ಪುಟ:Mysore-University-Encyclopaedia-Vol-6-Part-9.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗೂಳಿ ನೊಣ

ಮುಂದೆ ಬಾಣಪಾಣಿಗಳೂ ಗೂಉಳಿಯ ಭುಜಕ್ಕೆ ಭರ್ಜೆ ಚುಚ್ಚುವುದೂ ಬಾಣಗಳನ್ನುಚುಚ್ಚುವದು ಕಾಳಗಜಟು ಗೂಳಿಯನ್ನು ಕೊಲ್ಲಲು ಸಹಾಯಕವಾಗುವಂತಿರಬೇಕಷ್ಟೆ.

ಎರಡನೆಯ ಬಾರಿ ಕಹಳೆ ಧ್ವನಿಗೈಯುತ್ತದೆ.ಆಗ ಬೆದರು ಬಟ್ಟೆಯನ್ನು ಬಿಟ್ಟು ಎರಡು ಕೈಗಳಲ್ಲೂ ಬಾಣಗಳನ್ನು ಹಿಡಿದ ಬಾಣಪಾಣಿಗಳು ಅಖಾಡವನ್ನು ಪ್ರವೇಶಿಸುತ್ತಾರೆ.೨೦-೩೦ ಅಡಿ ದೂರ ನಿಂತ ಅರಚಿ ಬೊಬ್ಬೆ ಹಾಕಿ ಗೂಳಿಯನ್ನು ತಮ್ಮತ್ರ ಸೆಳೆಯತ್ತಾರೆ.ಗೂಳಿಯ ಅಕ್ರಮಣದಿಂಅದ ತಪ್ಪಿಸಿಕೊಂಡು ಗೂಖಿಯ ಭುಜಕ್ಕೆ ೭-೮ ಬಾಣಗಳನ್ನು ಚುಚ್ಚುತಾರೆ.ಚುಚ್ಚಿದ ಬಾಣಗಳ ನೋವಿನಿಂದಯೇ ಗೂಳಿ ತಲೆ ತಗ್ಗಿಸಿಯೇ ಅಕ್ರಮಣ ಮಾಡಬೇಕಾಗುತ್ತದೆ.ಮುಂದೆ ಪ್ರಧಾನ ಕಾಳಿಗಪಟುವಿಗೆ ಕತ್ತಿಯಿಂದ ಇರಿಯಲು ಇದು ಸಹಾಯಕವಾಗುತಾದೆ.

ಗೂಳಿಯ ಬಲಿ ಸಮಯ ಬಂದಿತೆಂಬ ಸೂಚನೆಯಾಗಿ ಮೂರನೆಯ ಬಾರಿಗೆ ಕಹಳೆ ಧ್ವನಿಗೈಯುತ್ತದೆ.ಅಶ್ವಾರೂಢರೂ ಬಾಣಪಾಣಿಗಳೂ ಹಿಂದೆ ಸರಿಯುತ್ತಾರೆ.ಪ್ರಧಾನ ಕಾಳಗಪಟು ಬಲಗೈಯಲ್ಲಿ ಕತ್ತಿಯನ್ನೂ ಎಡಗೈಯಲ್ಲಿ ಬೆರದು ಬಟ್ಟೆಯನ್ನೂ ಹಿಡಿದು ಅಖಾಡ ಪ್ರವೇಶಿಸಿ ಗೂಳಿಗೆ ಎದುರಾಗುತ್ತಾನೆ.ಬೆದರು ಬಟ್ಟೆ ತೋರಿಸಿ ಗೂಳಿಯನ್ನು ಕೆರಳಿಸುತ್ತಾನೆ.