ಪುಟ:Mysore-University-Encyclopaedia-Vol-6-Part-9.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಲ್ಬರ್ಗ

ಪರ್ವತಾಬಾದ್ ಮತ್ತು ಪಟ್ಟಣ ಈ ಆರು ಹೋಬಳಿಗಳೂ ೧೪೪ ಗ್ರಾಮಗಳೂ ಇವೆ.ಈ ತಾಲ್ಲೂಕಿನ ವಿಸ್ತೀರ್ಣ ೧,೭೩೧.೬ಚ.ಕಿಮೀ. ಜನಸಂಖ್ಯೆ ೪,೨೬,೩೯೮(೨೦೧೧).

ತಾಲ್ಲೂಕಿನ ಹೆಚ್ಚು ಭಾಗ ಬೂದು ಮತ್ತು ಕಪ್ಪುಮಿಶ್ರಿತ ಅಥವಾ ಆಳವಾದ ಕಪ್ಪುಮಣ್ಣು ಇರುವ ಮಟ್ಟಸ ಪ್ರದೇಶ.ಹೆಚ್ಚಿನ ಬೆಟ್ಟಗಳಾಗಲಿ ಏರುತಗ್ಗುಗಳಾಗಲೀ ಇಲ್ಲ.ಕೆಲವು ಭಾಗಗಳಲ್ಲಿ ಮರಳು ಮಿಶ್ರಿತ ಕೆಂಪುಮಣ್ಣಿನ ಭೂಮಿ ಕಂಡುಬರುತ್ತದೆ.ತಾಲ್ಲೂಕಿನ ಸರಸಾರಿ ವಾರ್ಷಿಕ ಮಳೆ ೭೫೩.೩೦ಮಿಮೀ.ತಾಲ್ಲೂಕಿನಲ್ಲಿ ಜೋಳ,ಸೇಂಗಾ ,ಸಜ್ಜೆ,ಗೋದಿ,ತೋಗರಿ,ಹತ್ತಿ,ಮೆಣಸಿನಕಾಯಿ ಬೆಳೆಯುತ್ತಾರೆ.ವ್ಯವಸಾಯದ ಜೊತೆಗೆ ಪಶುಪಾಲನೆಯೂ ಇದ್ದು ಅವುಗಳ ರಕ್ಷಣೆಗೆ ಸರ್ಕಾರಿ ಪಶುವೈದ್ಯಾಲಯಗಳಿವೆ.

ತಾಲ್ಲೂಕಿಗೆ ರೈಲು ಸಂಪರ್ಕವೂ ಇವೆ.ಜಿಲ್ಲೆಯ ಎಲ್ಲ ಭಾಗಗಳೂ ವಾಹನ ಸಂಪರ್ಕ ಪಡೆದಿವೆ.ತಾಲ್ಲೂಕಿನಲ್ಲಿ ಬ್ಯಾಂಕ್,ವಿದ್ಯುತ,ಅಂಚೆ-ತಂತಿ,ದೂರವಾಣಿ ಮುಂತಾದ ಸೌಲಭ್ಯಗಳಿವೆ.

ಪಟ್ಟಣ:ಗುಲ್ಬರ್ಗ ವಿಭಾಗದ,ಜಿಲ್ಲೆಯ,ತಾಲ್ಲೂಕಿನ ಮತ್ತು ಹೋಬಳಿಯ ಆಡಳಿತ ಕೇಂದ್ರ.ಇತಿಹಾಸಪ್ರಸಿದ್ದ ನಗರ,ವಿದ್ಯಾಕೇಂದ್ರ,ಚೆನೈ-ಮುಂಬಯಿ ಬ್ರಾಡ್ ಗೇಜ್ ರೈಲು ಮಾರ್ಗದಲ್ಲಿದ್ದು ಬೆಂಗಳೂರಿನಿಂದ ೬೨೬ಕಿಮೀ ದೂರದಲ್ಲಿದೆ.

