ಪುಟ:Mysore-University-Encyclopaedia-Vol-6-Part-9.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗುಲ್ಮ ರೋಗಗಳು

ಪ್ರತ್ಯೋಕಿಸಲ್ವಟ್ಟು ಆ ರಾಸಾಯನಿಕ ರಕ್ತಗತವಾಗಿಯೋ ರಕ್ತಪರಿಚಲನೆಯ ಮೂಲಕ ಕಣಸಂಚಾರದಿಂದಲೋ ಎಲುಬಿನ ಕೆಂಪು ಮೆಜ್ಜೆಗೆ ತಲಪಿ ಅಲ್ಲಿ ಹೊಸ ಹೀಮೋಗ್ಲೋಬಿನ್ನಿನ ಸಂಯೋಜನೆಯಲ್ಲಿ ಪಾಲುಗೊಳ್ಳುತ್ತದೆ.ಕಬ್ಬಿಣ ಸಂಯುಕ್ತಗಳು ಹೆಚ್ಚು ಪರಿಮಾಣದಲ್ಲಿದ್ದರೆ ಕಣಭುಂಜಕ ಜೀವಕಣಗಳಲ್ಲಿ ಅವುಗಳ ಶೇಖರಣೆಯಾಗುತ್ತದೆ.ಹೀಮೋಗ್ಲೋಬಿನ್ನಿನ ವರ್ಣದ ಅಂಶ ಬಿಲಿರೂಬಿನ್ ಎಂಬ ವರ್ಣ ವಸ್ತುವಾಗಿ ಮಾರ್ಪಟ್ಟು ರಕ್ತಗತವಾಗಿ ರಕ್ತಪರಿಚಲನೆಯಿಂದ ಯುಕೃತ್ರನ್ನು ಸೇರಿ ಅಲ್ಲಿ ವಿಸರ್ಜಿತ ವಸ್ತುವಾಗಿ ರಕ್ತದಿಂದ ಹೊರದೊಡಸಲ್ವಡುತ್ತದೆ.ಇಷ್ಟಲ್ಲದೆ ಈ ಸ್ಥಳದಲ್ಲಿ ವಿಷಾಣುಗಳು ಮತ್ತು ಅನ್ಯವಸ್ತುಕಣಗಳು ಪ್ರತಿರೋಧಕ ವಸ್ತುಗಳ ಉತ್ವತ್ತಿಗೆ ಕಾರಣವಾಗುತ್ತವೆ.ಗುಲ್ಮದ ಕಣಭುಂಜಕ ಜೀವಕಣಗಳು ಕೆಂಪು ಕಣಗಳ ಭಿದ್ರಗಳನ್ನು ಭುಂಜಿಸುವ ಬದಲು ಇಡೀ ಮತ್ತು ಉಪಯುಕ್ತವಾದ ಕೆಂಪು ರಕ್ತಕಣಗಳನ್ನೇ ಕಬಳಿಸಬಹುದು ಇದರಿಂದ ರಕ್ತ ಕಣಹೀನತೆಯುಂಟಾಗಬಹುದು.ಹಾಗೆ ತಟ್ಟೆಕಣಗಳ (ಪ್ಲೇಟ್ ಲೆಟ್ಸ್) ಬಹುವಾದ ಕಬಳಿಕೆಯಿಂದ ರಕ್ತಸ್ರಾವ ಸಂಭಾವ್ಯತೆಗಳು ಉಂಟಾಗಬಹುದು.ವಿರ್ಷಾಋಗಳು ಪ್ರಬಲವಾಗಿದ್ದರೆ ಕಣಭುಂಜಕ ಕಣಗಳೇ ನಾಶವಾಗಿ ಗುಲ್ಮದ ಗಾತ್ರ ಕಡಿಮೆಯಾಗಗಬಹುದು.ವಿಷಾಣು ಸೋರಿಕು ಹಿಡಿತಕ್ಕೆ ಬಂದು ರೋಗ ಗುಣಮುಖವಾದಾಗ ಗುಲ್ಮ ಮೊದಲಿನ ಗಾತ್ರಕ್ಕೆ ಬೆಲೆಯುತ್ತದೆ.ಹೀಗೆ ಗುಲ್ಮದ ಅಂಶಗಳ ಪುನರುತ್ವತ್ತಿಯಾಗುವಾಗ ಅದರಲ್ಲಿನ ಶ್ವೇತ ಕಣಗಳು-ದುಗ್ಧರಸಕಣ ಮತ್ತು ಮಾನೋಸ್ಮೆಟುಗಳು-ಪ್ರಧಾನ ಪಾತ್ರ ವಹಿಸಿ,ಅವೇ ಬೇರೆ ಕಣಗಳಾಗಿ ಮಾರ್ಪಡುವುದು ಕಂಡಬಂದಿದೆ.