ಏಕಾಂಗಿಯಾದ ಈ ಕಾಳಗಪಟ್ಟು ನಿಶ್ಚಲವಾಗಿ ಒಂದೆಡೆ ನಿಂತು ಅಗತ್ಯ ಬಿದ್ದಾಗ ಅತ್ತಿತ್ತ ಒಂದೊಂದು ಹೆಜ್ಜೆ ನಡೆಯುತ್ತ ಹೋರಟ ನಡೆಸುತ್ತಾನೆ.ಅತಿ ಕಠಿಣವಾದ ಹೋರಾಟದ ವರಸೆ ತೋರಿಸುತ್ತಾನೆ.ಗೂಳಿಯ ಕೊಂಬುಗಳು ಈತ ನಸು ಬಾಗಿದರೂ ಇವನ ದೇಹದನ್ನು ತಗುಲುವಷ್ಟು ಸಮೀಪದಲ್ಲಿರುತ್ತವೆ.ಉಸಿರು ಬಿಗಿ ಹಿಡಿದು ಹೋರಾತಗಾರನ ಆಟವನ್ನು ಪ್ರೇಕ್ಷಕರು ನೋಡುತ್ತಿರುತ್ತಾರೆ.ಪ್ರಾಣವನ್ನು ಒತ್ತೆಇಟ್ಟು ನೆಡೆಸುವ ಈ ಹೋರಾಟ ನಿಜವಾಗಿಯೂ ರೋಮಾಂಚಕಾರಿ ಯಾದುದು ಹಲವು ವಿವಿಧ ಕ್ರೀಡಾ ಕೌಶಲವನ್ನೂ ತನ್ನ ಚಾಕಚಕ್ಯತೆಯನ್ನೂ ಕಾಳಗಪಟು ಪ್ರದರ್ಶಿಸಿ,ಗೂಳಿಯ ಮೇಲೆ ತನ್ನ ಸಂಪೂರ್ಣ ಯಜಮಾನಿಕೆ ಸ್ಧಾಪಿಸುತಾನೆ.ಕಾಳಗಪಟು ಕೊಲ್ಲುವ ಒಂದೊಂದು ಗೂಳಿಯನ್ನೂ ತನಗೆ ಬೇಕಾದವರಿಗೆ ಅರ್ಷಿಸುವ ವಾಡಿಕೆ ಉಂಟು ಅದ್ದಕ್ಷ ಪೀರದಡಿ ನಿಂತು ಕಾಳಗ ಪತು ಗೂಳಿಯನ್ನು ಅರ್ಶಿಸಲು ಅಧ್ಯಕ್ಷನ ಗೂಳಿಯನ್ನು ಎದುರಿನಲ್ಲೇ ಕೊಲ್ಲಬೇಕು.ಕ್ರಮ ತಪ್ಪಿದರೆ ಅಪಾರ ದಂಡತತ್ತು ಸೆರೆವಾಸವನ್ನೂ ಅನುಭಿದಿಸಬೆಕಾಗುತ್ತದೆ.ಕೊಲ್ಲಲು ಸಿದ್ದಿನಾಗಿ ಕಾಳಗಪಟು ತನ್ನ ಎಡಗೈಯ ಬೆರದು ಬತ್ಟೆಯಿಂದ ಗೂಳಿಯನ್ನು ತನಗೆ ಅ ಅನುಕೂಲವಾದ ಅಯಕಟ್ಟೆಗೆ ತಂದುಕೊಳ್ಳುತ್ತಾನೆ.ತಲೆ ತಗ್ಗಿಸಿ ತನ್ನತ್ತನುಗ್ಗಿ ಬರುವ ಗೂಳಿಯಿಂದ ತಪ್ಪಿಸಿಕೊಂಡು ಮಿಮ್ಚಿನ ವೇಗದಲ್ಲಿ ಕತ್ತಿಯಿಂದ ಅದರ ಭುಜಕ್ಕೆ ಅಳವಾಗಿ ಇರಿಯುತ್ತಾನೆ.ಇರಿತ ಸಕ್ರಮವಾಗಿದ್ದರೆ ಗೂಳಿ ತಕ್ಷಣ ಮರಣವನ್ನಪ್ಪುತ್ತದೆ.

