುದನ್ನು ಪತ್ತೆಹಚ್ಚಬಹುದು.ಅನೇಕ ಸಲ ಇಂಥ ಶೋಧನೆಗಳು ಮಾನವನಿಗೆ ಗೊತ್ತಿರದಿದ್ದ ಹಲವಾರು ಜಾತಿಯ ಪ್ರಾಣಿಗಳನ್ನು ಬೆಳಕಿಗೆ ತಂದಿವೆ. ಗೂಬೆಗಳ ಕೂಗು ಬಲು ಭಯಾನಕ.ಒಮ್ಮೊಮ್ಮೆ ದೀರ್ಘವಾಗಿ ಗೂಕ್ ಗೂಕ್ ಎಂದೋ ಹೃಸ್ವವಾಗಿ ಲೊಚಗುಟ್ಟುವಂತೆಯೋ ಗೊರಕೆ ಹೊಡೆಯುವಂತೆಯೋ ಬುಸುಗುಟ್ಟುವಂತೆಯೋ ಹಲವಾರು ಬಗೆಗಳಲ್ಲಿ ವಿಚಿತ್ರವಾಗಿ ಸದ್ದು ಮಾಡುತ್ತವೆ. ಗೂಬೆಗಳು ಮರದ ಪೊಟರೆ,ಪ್ರಪಾತಗಳಲ್ಲಿನ ಸಂದುಗಳು,ನೆಲದ ಮೇಲಿನ ಗುಳಿಗಳು ಮುಂತಾದ ಸ್ವಾಭಾವಿಕ ನೆಲೆಗಳನ್ನು ಗೂಡುಗಲನ್ನಾಗಿ ಮಾಡಿಕೊಳ್ಳುತ್ತವೆ.ಕೆಲವು ಸಲ ಗಿಡುಗ ಇಲ್ಲ ಕಾಗೆಗಳಿಂದ ತೊರೆಯಲ್ಪಟ್ಟ ಗೂಡುಗಳನ್ನೂ ಬಳಸುವುದುಂಟು.ಸಾಮಾನ್ಯವಾಗಿ ಇಂತಹ ನೆಲೆಗಳನ್ನು ಅವು ಹೇಗಿರುತ್ತವೋ ಹಾಗೆಯೇ ಉಪಯೋಗಿಸುತ್ತವೆ;ಇಲ್ಲಾ ಬಗೆಗಳ ಗೂಬೆಗಳೂ ಗುಂಡನೆಯ ಮತ್ತು ಅಚ್ಚ ಬಿಳಿಯ ಬಣ್ಣದ ಮೊಟ್ಟೆಗಳಿಡುತ್ತವೆ.ಮೊಟ್ಟೆಗಳ ಸಂಖ್ಯೆ ಸಾಮಾನ್ಯವಾಗಿ ಒಂದು ಸಲಕ್ಕೆ ೧-೭ ಅಥವಾ ಹೆಚ್ಚು.ಕಾವು,ಕೊಡುವುದನ್ನು,ಮರಿಗಳ ಪಾಲನೆಯನ್ನು ಗಂಡು ಮತ್ತು ಹೆಣ್ಣು ಒಟ್ಟಿಗೆ ನಿರ್ವಹಿಸುತ್ತವೆ.ಉತ್ತರಮೇರು ಪ್ರದೇಶದ ಮಂಜಿನ ಗೂಬೆಗಳಲ್ಲಿ ಮಾತ್ರ ಕಾವು ಕೊಡುವ ಕೆಲಸ ಹೆಣ್ಣಿನದು.ಹೀಗೆ ಕಾವು ಕೂತ ಹೆಣ್ಣಿಗೆ ಗಂಡು ಗೂಬೆ ಆಹಾರವನ್ನು ಒದಗಿಸುತ್ತದೆ. ಕಣಜದ ಗೂಬೆ ಬಲು ಸಾಮಾನ್ಯವಾಗಿ ಕಂಡು ಬರುವ ಗೂಬೆ.