ಪುಟ:NOVU.pdf/೧೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು


೧೮೬

              ನೋವು

ಈಸು ಚೆನ್ನಾಗಿ ಬಲ್ಲ ಧೀರರಿಗೆ ಮಾತ್ರ ಆ ಆಟ, ಉಳಿದವರೆಲ್ಲ ದಂಡೆಯ ಮೇಲೆ ನಿಂತು ನೋಡುವ ಪ್ರೇಕ್ಷಕರು. ಒಮ್ಮೆಲೆ ಸುಭದ್ರೆ ಅಂದಳು : " ಇರು ನೀಲಿ, ನಾನೂ ಬತ್ತೀನಿ." ಅತ್ತೆಗೆ ಹೇಳಿದರೆ ಅವರು ಬೇಡವೆನ್ನೆಬಹುದು. ಗಂಜಿ ಕುಡಿದ ಮೇಲೆ ಹೋಗು ಎ೦ದು ತಡೆಯಬಹುದು. •. ಸುಭದ್ರೆ ಬಾಗಿಲೆಳೆದುಕೊಂಡಳು. " ಅಮಾವಿಗೆ ಯೋಳ್ವನ್ನಿ," ಎಂದಳು ನೀಲಿ.

  • ಶ್!

నేుభదేు చెుJణగినె లేుది లేు£3గాళి చేస్విటి ఔరళిటళు. ನೀಲಿಯನ್ನೂ ಆಕೆಯ ಮಕ್ಕಳನ್ನೂ ಸುಬ್ಬಿ ಹಿಂಬಾಲಿಸಿದಳು. ಪಾದಗಳನ್ನು ತೋಯಿಸುವಷ್ಟು ನೀರು ನಿಂತಿದ್ದ ಕಾಲುದಾರಿ.. ನಡೆಯಲು ಹೊಲದ ಏರಿಗಳು. ನೀಲಿಯ ಮಕ್ಕಳಿಗೆ ಸಂಭ್ರಮ. ದಿಗಂತ ಮುಟ್ಟಿದಂತೆ ಹಳ್ಳಿಯಿಂದಾಚೆಗೆ ಚಾಚಿತು ಕೆಂಪು ನೀರು. " ಮೂರಾಳೆತ್ತರ ನೀರು ಬಂದೈತೆ ಅಮಿಾ." ನೀಲಿಯ ಮಾತುಗಳೇನೋ ಸುಭದ್ರೆಯ ಕಿವಿದಂಡೆಗಳನ್ನು ತೋಯಿಸಿದುವು. ಆದರೆ ಒಳಕ್ಕೆ ಇಳಿಯಲಿಲ್ಲ. m - " G. వానికి నిలరాగే శాcసి చెంగిడిలఠారేJణ ?" —ನೀಲಿಯದೇ ಧ್ವನಿ. ಮಧ್ಯ ವಯಸ್ಸಿನ ಗಂಡ ಮಾದ ಆ ಕೆಲಸಕ್ಕೆ ಹೋಗುವುದಿಲ್ಲ, ಎಂದು ನೀಲಿ ಬಲ್ಲಳು. ಆದರೂ, ಹಳ್ಳಿಯ ಜವ್ವನಿಗರ ಹುಚ್ಚು ಸಾಹಸದ ಬಗೆಗೆ ಅವಳಿಗೆ ವಿವಂಚನೆ. ಆ ಮಾತೂ ಸುಭದ್ರೆಯ ಮೆದುಳನ್ನು ಮುಟ್ಟಲಿಲ್ಲ. ಹಳ್ಳಿಯ ಹೆಂಗಸರು ಇತರ ದಿನಗಳಲ್ಲಿ ಬಟ್ಟೆಯೊಗೆಯುವ ತಾಣಕ್ಕೆ ಅವರು ಬಂದರು. ಅಲ್ಲೆಯೊಂದು ಮಾವಿನ ಮರವಿತು, ಈಗ ಕಾಣಿಸುತ್ತಲಿದ್ದುದು ಅದರ ಕೆಲವು ಕೊಂಬೆಗಳು ಮಾತ್ರ. ಹಳ್ಳಿಯ ಜನ ಉದ್ದಕ್ಕೂ ನಿಂತಿದ್ದರು, ಪ್ರವಾಹದಲ್ಲಿ ల్వేలి ఒరెుత్త్కిద్దుదినే్ను ನೋಡುತ್ತ, నిరిగిళియువా డెబెణిశీయుల్లి శలవారిద్దాంు. "ಬಾಡ್ರೋ, ಬಾಡ್ರೋ," ಎಂಬ ಹಿರಿಯರ ಎಚ್ಚರಿಕೆ ಅವರನ್ನು ತಡೆಯುತ್ತಿತು. ಗೌಡರ ಮಗಳು ಬಂದುದು ಆ ಗದ್ದಲದಲ್ಲಾ ಇತರರ ಗಮನಕ್ಕೆ ಬಂದಿರಲಿಲ್ಲ. ಸ್ವತಃ ಶಾಮೇಗೌಡರಿನ್ನೂ ನದಿ ದಂಡೆಯನ್ನು ಮುಟ್ಟಿರಲಿಲ್ಲ. ಹೊ೬–ಎಂದರು ಜನ... ಮನೆಯ ಛಾವಣಿಗಳೇ ತೇಲಿ ಬರತೊಡಗಿದವು ಮೇಲಿನಿಂದ. ಯಾವುದೋ ಹಳ್ಳಿಯನ್ನು–ಒಂದು ಹಳ್ಳಿಯೋ ಎರಡೋ ಮೂರೋ–ಹಾಲು ಹೊಳೆ ಕೊಚ್ಚಿಕೊಂಡು ಬರುತ್ತಿತು. ನದಿಯ ನಡುವೆ ಬೆಳ್ಳಗೆ ಅದೇನೋ ಕಾಣಿಸಿದಂತಾಯಿತು ಸುಭದ್ರೆಗೆ.