ಪ್ರೇಕ್ಷಕ ವರ್ಗ ಅನಂದಾತಿಲೇಕದಿಂದ ಚಪ್ಪಾಳೆ ಹಾಕುತ್ತಾರೆ.ಪ್ರೇಕ್ಷಕಾಂಗಣದ ಸುತ್ತಲೂ ಹೋಗಿ ಕಾಳಗಪಟು ವಂದನೆ ಸ್ವೀಕರಿಸುತ್ತಾನೆ.ಅನಂತರ ಗೂಳಿಗೆ ಇರಿದಿದ್ದ ಕತ್ತಿಯನ್ನು ಹೊರ ಸೆಳೆದು ಮೊದಲೇ ಅರ್ಷಿಸಿದ್ದ ವ್ಯಕ್ತಿಗೆ ಅದನ್ನು ಮತ್ತೆ ಕಾಳಗಪಟುವಿಗೇ ಹಿಂದಿಗಿಸುತ್ತಾನೆ.ಕಾಳಗಪಟುವಿನ ಹೋರಾಟ ಉತ್ರಮವಾಗಿದ್ದರೆ.ಒಂದು ಕಿವಿಯನ್ನೂ ಅಮೋಘವಾಗಿದ್ದುದಾದರೆ,ಎರಡು ಕಿವಿಗಳ ಜೊತೆಗೆ ಹೂಲಿಯ ಬಾಲವನ್ನೂ ಮೆಚ್ಚಿಕೆಯಾಗಿ ಕತ್ತರಿಸಿಕೊದುತ್ತಾರೆ.ಹೇಸರು ಕತ್ತೆಗಳ ಸಹಾಯದಿಂದ ಗೂಳಿಯ ದೇಹವನ್ನು ಅಖಾಡದಿಂದ ಹೊರಗೊಯ್ಯುತ್ತಾರೆ.ರಕ್ತ ಬಿದ್ದ ಕಡೆಗೆ ಮರದ ಹೊಟ್ಟು ಹಾಕಿ,ಅಖಾಡವನ್ನು ಜೊಕ್ಕಟಗೊಳಿಸಿ,ಮುಂದಿನ ಕಾಳಗಕ್ಕೆ ಅಣಿ ಮಾಡುತ್ತಾರೆ.

ಪ್ರೇಕ್ಷಣದ ಪ್ರತಿಕ್ಷಣವೂ ಕಾಳಗಪಟು ಬದುಕು-ಸಾವುಗಳ ನದುವೆ ಸೆಣಸಾಡುತ್ತಾನೆ.ಎಷ್ಟೇ ಅನುಭವಿ ಕಾಳಗಪತುವಾದರೂ ವಾರ್ಷಿಕ ಕಾಳಗ ಮಾಲೆಯಲ್ಲಿ ಒಮ್ಮೆಯಾದರೂ ಪ್ರಾಣಘಾತುಕ ಇರಿತವನ್ನು ಅನುಭವಿಸಬೇಕಾಗುತ್ತದೆ.ಪಟು ಸಾಮಾನ್ಯವಾಗಿ ಎಂಟು ಅಥವಾ ಹತ್ತು ವರ್ಷಗಲು ಈ ಜೀವನ ನಡೆಸಿ,ಅಪಾರ ಹಣ ಸಂಪಾದಿಸಿ,ಕಾಳಗದಿಂದ ನಿವೃಶ್ರನಾಗಿ,ಉತಮ ತಳಿ ಬೆಳೆಸುವುದಲ್ಲಿ ಹಾಗೂ ಚಿಕ್ಕವರಿಗೆ ಶಿಕ್ಷಣ ಕೊದುವುದರಲ್ಲಿ ನಿರತನಾಗಿ,ಷಾಂತ ಜೀವನ ನಡೆಸುತ್ತಾನೆ.ಹೀದೆ ಗೂಳಿಯನ್ನು ಕತ್ತಿಯಿಂದ ಇರಿದು ಕೊಲ್ಲುವುದೆ ಪ್ರಮುಖ ಕ್ರಿಯೆಯಾಗಿತ್ತು.