ಗುಲ್ಬರ್ಗ ನಗರಕ್ಕೆ ಕಲ್ಬುರ್ಗಿ ಎಂಬ ಹೆಸರು ಸ್ಥಳೀಕರಲ್ಲಿ ಹೆಚ್ಚು ಪ್ರಚಾರದಲ್ಲಿದೆ.೧೧ನೆಯ ಶತಮಾನದ ಶಾಸನಗಳಲ್ಲಿ ಕಲುಂಬರಗೆ ಎಂದು ಹೆಸರಿಸಲಾಗಿದೆ.ರಾಯವಾಚಕಮು ಎಂಬ ತೆಲುಗು ಗ್ರಂಥದಲ್ಲಿ ಮತ್ತು ಕೆಳದಿನೃಪವಿಜಯದಲ್ಲಿ ಕಲುಬರಿಗ ಎಂಬ ರೂಪ ಕಾಣಿಸಿಕೊಳ್ಳುತ್ತದೆ.ಕಲುಂಬರಗ ಎಂಬ ಪ್ರಾಚೀನ ರೂಪವೇ ಕಲ್ಬುರ್ಗಿಯಾಗಿ ರೂಪಾಂತರಗೊಂಡಿರಬೇಕು. ಗುಲ್ಬರ್ಗ ಎಂಬ ಪದ ಮಹಮ್ಮದಿಯರ ಅಳಿಕೆಯಲ್ಲಿ ಪ್ರಚಾರಕ್ಕೆ ಬಂತು.ಗುಲ್ಬರ್ಗ ಎಂದರೆ ಹೂದೋಟ.

ಗುಲ್ಬರ್ಗ ನಗರ ಆಲೆಯಂತೆ ಏರಿಳಿತಗಳಿಂದ ಕೂಡಿದ ಕರಿ ಎರೆ ಮಣ್ಣಿನ ಪ್ರದೇಶದಲ್ಲಿ ಸು.೧೬ಚ.ಕಿಮೀ ವಿಸ್ತಾರದಲ್ಲಿ ಹಬ್ಬಿದೆ.ಇಲ್ಲಿರುವ ಮನೆಗಳಲ್ಲಿ ಹೆಚ್ಚಿನವು ಕಲ್ಲುಕಟ್ಟಡಗಳು.ರೈಲ್ವೆ ನಿಲ್ದಾಣ ಹಳೆಯ ನಗರದಿಂದ ಸ್ವಲ್ಪ ದೂರದಲ್ಲಿದೆ.ರೈಲ್ವೆ ನಿಲ್ದಾಣದಿಂದ ಒಂದೂವರೆ ಕಿಮೀ ದೂರದೊಳಗೆ ಐವಾನ ಎ ಶಾಹೀ ಬಂಗಲೇ ಇದೆ.ಸರ್ಕಾರಿ ಪಾಲಿಟೆಕ್ನಿಕ್,ಎಂಜಿನಿಯರಿಂಗ್ ಕಾಲೇಜು ಮತ್ತು ವಿದ್ಯಾರ್ಥಿನಿಲಯ ಕಟ್ಟಡಗಳು ರೈಲು ನಿಲ್ದಾಣದ ಬಳಿಯಲ್ಲೇ ಇವೆ.ಶಾಹಪುರ ರಸ್ತೆಯ ಬಳಿಯಲ್ಲಿ ಸರ್ಕಾರಿ ಕಚೇರಿಗಳು ಸರ್ಕಾರಿ ನೌಕರರ ವಸತಿಗೃಹಗಳೂ ಇವೆ.

