ಪುಟ:Mysore-University-Encyclopaedia-Vol-6-Part-9.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬೪ ಗೃಹಕೈಗಾರಿಕೆಗಳು

ಗೃಹ ಕೈಗಾರಿಕೆಗಳು: ಮನೆಯನ್ನೇ ಕೈಗಾರಿಕಾ ಸ್ಥಳವಾಗಿ ಮಾಡಿಕೊಂಡು ಮನೆಯವರೆಲ್ಲ್ ಕೂಡಿ ತಮ್ಮ್ ಬಿಡುವಿನ ಸಮಯದಲ್ಲಿ ಉತ್ಪಾದಿಸುವ ಸಾಮಾನ್ಯ ಬಳಕೆಯ ವಸ್ತುಗಳ ಉದ್ಯಮ.ಕನಾ೯ಟಕ ಗೃಹಕೈಗಾರಿಕೆಗಳು ಹಿಂದಿನಿಂದಲೂ ಪ್ರಸಿದ್ಧ್. ಅವುಗಳಲ್ಲಿ ಕುಂಬಾರಿಕೆ,ನೇಯ್ಗೆ,ಬಿದಿರು ಮತ್ತು ಬೆತ್ತದ ಸಾಮಾನುಗಳ ತಯಾರಿಕೆ, ಚಾಪೆ ಹೆಣಿಗೆ, ಚಮ೯ ವಸ್ತುಗಳ ತಯಾರಿಕೆ, ನೂಲಿಗೆ ಬಣ್ಣ್ ಕಟ್ಟುವುದು, ಬಟ್ಟೆ ತಯಾರಿಕೆ ,ಪುಸ್ತ್ ಕಗಳನ್ನು ಹೊಲಿಯುವುದು,ಬೀಜಗಳಿಂದ ಎಣ್ಣೆ ತೆಗೆಯುವುದು,ಚಿನ್ನಬೆಳ್ಳಿ ಮತ್ತು ಇತರ ಆಭರಣಗಳ,ಸಂಗೀತ ವಾದ್ಯಗಳ,ವ್ಯವಸಾಯೋಪಕರಣಗಳ,ಜನಖಾನದ,ಮಣ್ಣಿನ ಪ್ರತಿಮೆಗಳ ಮತ್ತು ತಾಮ್ರಕಾಂಚು ಹಿತ್ತಾಳೆ ಸಾಮಾನುಗಳ, ಆಟದ ಸಾಮಾನು,ಅಲಂಕಾರ ವಸ್ತು,ರಬ್ಬರ್ ವಸ್ತುಗಳ ಮತ್ತು ಅಚ್ಚುಗಳ ತಯಾರಿಕೆ,ರಟ್ಟುಕಟ್ಟುವುದು,ಕಸೂತಿ ವಸ್ತುಗಳ ಉತ್ಪಾದನೆ ಮುಂತಾದ ಹಲವರು ಕೈಗಾರಿಕೆಗಳಿವೆ.ಅವುಗಳ ಉತ್ಪಾದನೆಗಳೊಂದಿಗೆ ಸಹಕರಿಸುವ ನೂರಾರು ಉಪಕೈಗಾರಿಕೆಗಳೂ ಉಂಟು.ಉದಾಹರಣೆಗೆ ಚಮೋ೯ದ್ಯೋಗಕ್ಕೆ ಬೇಕಾದ ಸುಣ್ಣ್, ನೂಲಿಗೆ ಬೇಕಾಗುವ ಬಣ್ಣ್ ಇತ್ಯಾದಿ.ಇವು ಅಲ್ಪ್ ಪ್ರಮಾಣದಲ್ಲಾದರೂ ತಯಾರಾಗಬಹುದು.ಇಲ್ಲವೆ ಭಾರಿ ಉದ್ಯಮವೇ ಆಗಿರಬಾರದು.ಗೃಹ ಕೈಗಾರಿಕಾರಿಕಾ ವಸ್ತುಗಳ ಉತ್ಪಾದನೆಯ ಜೊತೆಯಲ್ಲಿ ಇತರ ಉಪವಸ್ತುಗಳೂ ನಮಗೆ ದೂರಕುತ್ತವೆ.ಉದಾಹರಣೆಗೆ ಎಣ್ಣೆ ಉತ್ಪಾದನೆಯ ಜೊತೆಯಲ್ಲಿ ಹಿಂಡಿ, ಅಕ್ಕಿ ಕುಟ್ಟುವುದರಿಂದ ತೌಡು ಇತ್ಯಾದಿಗಳನ್ನು ಹೆಸರಿಸಬಹುದು.