ಮೇರು ಪ್ರದೇಶಗಳು,ನ್ಯೂಗಿಲೆಂಡ್,ಹವಾಯ್,ಮಲಯ ಪರ್ಯಯ ದ್ವೀಪಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಪ್ರದೇಶಗಳಲ್ಲೂ ಈ ಗೂಬೆ ಇದೆ.ಇದರ ಮುಖ ಗುಂಡಿಗೆಯಾಕಾರದ ತಟ್ಟೆಯಂತಿದ್ದು ಸೆಡೆತಿರುವ ಗರಿಗಳ ಅಂಚಿನಿಂದ ಕೂಡಿದೆ.ಮುಖದ ಬಣ್ಣ ಬಿಳಿ.ಇದರಿಂದಾಗಿ ಈ ಗೂಬೆಯ ಮುಖ ಹೆಚ್ಚು ಕಡಿಮೆ ಕೋತಿಯ ಮುಖದಂತಿದೆ.ಆದ್ದರಿಂದ ಈ ಗೂಬೆಗೆ ಕೋತಿಮುಖದ ಗೂಬೆ ಎಂಬ ಹೆಸರೂ ಇದೆ.ಉದ್ದನೆಯ ಕಾಲುಗಳು.ಪಾದದವರೆಗೂ ಇರುವ ಗರಿಗಳು,ಮೋಟುಬಾಲ,ನಡುಬೆರಳಿನ ಮೇಲೆ ಏಣುಗಳುಳ್ಳ ಹಣಿಗೆಯಂಥ ರಚನೆಯಿರುವುದು-ಇವು ಕಣಜದ ಗೂಬೆಯ ಇತರ ಪ್ರಮುಖ ಲಕ್ಷಣಗಳು.ಈ ಗೂಬೆ ೩೫-೪೫ ಸೆಂಮೀ ಉದ್ದ ಇರುತ್ತದೆ'ಹೆಣ್ಣು ಗೂಬೆ ಗಂಡಿಗಿಂತ ದೊಡ್ಡದು.ದೇಹದ ಬಣ್ಣ ಬಂಗಾರ ಮತ್ತು ಬೂದಿಗಳ ಮಿಶ್ರಣ. ಅಲ್ಲದೆ ಕಪ್ಪು ಮತ್ತು ಬಿಳಿಯ ಮಚ್ಚೆಗಳಿವೆ.ಸ್ವಾಭಾವಿಕವಾಗಿ ಮರದ ಪೊಟರೆಗಳನ್ನೂ,ಪ್ರಪಾತಗಳ ಸಂಧಿಗಳನ್ನೂ ಗೂಡುಗಳನ್ನಾಗಿ ಮಾಡಿಕೊಳ್ಳುವುದಾದರೂ ಕೆಲವೊಮ್ಮೆ ಹದ್ದು ಗಿಡುಗ ಮುಂತಾದವುಗಳ ಗೂಡನ್ನು ಬಳಸುವುದುಂಟು.ಹಳೆಯ ಮನೆ,ಚರ್ಚುಗಳ ಗೋಪುರಗಳು ಕಣಜಗಳಲ್ಲಿನ ಚಾವಣಿ ಮುಂತಾದ ಸ್ತಳಗಳಲ್ಲೂ ಗೂಡು ಕಟ್ಟುವುದುಂಟು.ಪಾಳುಬಿದ್ದ ಕಟ್ಟಡಗಳಂತೂ ಇದಕ್ಕೆ ಬಲು ಅಚ್ಚುಮೆಚ್ಚಿನ ಸ್ಥಳ,ಇಂಥ ಸ್ಥಳಗಳಲ್ಲಿ ಗೂಡು ನಿರ್ಮಿಸಿಕೊಂಡು ಕರ್ಕಶವಾಗಿ ದೀರ್ಘವಾಗಿ ಕಿರಿಚುತ್ತಲೋ,ಲೊಚಗುಟ್ಟುವಂತೆ ಇಲ್ಲವೇ ಗೊರಕೆಯಂತೆ ಕೇಳಿಸುವ ಸದ್ದು ಮಾಡುತ್ತಲೋ ಇರುವುದರಿಂದ ತಾನಿರುಚ ನೆಲದ ಭೀಕರತೆಯನ್ನು ಹೆಚ್ಚಿಸುತ್ತದೆ.