ರೈಲ್ವೆ ನಿಲ್ದಾಣದಿಂದ ೪ಕಿಮೀ ದೂರದಲ್ಲಿರುವ ನೆಹ್ರೂಗಂಜ್ ಮುಖ್ಯ್ ವ್ಯಾಪಾರ ಕೇಂದ್ರ ಇಲ್ಲಿ ಅನೇಕ ಅಂಗಡಿಗಳೂ ಉಪಾಹಾರಗೃಹಗಳೂ ಇವೆ.ಕಾರಾಗೃಹ ಇರುವುದು ಮುಖ್ಯ ಪೇಟೆಬೀದಿಯ ರಸ್ತೆಯ ಬದಿಯಲ್ಲಿ.ಸ್ಟೇಷನ್ ಬಜಾರ ಸುತ್ತ ಮತ್ತು ಜಗತ್ ವಿಭಾಗದಲ್ಲಿ(ಚಾಳ್ ಗಳು) ವಾಸಗೃಹಗಳು ಇವೆ.ಈಚೆಗೆ ಹೊಸಹೊಸ ಬಡಾವಣೆಗಳು ಬೆಳೆಯುತ್ತಿವೆ.ರೈಲ್ವೆ ನಿಲ್ದಾಣದಿಂದ ಮುಖ್ಯ ಪೇಟೆಬೀದಿಗೆ ಹೋಗುವ ಮಾರ್ಗದಲ್ಲಿರುವ ಮಹಬೂಬ್ ಗುಲ್ಷನ್ ಒಂದು ಸುಂದರ ಉದ್ಯಾನ.ಐವಾನ್ ಎ ಶಾಹೀಯ ಸುತ್ತ ಒಂದು ಉದ್ಯಾನವಿದೆ.

ನಗರ ಔದ್ಯಮಿಕವಾಗುಯೂ ಬೆಳೆಯಲಾರಂಭಿಸಿದೆ.ಇಲ್ಲಿನ ಎಂ.ಎಸ್.ಕೆ ಮಿಲ್ಸ್ ಎಂಬ ಹತ್ತಿ ಗಿರಣಿ ಕಾರ್ಖಾನೆಗಳಲ್ಲಿ ದೊಡ್ಡದು.ಅಲ್ಲದೆ ಬೇಳೆ ತಯಾರಿಸುವುದು,ಮರ ಕಯ್ಯುವುದು,ಎಣ್ಣೆ ತೆಗೆಯುವುದು,ಬೀಡಿ ತಯಾರಿಕೆ ಮೊದಲಾದ ಇತರ ಉದ್ಯಮಗಳೂ ಇಲ್ಲಿವೆ.


ಗುಲ್ಬರ್ಗ ರೈಲು ನಿಲ್ದಾಣದ ಬಳಿಯಲ್ಲೇ ಬಸ್ ನಿಲ್ದಾಣ ಇದೆ.ಇಲ್ಲಿಂದ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಿಗೂ ರಾಜ್ಯದ ಮತ್ತು ಹೊರಗಿನ ಮುಖ್ಯ ಸ್ಥಳಗಳಿಗೂ ವಾಹನ ಸಂಪರ್ಕವಿದೆ.ಸುತ್ತಣ ಪ್ರದೇಶದೊಳಗಿನ ಉತ್ತಮ ಸಂಪರ್ಕದಿಂದಾಗಿ ಗುಲ್ಬರ್ಗ ವ್ಯಾಪಾರ ಕೇಂದ್ರವೂ ಆಗಿದೆ.


ಗುಲ್ಬರ್ಗದಲ್ಲಿ ಅನೇಕ ಶಾಲಾಕಾಲೇಜುಗಳೂ ಆಸ್ಪತ್ರೆ ಮುಂತಾದವೂ ಉಂಟು.ಸರ್ಕಾರಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು,ಶರಣಬಸವೇಶ್ವರ ಕಾಲೇಜು,ಸೇಠ್ ಶಂಕರಲಾಲ್ ಲಾಹೋಟಿ ಲಾ ಕಾಲೇಜು,ಎಂಜಿನಿಯರಿಂಗ್ ಕಾಲೇಜು,ವೈದ್ಯಕೀಯ ಕಾಲೇಜು-ಇವು ಕೆಲವು ಮುಖ್ಯ ಶಿಕ್ಷಣ ಸಂಸ್ಥೆಗಳು. ಗುಲ್ಬರ್ಗ ವಿಶ್ವವಿದ್ಯಾಲಯ ಇಲ್ಲಿ ಸ್ಥಾಪಿತವಾಗಿದೆ(೧೯೮೦).ಇಲ್ಲಿ ಕೇಂದ್ರ ವಿಶ್ವವಿದ್ಯಾಲಯವೂ ಇದೆ.ಗುಲ್ಬರ್ಗ ನಗರ ಎಲ್ಲ ಆಧುನಿಕ ಸೌಕರ್ಯಗಳನ್ನು ಹೊಂದಿದೆ.