ಆದರೆ ಇಂದಿನ ಪ್ರೇಕ್ಷಕ,ಅಖಾಡದಲ್ಲಿ ಕಾಳಗಪಟುವಿನ ಸಾವನ್ನಾಗಲೀ ಆತಿ ಸಲೀಸಾಗಿ ಯಾವ ತೊಂದರೆಯೂ ಇಲ್ಲದೆ ಗೂಳಿಯನ್ನು ಕೊಲ್ಲುವುದನ್ನಾಗಲೀ ನೋಡಬಯಸುವುದಿಲ್ಲ.ಗೂಳಿಯ ಭಯಾನಕ ಆಕ್ರಮಣದಿಂದ ಕಾಳಗಪಟು ತಪ್ಪಿಸಿಕೊಳ್ಳುವ ಕೌಶಲ,ಚಾಕಚಕ್ಯತೆ ಹಾಗೂ ಅವನ ಸ್ಧ್ರೆರ್ಯಗಳನ್ನು ನೋಡಬಯಸುತ್ತಾನೆ.ಕಾಳಗಕ್ಕೆ ಈ ಹೊಸತನವನ್ನು ಶಂದುಕೊಟ್ಟವ ಅಂಡಲೂಸಿಯದ ಬೆಲ್ವೂಂಟ್(೧೯೧೪) ಈತನ ಸ್ನೇಹತ ಹಾಗೂ ಪ್ರತಿಸ್ವರ್ಧಿ ಜೊಸೆ ಗೋಮೆಜ್ಲ್ ಹಿಂದು ಮೊಂದಿನ ಪಟುಗಳಲ್ಲೆಲ್ಲ ಪ್ರಥಮನೆಂದು ಪರಿಗಣಿತನಾಗಿದ್ದಾನೆ.೧೯೨೦ರಲ್ಲಿ ಪ್ರೇಕ್ಷಕರನ್ನು ಹೆಚ್ಚು ಹೆಚ್ಚು ತಣಿಸಲು ಹೋಗಿ ಅಖಾಡದಲ್ಲೇ ಈತ ಅಸುನೀಗಿದ.೧೭೦೦ರಿಂದ ಸಮಾರು ೧೨೫ ಜನ ಪ್ರಧಾನ ಕಾಳಗಪತುಗಳಲ್ಲಿ ೪೨ ಜನ ಅಖಾಡದಲ್ಲಿ ಸಾವನ್ನಪ್ಪಿದ್ದಾರೆ.ಅಶ್ಟೆರೂಢ ರ,ಬಾಣಪಾಣಿಗಳ ಸಾವಿನ ಸಂಖ್ಯೆ ಇದಕ್ಕಿಂತಲೂ ಅಧಿಕ.

ಲಾಗರ್ತಿಜೊ ಎಂದು ಪ್ರಸಿದ್ಧನಾದ ರಾಪಿಯಲ್ ಮೋಲಿನಾ(೧೮೪೧-೧೯೦೦) ಪ್ರಾಸ್ ಕ್ಯಲಿಯೋ ಎಂದು ಹೆಸರಾದ ಸಾಲ್ಟೆಡೊರ್ (೧೮೪೨-೧೮೯೮),ಜೊಸೆಲಿಟೊ ಎಂದು ಸಪರಿಚೆತನಾದ ಜೊಸೆಗೋಮೆಚ್ ಓರ್ಟಿಗೊ (೧೮೯೫-೧೯೨೦)ಮ ರಾಫಿಯಲ್ ಒರ್ಟಿಗೋ ಗೋಮಚ್ (೧೯೧೯-೧೯೪೦),ಮಾನೊಲಿಟ (೧೯೧೭-೧೯೪೭) ಮತ್ತು ಜು ಅನ್ ಬೆಲ್ಮಾಂಟ್ (೧೮೯೨),ಇವರ ಜೊತಗೆ ಮೆಕ್ಸಿಕೊದ ರೊಡ್ಲ್ಛ್ಹೋ ಗೊವಾನ,ಆರ್ಮಿಲಿಟ ಹಾಗೂ ಕಾರ್ಲೋಸ್ ಅರೂಜ್ಲ ಇವರು ಸುಪ್ರಖ್ಯಾತ ಗೂಳಿ ಕಾಳಗಪಟುಗಳು.

