ಪುಟ:Mysore-University-Encyclopaedia-Vol-6-Part-9.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಲ್ವಾಡಿ ವೆಂಕಟರಾವ್ - ಗುಹವಾಸಿ ಪ್ರಾಣಿಗಳು ಉಂಟಾಗಬಹುದು. ದೇಹಪರೀಕ್ಷೆ ಮತ್ತು ರಕ್ತಪರೀಕ್ಷೇಯಿಂದ ಈ ಆನೇಕ ಸ್ಥಿತಿಗಳನ್ನು ಅರಿತುಕೊಳ್ಳಬಹುದು. ಕೆಲವು ಸಮಯ ವಿಶೇಷ ಪರೀಕ್ಷೆಗಳು ಅಗತ್ಯವಾಗುತ್ತವೆ. ರಕ್ತದ ವಿಷಾಣುಗಳನ್ನು ಪ್ರಯೋಗಸಾಲೆಯಲ್ಲಿ ನೆಟ್ಟು ಬೆಳೆಸುವುದು, ಎದೆಮೂಳೆಯೊಳಗೆ ಸೂಜಿ ಚುಚ್ಚೆ ಅದರೊಳಗಿನ ಮಜ್ಜೆಯನ್ನು ಪರೀಕ್ಷಿಸುವುದು,ಎದೆಯನ್ನು ಕ್ಷಕಿರಣ ಪರಿಕ್ಷೆಗೆ ಒಳಪಡಿಸುವುದು, ಗುಲ್ಮದ ಚೂರೊಂದನ್ನು ವಿಶೇಷ ಶಸ್ತ್ರಕ್ರಿಯೆಯಿಂದ ತೆಗೆದುಕೊಂಡು ಪರೀಕ್ಷಿಸುವುದು ಕ್ಷಯಾಣುಸೋಂಕಿಗೆ, ಫರಂಗಿ ರೋಗಾಣು ಸೋಂಕಿಗೆ ವಿಶಿಷ್ಡವಾದ ಪರೀಕ್ಷೆ ನೆಡೆಸುವುದು ಇತ್ಯದಿ ಕ್ರಮಗಳು ಬೇಕಾಗುತ್ತವೆ. ಇವುಗಳಿಂದ ರೋಗ ಮೂಲತಃ ಗುಲ್ಮದ್ದೋ ಅಥವಾ ಬೇರೆಡೆ ರೋಗದಿಂದ ಗುಲ್ಮ ಗೆಡ್ಡೆ ಕಟ್ಟಿಕೊಂಡಿದೆಯೋ ಎನ್ನುವುದನ್ನು ತಿಳಿಯಬಹುದು. ಗುಲ್ಮವೇ ರೋಗಕಾರಕವಾಗಿದ್ದರೆ ಅಥವಾ ಇತರ ರೋಗಗಳಿಂದ ಗುಲ್ಮ ಅತಿ ದೊಡ್ಡದಾಗಿ ತನ್ನ ಗಾತ್ರದಿಂದಲೇ ದೇಹ ಕಾ‍ರ್ಯಗಳಿಗೆ ಅನಾನುಕೂಲವಾಗುವಂತಿದ್ದರೆ ಗುಲ್ಮವನ್ನು ಶಸ್ತ್ರಕ್ರಿಯೆಯಿಂದ ತೆಗೆದು ಹಾಕಬೇಕಾಗುತ್ತದೆ. ಗುಲ್ವಾಡಿ ವೆಂಕಟರಾವ್ : ೧೮೪೪-೧೯೦೭. ಕನ್ನಡದಲ್ಲಿ ಆದ್ಯ ಸ್ವತಂತ್ರ ಸಾಮಾಜಿಕ ಕಾದಂಬರಿಕಾರ. ಇಂದಿನ ಉದುಪಿ ಜಿಲ್ಲೆಯ ಕುಂದಾಪುರದ ಗುಲ್ವಾಡಿ ಇತನ ಹುಟ್ಟೂರು. ಮನೆತನ ಸಾರಸ್ವತ ಬ್ರಾಹ್ಮಣರದು.ಬಿ.ಎ. ಪದವೀಧರನಾಗಿ ಗುಲ್ವಾಡಿ ಪೋಲಿಸ್ ಖಾತೆಯನ್ನು ಸೇರಿದ. ಈತನದು ಆ ವೃತ್ತಿಗೆ ತಕ್ಕ ಭೀಮಕಾಯ, ಗಂಭೀರ ಮುಖಮುದ್ರೆ ಪೋಲಿಸ್ ಕೆಲಸದಿಂದ ನಿವೃತ್ತನಾದ ಮೇಲೆ ಸಾಹಿತ್ಯ ರಚೆನೆಯಲ್ಲಿ ತೊಡಗಿದ. ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ ಈತನ ಮೊದಲ ಕಾದಂಬರಿ(೧೮೯೮). ಭಾಗೀರಥೀ, ಸೀಮಂತಿನಿ(೧೯೦೭) ಇವು ಇತರ ಕಾದಂಬರಿಗಳು. ಲಾದುಪ್ರಿಯಾಚಾರ್ಯ ಎಂಬುದು ವಿಡಂಬನಾತ್ಮಕ ಬರೆಹ. ಈತ ಮಿತ್ರೋದಯವೆಂಬ ಪತ್ರಿಕೆಯನ್ನು ನಡೆಸುತ್ತಿದ್ದುದಾಗಿಯೂ ತಿಳಿಯುತ್ತದೆ.