ಪುಟ:NOVU.pdf/೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ
     ೧೦                        ನೋವು
        ಕೊಲೆ ? ಸಾವು ?
        ಯಾರ ಶವ ? ಯಾರದು ? 
        ಪ್ರಯತ್ನಪಟ್ಟು ಮತ್ತೊಮ್ಮೆ ಅದರತ್ತ ರಂಗಣ್ಣ ನೋಡಿದ. ಮೃತ ಶರೀರದ 
     ಮುಖ ಅವನಿಗೆ ಪರಿಚಿತವಾಗಿತ್ತು.       –ಮುನಿಯ ಸತ್ತುಹೋದ !
       –ಮುನಿಯನ ಕೊಲೆಯಾಗಿದೆ! 
        ಆಕಾಶ ತಲೆಯ ಮೇಲೆ ಕಳಚಿಬಿದ್ದಂತಾಯಿತು ಆರಾಮಕುರ್ಚಿಯಲ್ಲಿ ಕುಳಿತಿದ್ದ 
     ಶ್ರಿನಿವಾಸಯ್ಯನವರಿಗೆ. 
        ಐವತ್ತು ಚಿಲ್ಲರೆ ವರ್ಷಗಳ ಬದುಕಿನಲ್ಲಿ ರೈತರು' ಹಾವು ಕಡಿದು ಸತ್ತುದನ್ನು,ಹುಲಿ
     ತಿಂದು ಹತರಾದುದನ್ನು ಮಳೆಗಾಲದಲ್ಲಿ ನದಿಯ ಪಾಲಾದುದನ್ನು ಶ್ರಿನಿವಾಸಯ್ಯ ಕಂಡಿ
     ದ್ದರು.  ಆದರೆ ಕೊಲೆ – ಎಂದೂ ಕಣಿವೇಹಳ್ಳಿಯಲ್ಲಿ ಆಗಿರಲಿಲ್ಲ.
        ಅವರು ಅಂಗವಸ್ತ್ರವನ್ನು ಎಡ ಭುಜದಿಂದ ಎತ್ತಿ ಬಲ ಭುಜಕ್ಕೆ ವರ್ಗಾಯಿಸಿದರು.
     ಕಂಕುಳುಗಳಿಂದ ಬೆವರು ಹನಿಗೂಡಿ ಧಾರೆಗಟ್ಟಿ ಹರಿಯಿತು. ಹೊಟ್ಟೆ, ಎದೆಗೂಡನ್ನು
     ಸಂಧಿಸುವ ಪದರ ತೇವಗೊಂಡಿತು.. ದಂಗು ಬಡೆದಿದ್ದ ಮೆದುಳನ್ನು ತಟ್ಟಿ ಎಚ್ಚರಿಸುವವ
     ರಂತೆ ಬೊಕ್ಕತಲೆಯ ಮೇಲೆ ಅವರು ಅಂಗೈ ಆಡಿಸಿದರು. ಮಿಾಸೆ ಮತ್ತಷ್ಟು ಬಾಗಿ 
     ಜೋತಿತು.
        ಹೇಳಿದ ಮೇಲೂ ಇವರು ಸುಮ್ಮನಿರುವರಲ್ಲ ಎಂದು ರಂಗಣ್ಣ ವಿಸ್ಮಿತನಾದ.  
  ತನ್ನ ಕೆಲಸ ಮಾಡಿದಮೇಲೆ ತುಸು ಸಮಾಧಾನವೆನಿಸಿತಾದರೂ ಶ್ರಿನಿವಾಸಯ್ಯ ಗರಬಡಿದವರಂತೆ
     ಕುಳಿತೇ ಇದ್ದುದನ್ನು ಕಂಡು ಅವನಿಗೆ ಆಶ್ಚರ್ಯವಾಯಿತು.
        ಶ್ರಿನಿವಾಸಯ್ಯನ ಹುಬ್ಬಗಳು ಪರಸ್ಪರ ಹತ್ತಿರಕ್ಕೆ ಸರಿದುವು.  ಹಣೆ ನೆರಿಗೆ ಕಟ್ಟಿತು. 
        ಅವರು ಯೋಚಿಸಲೆತ್ನಿಸಿದರು:
        – 'ಈ ಹುಡುಗ ಇಲ್ಲಿ ಯಾಕಿದ್ದಾನೆ?'
        – 'ನನ್ನಲ್ಲಿಗೆ ಬಂದು ಯಾಕೆ ಈ ಸುದ್ದಿ ಮುಟ್ಟಿಸಿದ?'
        – 'ಊರಿಗೆ ಮುಖ್ಯಸ್ಥ ಪಟೇಲ ಶಾಮೇಗೌಡ; ನಾನಲ್ಲ. ಇಂಥ ಸಮಸ್ಯೆ ಏನು 
     ಬಂದರೂ ಇದಿರಿಸಬೇಕಾದವನು ಆತ, ನಾನಲ್ಲ.'
        "ಮಗೂ."
        ಶ್ರಿನಿವಾಸಯ್ಯ ವಾತ್ಸಲ್ಯದಿಂದ ರಂಗಣ್ಣನನ್ನು ಯಾವಾಗಲೂ ಸಂಬೋಧಿಸುತ್ತಿದ್ದುದು 
     ಆ ರೀತಿಯಾಗಿ.
       "ಏನ್ಸಾರ್ ?” 
       [ತಂದೆ ಹೇಳುವುದಿತ್ತು:  "ಅಯ್ಯನೋರಿದಾರೋ ನೋಡ್ಕೊಂಡ್ಬಾ." ಅಯ್ಯ-