ಪುಟ:Mysore-University-Encyclopaedia-Vol-6-Part-9.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೃಹ ಮತ್ತು ಗೃಹಾಲಕರಣ

ಮಡಲಾಗಿರುತ್ತದೆ . ಈ ಹಾರುಗಳು ಬೊಂಬು, ಗಳುಗಳಿಂದ, ಆದ ಹಂದರಗಳು, ತೆಂಗಿನ ಗರಿಯಿಂದ ಹೆಣೆದ ಮಟ್ಟಾಳೆಯನ್ನು ಅಥವಾ ಮಣ್ಣಿನ ಅರೆಕೊಳವೆ ಆಕೃತಿಯ ನಾಡಹೆಂಚುಗಳನ್ನು ಮೇಲೆ ಮುಚ್ಚಲು ಉಪಯೋಗಿಸಲಗುತ್ತದೆ. ಕೆಲವೆಡೆ ಸೋಗೆ ಮತ್ತು ಹುಲ್ಲನ್ನೂ ಬಳಸುವುದುಂಟು. ಮಣ್ಣಿನ ತಡಿಕೆ ಅಥವ ಪುಟದ ಗೋಡೇಗಳನ್ನು ಆಯಾಕಾರದಲ್ಲಿ ಕಟ್ಟಿ ಒಂದೆ ಗೋಡೆಯನ್ನು ಎತ್ತರಕ್ಕ ಮಾಡಿ ಅದಕ್ಕೆ ಸಮಕೋನದಲ್ಲಿರುವ ಗೋಡೆಗಳನ್ನು ಇಳಿಜಾರಾಗಿರುವಂತೆ ಮಾಡಿದ ಒಪ್ಪಾರು ಕಟ್ಟಡಗಳೂ ಅಲ್ಲಲ್ಲಿ ಕಂಡುಬರುತ್ತವೆ. ಆದರೆ ಇಂತ ಕಟ್ಟಡಗಳನ್ನು ದನ,ಎಮ್ಮೆಗಳನ್ನು ಕೊಟ್ಟೆಗೆಯಾಗಿ ಉಪಯೋಗಿಸುವುದೇ ಹೆಚ್ಚು ಒಂದು ವಿಶಿ‌‌‌‍‍‍‍ಷ್ಟ ರೀತಿಯ, ವಿಶೇಷವಾಗಿ ಸ್ವಲ್ಪ ಸ್ಥಿತಿವಂತರಿಗೇ ಸೇರಿದ ತೋಟ್ಟಿಮನೆಗಳು ಕರ್ನಾಟಕದ ಹಲವೆಡೆಗಳಲ್ಲಿವೆ. ಇವು ರಚನಾವಿಧಾನದಲ್ಲಿ ಇತರವಂತೆಯೇ ಇದ್ದರೂ ವಿನ್ಯಾಸ ಮತ್ತು ಸ್ವಲ್ಪ ವ್ಯತ್ಯಾಸವಗಿರುತ್ತದೆ.ಇವುಗಳಲ್ಲಿ ಆಯ ಅಥವಾ ಚೌಕತಳ ವಿನ್ಯಾಸವಿದ್ದು ಮಧ್ಯೆ ಒಂದು ತೆರೆದ (ಮುಚ್ಚು ಇಲ್ಲದ) ತೊಟ್ಟಿ ಇರುತ್ತದೆ. ತೊಟ್ಟಿಯ ಸುತ್ತಲೂ ಪಡಸಾಲೆ, ಅದರ ಸುತ್ತಲೂ ಕೋಣೆಗಲನ್ನು ವ್ಯವಸ್ಥೆ ಮಾಡಲಾಗಿರುತ್ತದೆ. ಮುಂದೆ ಮುಂಬಾಗಿಲಿನ ಇಕ್ಕೆಲಗಳಲ್ಲಿ ಜಗಲಿಗಲಿರುತ್ತವೆ. ಈ ತೊಟ್ಟಿ ಮನೆಗಳು ವಿಶಲವಾಗಿದ್ದು. ಒಂದು,ಎರೆಡು ಅಥವಾ ಮೂರು,ಆರು, ಎಂಟು, ಹದಿನಾರು ಅಂಕಣಗಲ ತೊಟ್ಟಿಮನೆಗಳು ಇತ್ಯಾದಿಯಾಗಿ ವಿವಿಧ ಪರಿಮಾಣಗಳಲ್ಲಿರುತ್ತವೆ.