ಶರಣಬಸವೇಶ್ವರ ದೇವಾಲಯ ಮತ್ತು ಖ್ವಾಜಾ ಬಂದೇ ನವಾಜರ ದರ್ಗಾ ಗುಲ್ಬರ್ಗದ ಪ್ರಮುಖ ಧಾರ್ಮಿಕ ಕೇಂದ್ರಗಳು.ಶರಣಬಸವೇಶ್ವರ ದೇವಾಲಯ ಇತ್ತೀಚಿನದಾದರೂ ಬಹು ಸುಂದರವಾಗಿ ರಚಿತವಾಗಿರುವ ವಾಸ್ತುಕೃತಿ.ಇಲ್ಲಿ ಪ್ರಸಿದ್ಧ ವೀರಶೈವ ಸಂತರಾದ ಶರಣಬಸವೇಶ್ವರ ಗೌರವಾರ್ಥ ವರ್ಷಂಪ್ರತಿ ಚೈತ್ರ ಬಹುಳ ಪಂಚಮಿಯಿಂದ ಹದಿನೈದು ದಿನಗಳ ಕಾಲ ಜಾತ್ರೆ ನಡೆಯುತ್ತದೆ,ಖ್ವಾಜಾ ಬಂದೇ ನವಾಜರ ದರ್ಗಾದಲ್ಲಿ ಪ್ರತಿವರ್ಷ ಜಿಕೈದಾ ತಿಂಗಳಿನಲ್ಲಿ ಮೂರು ದಿನಗಳ ಕಾಲ ಉರುಸ್ ನಡೆಯುತ್ತದೆ.ಈ ಎರಡು ಸಂದರ್ಭಗಳಲ್ಲೂ ಲಕ್ಷ ಲಕ್ಷಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ.

ಸಾಹಿತ್ಯ ಮತ್ತು ಜಾನಪದ ಕ್ಷೇತ್ರಕೆ ಈ ಜಿಲ್ಲೆ ಅಪೂರ್ವ ಕೊಡುಗೆ ನೀಡಿದೆ.ಕಡಿದಳ್ ಕೃಷ್ಣರಾವ್,ಎಂ.ಎಸ್.ಲಠ್ಠೆ,ಪಿ.ಕೆ.ಖಂಡೋಬ,ಚೆನ್ನಣ್ಣ ವಾಲೀಕಾರ,ತವಗ ಭೀಮಸೇನರವ್,ಗೀತಾ ನಾಗಭೂಷಣ,ಶೈಲಜಾ ಉಡಚಣ,ಎ.ಕೆ.ರಾಮೇಶ್ವರ,ಸೀತಾರಮ ಜಾಗೀರದಾರ ಇಅವರನ್ನು ಹೆಸರಿಸಬಹುದು.