ಹೀಗೆ ಅದ ಕಣಗಳಲ್ಲಿ ಕಣಭಂಜಕ ಕಣಗಳು ಬಹುವಾಗಿರುತ್ತವೆ.ಇವುಗಳ ಅಧಿಕ್ಯದಿಂದ ಗುಲ್ಮದ ಗಾತ್ರ ಹೆಚ್ಚಾಗಬಹುದು.ಮೇಲೆ ಹೇಳಿರುವಂತೆ ಕಬ್ಬಿಣ ಸಂಯುಕ್ತಗಳು ಕಾರಣಾಂತರದಿಂದ ಅತ್ಯಧಿಕವಾಗಿದ್ದರೂ ಅವುಗಳ ಶೇಖರಂಣೆಗೆ ಕಣಭುಂಜಕ ಕಣಭುಂಜಕ ಕಣಗಳ ಅಗತ್ಯ ಉಂಟಾಗಿ ಅವು ವಿಶೇಶವಾಗಿ ಉತ್ವತ್ತಿಯಾಗುತ್ತವೆ.ಆಗಲೂ ಗುಲ್ಮದ ಗಾತ್ರ ವೃದ್ದಿ ಕಂಡುಬರುತ್ತದೆ.ಗುಲ್ಮದ ಗಾತ್ರ ಅಗಾಧವಾಗಿದ್ದರೆ ಗೆಡ್ಡೆಹೊಟ್ಟೆ(ಸ್ಟ್ಲೀನೊಮೆಗಾಲಿ) ಕಂಡುಬರುತ್ತದೆ.ಗುಲ್ಮವೃದ್ದಿ ಮತ್ತು ಕಣಭುಂಜಕ ಕಣಗಳ ಹೆಚ್ಚಿನ ಉತ್ವತ್ತಿ ವಿಷಾಣು ಸೋಂಕುಂಟಾದಾಗ ಕಂಡುಬಂದರೂ ಕಣಭುಂಜಕಗಳು ಎಂದರೆ ಪ್ರಧಾನವಾಗಿ ಯಕ್ಳತ್ತು ಮತ್ತು ದುಗ್ದರಸನಾಳ ಗಂಟುಗಳಲ್ಲಿ ಕಣಭುಂಜಕ ಕಣಗಳ ಚಟುವಟಿಕೆ ಗಣನೀಯವಾಗಿ ಕಂಡುಬಂರುತ್ತದೆ.ಹಾಗೆಯೇ ಪ್ರತಿರೋಧಕ ವಸ್ತುಗಳ ಉತ್ವತ್ತಿಯೂ ಗುಲ್ಮದಲ್ಲಿ ಅಗಾಧವಾಗಿ ಕಂಡುಬಂದರೂ ಅದು ಅಲ್ಲಿ ಮಾತ್ರ ಜರಗುವ ಕ್ರಿಯೆಯಾಗಿರದೆ ಮಜ್ಜೆ ಮುಂತಾದ ಭಾಗಗಳಲ್ಲಿಯೂ ಕಂಡುಬರುತ್ತದೆ.ಗುಲ್ಮದ ಬಿಳೀ ಹೊರಣದ ಭಾಗದಲ್ಲಿ ದುಗ್ಧರಸಕಣಗಳು ಮತ್ತು ಮಾನೊಸೈಟುಗಳು ಉತ್ವತ್ತಿಯಾಗುತ್ತಿದ್ದರೂ ಈ ಉತ್ವತ್ತಿ ದೇಹದ ಇತರ ಕಡೆಗಳಲ್ಲಿಯೂ ಗಣನೀಯ ಪರಿಮಾಣದಲ್ಲಿ-ಪ್ರಧಾನಪಾಗಿ ಎಂದೇ ಹೆಳಬಹುದು-ಜರಗುತ್ತಿರುತ್ತದೆ.ಗುಲ್ಮದ ಸೈನುಸಾಯ್ಡ್ಗಳು ರಕ್ತವನ್ನು ತಡಹಿಡಿದು ಇಲ್ಲಿ ಶೇಖರಿಸಲ್ವಟ್ಟು ಕಡಿಮೆಯಾದಾಗ ಇಲ್ಲಿಂದ ಭರ್ತಿಯಾಗಬಹುದು.ಆದರೆ ಈ ಕ್ರಿಯೆಯೂ ಗುಲ್ಮದಲ್ಲಿ ಮಾತ್ರ ಕಾಣಬರದೆ ಚರ್ಮ,ಯಕೃತ್ರು,ಪುಪ್ಪ್ಪುಸಗಳಲ್ಲಿಯೂ ಕಾಣಬರುತ್ತದೆ.