ಗೃಹ ಕೈಗಾರಿಕೆಗಳು ಇತರ ಸಹವಸ್ತುಗಳನ್ನು ಉತ್ಪಾದಿಸುವುದಲ್ಲದೆ ಹಿರಿಯ ಕೈಗಾರಿಕೋದ್ಯಮಕ್ಕೆ ಕಚ್ಚಮಾಲನ್ನೂ ಉಪಯುಕ್ತ್ ವಸ್ತುಗಳನ್ನು ತಯಾರಿಸಿ ರಾಜ್ಯದ ಕೈಗಾರಿಕೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ಎಲ್ಲ ಉದ್ಯಮಗಳಿಗೆ ಬೇಕಾಗುವ ಪ್ರಾಕೃತಿಕ ಕಚ್ಚವಸ್ತುಗಳು ಕನಾ೯ಟಕದಲ್ಲಿ ಹೇರಳವಾಗಿದೆ. ಮರದ,ಬಿದಿರಿನ ಮತ್ತು ನಾರಿನ ಉದ್ಯಮಕ್ಕೆ ಕನಾ೯ಟಕ ಕಾಡುಗಳಲ್ಲಿ ಉತ್ತಮ ಮರಗಳು,ಬಿದಿರು,ನಾರಿನ ಕತ್ತಾಳೆ ಇವು ದೊರೆಯುತ್ತವೆ. ಕಬ್ಬಿಣಕ್ಕು ಕೊರತೆ ಇಲ್ಲ.ಕುಂಬಾರಿಕೆಗೆ ಬೇಕಾಗುವ ಜೇಡಿ ಮತ್ತು ಇತರ ಮಣ್ಣುಗಳು ರಾಜ್ಯದ ಅನೇಕ ಕಡೆ ಹೇರಳವಾಗಿ ದೊರೆಯುವುದು.ಜೇನು ಸಾಗಣಿಕೆಗೆ ವಿಶಾಲವಾದ ಕಾಡುಗಳೂ ಉದ್ಯಾನವನಗಳೂ ಇವೆ. ಲೋಹ ಕಲಾಕೃತಿ:ಪಶುಸಂಪತ್ತು ಸಮೃದ್ದಿಯಗಿದ್ದು ಚಮೋ೯ದ್ಯೋಗಕ್ಕೆ ಅನುಕೂಲವಾಗಿದೆ. ನಾನಾ ತರಹದ ಎಣ್ಣೆಬೀಜಗಳು,ಉದಾಹರಣೆಗೆ ಹೂಂಗೆ,ಬೇವು, ಹರಳು,ನೆಲಗಡಲೆ,ಎಳ್ಳು,ಹುಚ್ಚೆಲ್ಲು ಇತ್ಯಾದಿಗಳು ಬೆಳೆಯುವುದರಿಂದ ತೈಲೋದ್ಯಮಕ್ಕೆ. ಬತ್ತ ರಾಜ್ಯದ ಒಂದು ಮುಖ್ಯ ಬೆಳೆಯಾಗಿದ್ದು ಕೊಟ್ಟಣದ ಅಕ್ಕಿ ಉದ್ಯಮ ನಡೆದುಕೊಂಡು ಹೋಗುತ್ತಿವೆ. ಕಬ್ಬು ರಾಜ್ಯದ ಇನ್ನೊಂದು ಪ್ರಮುಖ ಬೆಳೆಯಾಗಿದ್ದು, ಬೆಲ್ಲ ಮತ್ತು ಖಂಡಾಸಾರಿ ಉದ್ಯಮಕ್ಕೂ ಸಿಪ್ಪೆ ಕಾಗದ ತಯಾರಿಕೆಗು ಬರುತ್ತದೆ. ಅಖ್ಯಾದ ತೈಲಗಳ ಉತ್ಪತ್ತಿಯೂ ಸಾಕಷ್ಟು ಇದ್ದು ಈ ಲಗಳನ್ನೂ ಸಾಬೂನು ತಯಾರಿಕೆಗು ಉಪಯೋಗಿಸುತ್ತಾರೆ. ಕಂಬಳಿ ತಯಾರಿಕೆಗೆ ಸಾಕಷ್ಟು ಉಣ್ಣೆಯ ಪೂರೈಕೆ ಇದೆ.ಕತ್ತಾಳೆ ಮುಂತಾದವುಗಳಿಂದ ನಾರಿನ ಉತ್ಪತ್ತಿಯಾಗುತ್ತದೆ. ಬಣ್ಣದ ಆಟಿಕಗಳು:ಅಂದಿನ ಮೈಸೂರು ಸಕಾ೯ರ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಗೃಹಕೈಗಾರಿಕೆಗಳನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ೧೯೧೬ರಲ್ಲಿ ಗೃಹಕೈಗಾರಿಕಾ ಸಂಸ್ಥೆಯನ್ನು ಸ್ಥಾಪಿಸಿತು. ಈ ಯೋಜನೆ ನಿಧಾನಗತಿಯಲ್ಲಿ ಸಾಗಿದ್ದು ೧೯೩೯ ಒಂದು ವ್ಯಾಪಕ ಯೋಜನೆ ಸಿದ್ದಪಡಿಸಿ ಜಾರಿಗುಳಿಸಲಾಯಿತು.