      ಹಸುರು ಗಿಡಗಳ ಮೂಲಕ ಕಂಗೊಳಿಸುತ್ತಿರುವ ಒಲ ಗೃಹಾಲಂಕರಣ 
   
  ಜನಪದ ಗೃಹಾಲಂಕರಣ ಬಹು ಸರಲ. ಸುಣ್ಣ ಬಳಿಯುವುದು ಸಾಮಾನ್ಯವಾಗಿ ಎಲ್ಲೆಡೆಯೂ ಕಂಡುಬರುತ್ತದೆ.ವರ್ಷಕ್ಕೊಮ್ಮೆ ಅಥವ ಹಬ್ಬಹರೆದಿನಗಳಲ್ಲಿ ನಿರಿನಲ್ಲಿ ಸುಣ್ಣವನ್ನು ಗಟ್ಟಿಯಾಗಿ ಕಲೆಸಿ,ಸಣ್ಣಕುಂಚದಿಂದ ತೊಟ್ಟಿಯ ಅಂಚು, ಗೋಡೆಯ ಕೆಲಭಾಗ ಕಂಬದ ಕೆಳಗೆ ನೆಲವನ್ನು ಬಿಟ್ಟು ಒಂದಂಗುಲ ಎತ್ತರಕ್ಕೆ ಒಂದೆರೆಡು ಇಂಚು ಅಗಲದ ಪಟ್ಟಿಗಳನ್ನೆಳೆಯುವ ರೂಢಿ  ಅಲ್ಲಲ್ಲಿ ಕಂಡುಬರುತ್ತದೆ. ಹಳ್ಳಿಗಳಲ್ಲಿ ಇದಕ್ಕೆ ಕಿರುಸುಣ್ಣ ಎಂದು ಹೇಳುತ್ತಾರೆ. ಚ್ಂದ್ರದಿಂದ ರ್ಂಗೋಲಿ ಬಿಡುವುದು ಹಳ್ಳಿಗರ ಗೃಹಾಲ್ಂಕರಣದ ಮತ್ತೊಂದು ವಿಧಾನ. ಚಂದ್ರವನ್ನು ನೀರಿನಲ್ಲಿ ಕರಗಿಸಿ, ತೊಟ್ಟಿ ಮನೆಗಳಲ್ಲಿ ಈಚಲುಗರಿಯ ಸೋಗೆಗಳಿಂದ ಮಾಡಿದ ಕುಂಚದ ಮೂಲಕ ಅಚ್ಚುಕಟ್ಟಾಗಿ ಎರಡೆರಡು ಎಳೆಗಳನ್ನು ಎಲೆಯುತ್ತಾರೆ. ಗ್ರಾಮಂತರ ಜನ ಇದನ್ನು ಕರ್ಲ್ಲಿ(ಕರ) ಬಿಡುವುದು ಎನ್ನುತ್ತಾರೆ. ಕೆಮ್ಮಣ್ಣಿನಿಂದ ಹೊಸ್ತಿಲು ಸಾರಿಸುವುದು ಗೃಹಲಂಕರಣದ ಮತ್ತೊಂದು ವಿಧಾನ. ಧೂಳಿನಂತಿರುವ ಕೆಮ್ಮಣ್ಣನ್ನು ನೀರಿನಲ್ಲಿ ಗಟ್ಟಿಯಾಗಿ ಕಲಸಿ ಮನೆಯ ಹೊಸ್ತಿಲು ಮತ್ತು ಬಾಗಿಲಿನ ಚೌಕಟ್ಟಿನ ತಳಭಾಗಗಳಿಗೆ ಆರು ಅಂಗುಲ ಎತ್ತರಕ್ಕೆ, ಸಾರಿಸುತ್ತಾರೆ. ನೆಲಕ್ಕೆ ಸಗಣಿ ಸಾರಿಸುವುದು ಹೆಚ್ಚು ಮಲೆನಾಡು ಮತ್ತುಕರವಳಿ ಪ್ರದೇಶದಲ್ಲಿ ಮಣ್ಣಿನ ನೆಲಕ್ಕೆ ಒಂದಂಗುಲ ಎತ್ತರಕ್ಕೆ ಮರಳು ಹಾಗೂ ಮಣ್ಣು ತುಂಬಿ, ಅದರ ಮೇಲೆ ಗೇರುಬಿಜದಎಣ್ಣೆಯನ್ನು ಬಳಿದು ಸಾರಣೆ ಮಾಡುತ್ತಾರೆ. ಅನಂತರ ಸಾಕಷ್ಟು ತೆಂಗಿನ ಹೂವನ್ನು ತೆಗೆದು, ತೆಂಗಿನ ಸಿಪ್ಪೆಯ ಸಹಾಯದಿಂದ ನೆಲವನ್ನು ಉಜ್ಜಿದರೆ, ನೆಲವು ಕರ್ರಗಿನ ಸಿಮೆಂಟಿನಂತೆ ಮಿರುಗುತ್ತದೆ. ಇದು ಗುದಡಿಸಿಲುಗಳ ಅಂದವನ್ನು ಹೆಚ್ಚಿಸುತ್ತದೆ 