   ಹೀಗೆ ಗುಲ್ಮದ ವಿಶಿಷ್ಟ ರಚನೆಯಿಂದ ದೇಹದ ನಾನಾ ಕಾರ್ಯಗಳು ಜರುಗಿಸಲ್ವಡುತ್ತಿದ್ದರೂ ಅವು ಗುಲ್ಮದಿಂದಲೇ ನಿರ್ವಹಿಲ್ವಡಬೆಕಾದ ಕಾರ್ಮಗಳಾಗಿರದೆ ಇರುವುದರಿಂದ ಅಗತ್ಯ ಬಿದ್ದರೆ ಗುಲ್ಮವನ್ನು ಶಸ್ಷಕ್ರಿಯೆಯಿಂದ ತೆಗೆದುಬಿಡಲು ಸಾಧ್ಯ ಆದರೂ ಕಶೇರುಕಗಳ ವಿಕಾಸದಲ್ಲಿ ಅಂದರೆ ಮತ್ಸ್ಯದ್ವಿಚರಿಗಳು,ಸರೀಸೃಪ ಪಕ್ಷಿಗಳು ಮತ್ತು ಸಸ್ತನಿಗಳಲ್ಲಿ ಗುಲ್ಮಕ್ರಮವಾಗಿ ಕ್ರಿಯಾವೈಶಿಷ್ಟ್ಯವನ್ನು ತೋರುವುದು ಗಮನೀಯ.ದವಡೆ ಇಲ್ಲದ ಮತ್ಸ್ಯಾಕಾರಿಗಳು ಮುಂತಾದ ಕಳದರ್ಜೆ ಮೀನುಗಳಲ್ಲಿ ಗುಲ್ಮವನ್ನು ಒಂದು ಅಂಗವಾಗಿ ಗುರುತಿಸುವುದು ಕೂಡ ಕಷ್ಟ ಅದರೆ ಮಿಕ್ಕ ಮೀನುಗಳಲ್ಲಿ,ಬೇರೆ ಅಂಗವಾಗಿ ಜೊತೆಗೆ ಕೆಂಪು,ಶ್ವೇತ ಮುಂತಾದ ಎಲ್ಲ ರಕ್ತಕಣಗಳ ಉತ್ವತ್ತಿ ಗುಲ್ಮದಿಂದ ತಪ್ಪಿ ಕೆಂಪು ಮಜ್ಜೆಗೆ ಸೀಮಿತವಾಗುತ್ತದೆ.ಹಾಗೆಯೇ ಸರೀಸೃಪಗಳು ಮತ್ತು ಪಕ್ಷಿಗಳಲ್ಲಿ ದುಗ್ಧರಸನಾಳ ಗಿಣ್ಣುಗಳಲ್ಲಿಯೂ ಗುಲ್ಮದಲ್ಲಿಯಂತೆಯೇ ಉತ್ವತ್ತಿಯಾಗುತ್ತವೆ.ಭ್ರೂಣದ ಬೆಳೆವಣೆಗೆ ಕಾಲದಲ್ಲಿ ಮಾನವರಲ್ಲಿ ಗುಲ್ಮ ಏಕಾಸದ ಈ ಘಟ್ಟಗಳನ್ನು ಕಾಣಬಹುದು.ಅಂತಯೇ ಮಾನವರಲ್ಲಿ ಕೆಲವು ರೋಗಗಳಲ್ಲಿ ಗಿಲ್ಮ ತನ್ನ ಏಕಾಸದ ಕೆಳಮಟ್ಟದ ಚಟುವಟಕೆ ಯನ್ನು ಅನುಸರಿಸಬಹುದು.