ಇಪ್ಪತ್ತನೆಯ ಶತಮಾನತ ದ್ವಿತೀಯಾರ್ಧದಲ್ಲಿ ಗೂಳಿಕಾಳಗ ಹಿಂದೆಂದಿಗಿಂತಲೂ ಹೆಚ್ಚಿನ ಜನರನ್ನು ಅಕರ್ಷಿಸುತ್ತಿದೆ.ಅಂಟೋನಿಯೊ ಒರ್ದೊನೇಜ ಹಾಗೂ ಲೂಯಿಸ್ ಮಿನುಯೆಲ್ ಡೊಮಿನ್ ಗುಯಿನ್ ಇವರ ಸ್ವರ್ಧತ್ಮಕ ಗೂಳಿಕಾಳಗಗಳು ೧೯೫೯ ರಲ್ಲಿ ನಡೆದು,ಹೊಸ ದಾಖಲೆಯನ್ನೇ ಸೃಷ್ಟಿಸಿದುವು.

ಸ್ವೇನ್ ಇಂದಿಗೂ ಈ ಪ್ರೇಕ್ಷಣದ ತವರು.ಮೆಕ್ಸಿಕೊ,ಕೊಲಂಬಿಯ ಹಾಗೂ ವೆನಿಜ್ಗುವೆಲಗಳಲ್ಲಿಯೂ ತನ್ನದೇ ಆದ ರೀತಿಯಲ್ಲಿ ಪೋರ್ಚುಗಲ್ನಯೂ ಇದು ಅತ್ಯಂತ ಅಕರ್ಷಕ ಪ್ರೇಕ್ಷಕಣವಾಗಿ ಉಳಿದಿದೆ.ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಮನುಷ್ಯ ಗೂಳಿಯೊಂದಿಗೆ ಸೆಣಸಾಡಿದ ಕೆಲವು ಸಂದರ್ಭಗಳ ವರ್ಣನೆ ಜನಪದ ಸಾಹಿತ್ಯದಲ್ಲಿ ಬರುತ್ತದೆ.ಕುವೆಂಹುರವರ ರಾಮಾಯಣ ದರ್ಶನಂನಲ್ಲಿ ಕುಂಭಕರ್ಣ ಹೂಳಿಯೊಂದಿಗೆ ನಡೆಸುವ ಹೋರಾಟದ ವರ್ಣನೆಯಿದೆ.ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆ ಗೂಳಿಕಾಳಗದ ಒಂದು ಸ್ವರೂಪವಾಗಿದೆ. ಗೂಳಿ ನೊಣ: ದಿಪ್ಪರ ಗಣದ ಈಷ್ಟ್ರಿಡೀ ಕುಟುಂಬಕ್ಕೆ ಸೇಂರಿದ ಒಂದು ಕೀಟ (ಆಕ್ಸ್ತಾಟ್ ಪ್ಲೈ).ಹೈಪೋಡರ್ಮ ಇದರ ಶಾಸ್ತ್ರಿಯ ಹೆಸರು ಜೀನು ನೊಣವನ್ನು ಹೋಲಾತ್ತದೆ.ದಪ್ಪವಾದ ಹಾಗೂ ರೋಮಮಯವಾದ ದೇಹ,ಚೆಕ್ಕ ಗ್ರಾಹಕಾಂಗ (ಆಂತಿನೀ),ಕ್ಷೀನಿಸಿರುವ ವದನಾಂಗಗಳು,ನಿಳವಾದ ಅಂಡ ನಿಕ್ಷೇಪಕ-ಇವು ಪ್ರೌಢ ನೊಣದ ಮುಕ್ಯ ಲಕ್ಷಣಗಳು.ಪ್ರೌಢ ಗೂಳಿ ನೊಣಗಳು ಸ್ವತಂತ್ರ ಜೀವನ ಸಾಗಿಸಬಲ್ಲವು.ಆದರೆ ಡಿಂಭಗಳು.(ಇವಕ್ಕೆಗ್ರಬ್ ಎಂದು ಹೆಸರು) ಮಾತ್ರ ದನಕರುಗಳ ಮೇಲೆ ಪರಾವಲಂಬಿಗಳಾಗಿರುತ್ತವೆ.ಹೂಳಿನೋಣಗಳಲ್ಲಿ ಹಲವಾರು ಪ್ರಭೇದಗಳಿವೆ.ಮುಖ್ಯವಾದವು ಯಿರೋ[ಇನಲ್ಲಿ ಕಂಡಬರುವ ಬೋವಿಸ್ ಪ್ರಭೆದ ಮತ್ತು ಅಮೆರಿಕದಲ್ಲಿನ ಲೈನಿಯೇಟು ಪ್ರಭೇದ.ಕೊನೆಯದು ಭಾರತದಲ್ಲೂ ಕಂಡುಬರುತ್ತದೆ.