         ಮಂಗಳೂರಿನ ವೃತ್ತಾಕಾರದ ವಿಶಿಷ್ತ ಮಹಡಮನೆ
  ಕೆಲವೆಡೆ ಗೊಂಬೆಗಳಿಂದ ಮನೆಗಲನ್ನು ಸಿಂಗರಿಸುವ ರೂಢಿ ಇದೆ. ಮಣ್ಣಿಣಿಂದ ಮಾಡಿ ಬಣ್ಣ ಹಚಿದ ಗಿಳಿ, ಆನೆ, ಬಸವ, ಹುಲಿ, ಜಂಕೆ, ಮುಂತಾದ ಗೊಂಬೆಗಳನ್ನು ನಡುವೆ ಕೃಷ್ಣ, ಅಕ್ಕಪಕ್ಕದಲ್ಲಿ ಮರದ ಗಿಳಿಗಳು, ಹಾಗೆಯೇ ಬಸವ, ಹುಲಿಮುಖ, ಆನೆಮುಖ, ಜಂಕೆಮುಖ ಹೀಗೆ ಸಾಲಾಗಿ ಗೋಡೆಗಳಿಗೆ ನೇತುಹಾಕಿ ಗೃಹವನ್ನು ಅಲಂಕರಿಸುತ್ತಾರೆ. ಕೆಲವು ಮನೆಗಳಲ್ಲಿ ಮರದಿಂದ ಮಾಡಿದ ಕುದುರೆಮುಖವನ್ನು ಗೋಡೆಗೆ ಅಂಟಿಸಿ ಅದರ ಅಕ್ಕಪಕ್ಕಗಳಲ್ಲಿ ಗಿಳಿಗಳನ್ನು ಅಂಟಿಸುವುದುಂಟು  ಜಿಂಕೆಕೊಂಬನ್ನು ನಯಗೊಳಿಸಿ ಒಳ್ಳೆಯ ಮರದ ಹಲಗೆಯಲ್ಲಿ ಪ್ರಾಣಿಮುಖದ ಆಕಾರ ಬರುವಂತೆ ರೂಪಿಸಿ ಅದರಲ್ಲಿ ಕೊಂಬನ್ನು ಸೇರಿಸಿ ತೂಗುಹಾಕುವುದುಂಟು. ಮೂರು ಗಿಳಿಗಳನ್ನೊಳಗೊಂಡು ನಿಲುವನ್ನು ಗೋಡೆಗೆ ತೂಗುಹಾಕುವುದು ಉಂಟು. ಬೇಟೆಯ ಹವ್ಯಾಸವುಳ್ಳವರ ಮನೆಗಳಲ್ಲಿ ಹುಲಿ, ಸಿಂಹ ಚರ್ಮವನ್ನೂ ಕಾಡುಕೋಣದ ಕೊಂಬು, ಆನೆಯ ದಂತ ಇವುಗಳನ್ನೂಗೋಡೆಗೆ ಅಲಂಕಾರವಾಗಿ ತೂಗುಹಾಕುವುದಂಟು. ಬತ್ತದ ಗೊನೆಗಳು ಚೆನ್ನಾಗಿ ವಾಗಿದಾಗ, ತೆನೆಗಳನ್ನು ಕತ್ತರಿಸಿ, ಅವುಗಳನ್ನು ಒಂದೇ ಸಮನಾಗಿ ಜೋಡಿಸಿ, ಹೆಣೆದು ಗಂಟೆಯಾಕಾರದ ಗುಚ್ಚವನ್ನು ತಯಾರಿಸಿ ದೇವರ ಕೋಣೆಯಲ್ಲಿ ದೇವರ ಪಟದ ಆ ಕಡೆ ಈ ಕಡೆಗಳಲ್ಲಿ ತೊಗಿಸುವುದುಂಟು. ಬತ್ತದ