ಗುಲ್ಮ ರೋಗಗಳು: ಗುಲ್ಮ ರೋಗಗಳು ಸೋಕಿನಿಂದ ಅಥವಾ ಬೇರೆ ಕಾರಣಗಳಿಂದ ಉದ್ಳವಿಸಿ ತಾತ್ಕಾಲಿಕವಾಗಿ ಅಥವಾ ಬಹುಕಾಲಿಕವಾಗಿ ಇರುತ್ತವೆ.ರೊಗ ತಗಲಿದಾಗ ಗುಲ್ಮ ದೊಡ್ಡದಾಗುವುದು ಸರ್ವೇಸಾಮಾನ್ಯ ಗುಲ್ಮದ ಅಜನ್ಮ ಅವ್ಯವಸ್ಥೆಗಳಾಗಿ ಗುಲ್ಮ ಪೂರ್ಣವಾಗಿ ಲೋಪವಾಗಿರುವುದೂ ಬೆನ್ನು ಭಿತ್ತಿಗೆ ಅಂಟೆಕೊಂಡಿರುವುದೂ ಇಲ್ಲವೇ ಉದ್ದವಾದ ದಂಟಿನಿಂದ ನೇತುಹಾಕಿದಂತಿದ್ದು ಚಿಕ್ಕ ಕರುಳಿನಂತೆ ಸ್ಮಳಾಂತರಗೊಳ್ಳುವ ಹಾಗೆ ಇರುವುದೂ ಕಂಡುಬರುತ್ತದೆ.ಸಾಧಾರಣವಾಗಿ ಇವುಗಳಿಂದ ಎನು ತೊಂದರೆಯೂ ಇರುವುದಿಲ್ಲ.ಸ್ಮಳಪಲ್ಲಟವಾದ ಗುಲ್ಮ ಕೆಲವು ವೇಳೆ ಮತ್ತು ಸಾಮಾನ್ಯವಾಗಿ ದೊದ್ಡದಾದಾಗ ದೇಹಕ್ರಿಯೂ ವೈಪರೀತೈವನ್ನು ಉಂತುಮಾಟಬಹುದು.ವಿಷಾನು ಸೋಕಿನಿಂದ,ಮುಖ್ಯವಾಗಿ ವಿಷಮಶೀತಜ್ಜರಾಣು ಸೋಂಕಿನಿಂದ ಮತ್ತು ವೈರಸುಗಳ ಸೋಕಿನಿಂದ,ಗುಲ್ಮ ತಾತ್ಯಾಲಿಕವಾಗಿ ಊದಿಕೊಂಡು ಗೆಡ್ಡೆಯಂತೆ ಸಿಕ್ಕುತ್ತದೆ.ಬಹಕಾಲಿಕವಾದ ಗೆಡ್ಡೆ ಬಹುಕಾಲಿಕ ವಿಷಾಣು ಸೋಕುಗಲಾದ ಕ್ತಯ,ಪುರಂಗಿರೊಗ ಇವುಗಲಲ್ಲಿಯೂ ಅಣುಹೆವಿಕೃತ (ಪ್ರೋಟೋಸೋವ್ಸ್ ರೋಗಗಳಾದ ಮಲೆರಿಯ) ಕಾಳಜ್ಜರಗಳಲ್ಲಿಯೂ ಶಿಸ್ಟೋಸೋಮ ಕ್ಳತರೋಗದಲ್ಲಿಯೂ ಕಾಣಬರುತ್ತದೆ.ಗುಲ್ಮದಲ್ಲಿ ಆಗಾಧವಾಗಿ ರಕ್ತ ಶೇಖ್ರಣೆ ಆದಾಗಲೂ ಸಹಜವಾಗಿಯೇ ಅದು ದಪ್ಪವಾಗುತ್ತದೆ.ಪೋರ್ಟಲ್ ಅಭಿಧಮನಿಯಲ್ಲಿ ರಕ್ತಕರನೆ ಕಟ್ಟಕೊಂಡು ಇಲ್ಲವೇ ಬೇರೆ ರೀತಿಯಲ್ಲಿ ರಕ್ತಪ್ರವಾಹಕ್ಕ್ರ್ ಅಡುಚಣೆಯುಂಟಾದಾಗ ರಕ್ತ ಗುಲ್ಮದಲ್ಲಿ ಶೇಖರಣೆಯಾಗುತ್ತದೆ.ಏಡಿಗಂಅತಿಗಳಂಥ ಸ್ವಭಾವವುಳ್ಳ ಲ್ಯಾಕೀಮಿಯ,ಲಿಂಘೋಮ ಮುಂತಾದ ರೋಗಗಳಲ್ಲಿಯೂ ಗುಲ್ಮದ ಗೆಡ್ಡೆ ಕ/ದುಬರುತ್ತದೆ.ಸ್ನೆಗ್ಧ ಪದಾರ್ಥಗಳು ಗುಲ್ಮದಲ್ಲಿ ಶೇಖರಣೆಯಾಗುವ ಗಾಶರನ ವ್ಯಾಧಿ,ನೀಮನ್ಪಿಕ್ಕನ ವ್ಯಾಧಿ ಮೊಂಯಾದವುಗಳಲ್ಲಿಯೂ ಗುಲ್ಮ ಊದಿಕೊಂಡಿರುತ್ತದೆ.ಗುಲ್ಮದ ಗೆಡ್ಡೆಯಿಂದ ಕೆಲವು ವೇಳೆ ರಕ್ತಕನಹೀನತೆಯೂ ಕೆಲವು ವೇಳೆ ರಕ್ತಕಣತೆಯೂ(ವಾಲಿಸ್ಮೆಟೀಮೀಯಾ).