ಪ್ರೌಢ ನೊಣಗಳ ಚತುವಟಿಕೆ ಮೇ-ಆಗಸ್ಟ್ ತಿಂಗಳುಗಳಲ್ಲಿ ಹೆಚ್ಚು ಹೆಣ್ಣುನೊಣ ದನಕರುಗಳ ಕಾಲುಗಳ ಮೇಲಿರುವ ಮಾತ್ತು ಗೊರಸುಗಳ ಬಳಿಯಿರುವ ಕೂದಲಿನ ಮೇಲೆ ಸಾಲುಸಾಲಾಗಿ ಮೊಟ್ಟೆಗಳನ್ನಿಡುತ್ತದೆ.ಒಂದೊಂದು ಕೂದಲಿನ ಮೇಲೂ ೧-೧೦ ಮೊಟ್ತೆಗಳು ಇರುತ್ತವೆ.ಮೊಟ್ಟೆಗಳ ಆಕಾರ ಚುಟ್ಟದಂತೆ.ಒಂದೊಂದು ತನ್ನ ತುದಿಯಲ್ಲಿನ ಉಪಾಂಗಗಳ ಸಹಾಯದಿಂದ ಕೂದಲಿಗೆ ಅಂಟರುತ್ತದೆ.ಕೆಲದಿನಗಳಾದ ಮೇಲೆ ಮೊಟ್ಟೆಯಿಂದ ಹೊರ ಬಂದ ಡಿಂಭಗಳು ಪೋಪಕ ಜೀವಿಯ ಚರ್ಮ ವನ್ನು ಕೊರೆದು ದೇಹವನ್ನು ಹೊಕ್ಕು,ಹಲವು ತಿಂಗಳ ಕಾಲ ದೇಹದಾದ್ಯಂತ ಓಡಾದಿ,ಕೊನೆಗೆ ಗಂಟಲಿನ ಒಳಗೋಡೆಗೆ ಅಲ್ಲಿದ್ದು ಅನಂತರ ಬೆನ್ನಿನ ತಳಭಾಅಗದಲ್ಲಿ ಬಂದು ನೆಲೆಗೊಂಅಡು ತಮ್ಮ ಬೆಳೆವಣಿಗೆ ಯನ್ನು ಮುಂದುವರಿ ಸುತ್ತವೆ (ಇವುಗಳ ಕ್ರಿಯಾಚಟುವಟಿಕೆಗಳಿಂದಾಗಿ ಇವು ಇವರ ಸ್ಮಳಗಳು ಊದಿಕೊಂಡಂತೆ ಕಾಣುತ್ತವೆ).ಪೋಪಕಜಿವಿಯ ಲಸಿಕೆ (ಸೀರ್ಸ್ಂ) ಮಾತ್ತು ಶೀವನ್ನು ಸೇವಿಸಿ ಬೆಳೆಯುತ್ತವೆ.ಬೆಳೆವನಿಗೆ ಪೂರ್ಣಗೊಂಡ ಮೇಲೆ ಉರುಳೆಯಾಕಾರೆ ವನ್ನು ತಳೆಯುವ ಇವು ಸು.೨೫ಮಿಮೀ ಉದ್ದವಿರುತ್ತವೆ.ಕೊನೆಗೆಪೋಷಕ ಜೀವಿಯ ದೇಹದಿಂದ ಹೊರಬಂದು,ನೆಲಕ್ಕುದು ರುತ್ತವೆ.ಭೂಮಿಗೆ ಬಿದ್ದ ಅನತಿಕಾಲದಲ್ಲಿಯೆ ಕೋಶಾವಸ್ಮೆಯನ್ನು ಸೇರುತ್ತವೆ ಕೋಶಾವಸ್ಮೆಯ ಅವಧಿ.