ವರ್ಷ ವರ್ಷವೂ ಒಂದೇ ಸ್ಥಳವನ್ನು ತನ್ನ ನೆಲೆಯನ್ನಾಗಿ ಉಪಯೋಗಿಸುವುದು ಗೂಬೆಯ ಇನ್ನೊಂದು ವಿಚಿತ್ರ ಲಕ್ಷಣ. ಕಣಜದ ಗೂಬೆ ಅಪ್ಪಟ ನಿಶಾಚರಿ.ಹಗಲಿನಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ.ಮುಚ್ಚಂಜೆಯ ವೇಳೆಗೆ ಬೇಟೆಗೆಂದು ಹೊರಬರುತ್ತದೆ.ಹುಲ್ಲು ಮತ್ತು ಕುಳ್ಳು ಪೊದೆಗಳಿಂದ ಕೂಡಿದ ಬಯಲು ಪ್ರದೇಶ ಇದರ ಅಚ್ಚು ಮೆಚ್ಚಿನ ಬೇಟೆಯ ಸ್ಥಳ.ಇಲಿಗಳೇ ಇದರ ಮುಖ್ಯ ಆಹಾರ.ಇದರಿಂದಾಗಿ ರೈತನ ಸ್ನೇಹಿತ ಅನ್ನಿಸಿಕೊಂಡಿದೆ.ಕಣಜದ ಗೂಬೆ ಇತರ ಗೂಬೆಗಳಂತೆಯೇ ಅತ್ಯಂತ ಚುರುಕಾದ ದೃಷ್ಟಿಯಿರುವುದಾದರೂ ಬೇಟೆಯಾಡಲು ಕಿವಿಗಳನ್ನು ಹೆಚ್ಚು ಅವಲಂಬಿಸಿದೆ. ಕಣಜದ ಗೂಬೆಯ (ಟೈಟೋಆಲ್ಬ) ಸಂತಾನೋತ್ಪತ್ತಿಯ ಕಾಲ ನಿರ್ದಿಷ್ಟವಾಗಿ ಗೊತ್ತಿಲ್ಲ.೪-೭ ಗುಂಡನೆಯ ಹಾಗೂ ಬಿಳಿ ಬಣ್ಣದ ಮೊಟ್ಟೆಗಳನ್ನಿಡುತ್ತವೆ.ಗಂಡು ಹೆಣ್ಣುಗಳೆರಡೂ ಕಾವು ಕೊಟ್ಟು ಮರಿ ಮಾಡುತ್ತವೆ.ಕಣಜದ ಗೂಬೆಯ ಆಯಸ್ಸು ೧೫ ವರ್ಷಗಳು.ಈ ಜಾತಿಯ ಇನ್ನೂ ಎರಡು ಪ್ರಬೇಧದ ಕಣಜದ ಗೂಬೆಗಳು ಭಾರತದಲ್ಲಿ ಕಂಡುಬರುತ್ತವೆ.ಅವೆಂದರೆ ಗರಿಕೆ ಗೂಬೆ(ಗ್ರಾಸ್ ಔಲ್-ಟೈಟೋ ಕ್ಯಾಪೆನ್ಸಿಸ್) ಮತ್ತು ಪೂರ್ವದ ಕಣಜ ಗೂಬೆ(ಓರಿಯಂಟಲ್ ಬೇ ಔಲ್-ಫೊಡಿಲಸ್ ಬಾಡಿಯಸ್