ಗುಲ್ಬರ್ಗದಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳಿವೆ.ಇದು ಬಹಮನೀ ಅರಸರ ಮೊದಲ ರಾಜಧಾನಿಯಾಗಿದ್ದರಿಂದ ಕರ್ನಾಟಕದಲ್ಲಿರುವ ಭಾರತೀಯ ಇಸ್ಲಾಮೀ ಸಂಪ್ರದಾಯದಲ್ಲಿರುವ ಮೊದಲ ಕೃತಿಗಳೆಲ್ಲ ಈ ನಗರದಲ್ಲೇ ಇವೆ.ಆ ಕಾಲದಲ್ಲಿ ಕಟ್ಟಲಾದ ಗುಲ್ಬರ್ಗ ನಗರದ ಕೋಟೆ ೧೫ ಬುರುಜುಗಳನ್ನು ೨೦ ತಿಪಾಕಿ ಗೋಪುರಗಳನ್ನೂ ಅಳವಡಿಸಿಕೊಂಡು ನಗರವನ್ನು ಸುತ್ತುವರಿದಿರುವ ಬೃಹತ್ ಕಲ್ಲುಕಟ್ಟಡ.ರಾಜ ಗುಲ್ ಚಂದ್ ಎಂಬ ಹಿಂದು ದೊರೆ ಇದನ್ನು ಮೊದಲು ಕಟ್ಟಿದನೆಂಬುದು ಸ್ಥಳಪ್ರತೀತ.ಈತ ಚರಿತ್ರೆಗೆ ತಿಳಿಯದಿರುವ ವ್ಯಕ್ತಿಯಾದರೂ ಗುಲ್ಬರ್ಗ ನಗರ ಇಸ್ಲಾಮೀ ಆಳಿಕೆಯ ಪೂರ್ವದಲ್ಲೂ ಒಂದು ಮುಖ್ಯ ನಗರ ವಾಗಿದ್ದಿರ ಬೇಕೆಂಬುದು ಅಲ್ಲಿ ಕಂಡುಬಂದಿರುವ ಅನೇಕ ಹಿಂದು ದೇವಾಲಯಗಳ ಅವಶೇಷಗಳಿಂದಲೂ ಒಂದೆರಡು ಶಾಸನಗಳಿಂದಲೂ ತಿಳಿಯುತ್ತದೆ.ಇಲ್ಲಿಯ ಕೋಟೆ ಅಲಾಉದ್ದೀನ್ ಹಸನ್ ಬಹಮನೀಯ್(೧೩೪೭-೫೮) ಕಾಲದಲ್ಲಿ ವಿಸ್ತಾರಗೊಂಡಿತ್ತು.


ಗುಲ್ಬರ್ಗ ಕೋಟೆಯೊಳಗಿರುವ ದೊಡ್ಡ ಮಸೀದಿ ಅಪರೂಪ ಶೈಲಿಯಲ್ಲಿರುವ ದೊಡ್ಡ ಕಟ್ಟಡ.೨೧೬' ಉದ್ದ ಮತ್ತು ೧೭೬' ಅಗಲದ ಈ ಕಟ್ಟಡವು ೬ ಕಂಬಗಳು ಮೇಲೆ ಎತ್ತಿದ ಅನೇಕ ಗುಮ್ಮಟಗಳಿಂದ ಪೂರ್ಣವಾಗಿ ಅಚ್ಛಾದಿತವಾಗಿದೆ.ಈ ಮಸೀದಿಯನ್ನು ಮಹಮದ್ ಷಾ ಬಹಮನೀಯ ಆಳಿಕೆಯಲ್ಲಿ ೧೩೭೬ರಲ್ಲಿ ಕಟ್ಟಲಾಯಿತೆಂದೂ ಇದರ ಶಿಲ್ಪಿ ಇರಾನಿನ ಕ್ವಾಸ್ವಿನ್ ನ ನಿವಾಸಿ ರಫಿ ಎಂಬವನೆಂದೂ ಇಲ್ಲಿಯ ಒಂದು ಶಾಸನದಿಂದ ಗೊತ್ತಾಗುತ್ತದೆ.ಈ ಮಸೀದಿಯ ವಿಶಿಷ್ಟ ವಿನ್ಯಾಸವನ್ನು ಆಧರಿಸಿ ಇದು ಸ್ಪೇನಿನ ಕಾರ್ಡೋವದ ಪ್ರಸಿದ್ಧ ಮಸೀದಿಯನ್ನು ಹೋಲುತ್ತದೆ ಎಂದು ಹೇಳುವುದು ರೂಢಿ.ಈ ಮಸೀದಿಯಲ್ಲಿ ಪ್ರಾರ್ಥನಾ ಕೊಠಡಿ ಇರುವ ಪಶ್ಚಿಮ ಭಾಗ ಉಳಿದ ಭಾಗಕ್ಕಿಂತ ಎತ್ತರವಾಗಿದ್ದು ಅದರ ಮೇಲೆ ದೊಡ್ಡ ಗುಮ್ಮಟಗಳಿವೆ.