ಇದರಂತೆ ಮಾದರಿ ಮಡಿಕೆಕುಡಿಕೆಗಳ ತಯಾರಿಕೆ, ಗುಂಡಿ ಮತ್ತು ಚಮ೯ ವಸ್ತುಗಳ ತಯಾರಿಕೆ ಇವೆ ಮೊದಲಾಗಿ ೧೭ ಬಗೆಯ ಗೃಹಕೈಗಾರಿಕೆಗಳು ಸ್ಥಾಪನೆಯಾದವು.ಜೊತೆಗೆ ರಾಜ್ಯದ ಕೆಲವು ಭಾಗಗಳಲ್ಲಿ ತರಬೇತಿ ಕೇಂದ್ರಗಳು ಸ್ಥಾಪಿತವಾದವು. ಮುಂದೆ ಕೈಗಾರಿಕೋದ್ಯಮದ ಬೆಳವಣಿಗೆಗೆ ಮತ್ತು ನಿರುದ್ಯೋಗ ನಿವಾರಣೆಗೆ ಗೃಹಕೈಗಾರಿಕೆಗಳ ಅಭಿವೃದ್ದಿ ಅಗತ್ಯವೆಂಬುದನ್ನು ಮನಗಂಡು ಸಕಾ೯ರ ಕೆಲವು ಮಂಡಲಿಗಳನ್ನು ಸ್ಥಾಪಿಸಿತು.ಅವುಗಳಲ್ಲಿ ಮುಖ್ಯವಾದವು ಅಖಿಲ ಭಾರತ ಖಾದಿ ಗ್ರಾಮೋದ್ಯೋಗ ಆಯೋಗ, ಅಖಿಲ ಭಾರತ ಕೈಮಗ್ಗ ಮಂಡಳಿ,ಅಖಿಲ ಭಾರತ ಕುಶಲ ಕೈಗಾರಿಕೆಗಳ ಮಂಡಳಿ,ಅಖಿಲ ಭಾರತ ತೆಂಗಿನ ನಾರಿನ ಕೈಗಾರಿಕಾಭಿವೃದ್ದಿ ಮಂಡಳಿ ಮತ್ತು ಕೇಂದ್ರ ರೇಷ್ಮೆ ಮಂಡಳಿ ಇತ್ಯಾದಿ. ಇವೆಲ್ಲವೂ ರಾಜ್ಯಮಟ್ಟದಲ್ಲಿ ತಮ್ಮ ಮಂಡಳಿಗಳನ್ನು ಹೊಂದಿದ್ದು ಸಂಬಂಧಿಸಿದ ಕೈಗಾರಿಕಾಭಿವೃದ್ದಿಗೆ ಶ್ರಮಿಸುತ್ತಿವೆ. ಈ ಮಂಡಳಿಗಳ ಮೂಲಕ ಸಕಾ೯ರ ಗೃಹಕೈಗಾರಿಕೆಗಳಿಗೆ ಆಥಿ೯ಕ ನೆರವನ್ನು ಸಾಲ ಮತ್ತು ಸಹಾಯಧನದ ಜೊತೆಗೆ ತಾಂತ್ರಿಕ ಸಹಾಯ ಮತ್ತು ತರಬೇತಿ ಸೌಲಭ್ಯಗಳನ್ನು ಒದಗಿಸಿಕೊಡುವುದರ ಮೂಲಕ ಗೃಹಕೈಗಾರಿಕೆಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತಿದೆ. ಪ್ರಾಚ್ಚೀನ ಕಾಲದಿಂದ ಗೃಹಕೈಗಾರಿಕೆಗಳು ದೇಶದ ಆಥಿ೯ಕ ಚಟುವಟಿಕೆಯ ಮುಖ್ಯ ಅಂಗವಾಗಿದ್ದವು. ಆದರೆ ಬ್ರಿಟಿಷರ ಆಡಳಿತ ಕಾಲದಲ್ಲಿ ಭಾರತದ ಇತರ ಕಡೆಗಳಂತೆಯೇ ಕನಾ೯ಟಕ ರಾಜ್ಯದ ಗೃಹಕೈಗಾರಿಕೆಗಳು ಸರಿಯಾದ ಪ್ರೋತ್ಸಾಹ