ಪುಟ:Naavu manushyare - Niranjana.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತುಸು ವಿರಾಮ. ಆ ನಾಟಕದಲ್ಲಿ ಬಣ್ಣ ಹಚ್ಚಿಕೊಂಡಿದ್ದ ಒಬ್ಬರು ಮುಖ ತೊಳೆದು 'ಡೊಮಿಂಗೊ' ಪುಸ್ತಕದ ಪ್ರತಿಗಳೊಡನೆ ಬಂದರು. ಮುಂದಿನ ಸಾಲಿನಲ್ಲೇ ನೆಲದ ಮೇಲೆ ಕುಳಿತಿದ್ದ ನಾನು ಕೈಚಾಚಿದೆ. ಓಂದು ಪ್ರತಿ ಕೊಟ್ಟರು. ಆಗ ಮೂರನೆಯ ತರಗತಿಯ ವಿದ್ವಾರ್ಥಿ ನಾನು.ಅವಸರ ಅವಸರವಾಗಿ ಪುಟತಿರುವುತ್ತ ಓದಿದೆ. ಚಿಕ್ಕ ಪುಸ್ತಕ ಮುಗಿದೇ ಹೋಯಿತು! ಅದನ್ನು ಕೊಟ್ಟವರ ಸ್ವರ ಕೇಳಿಸಿತು: 'ನಾಲ್ಕಾಣೆ ಕೊಡಬೇಕು, ಆಯ್ತಾ?” ನನ್ನದು ಚಿಕ್ಕಾಸೂ ಇಲ್ಲದ ಜೇಬು. ಪುಸ್ತಕ ಮರಳಿಕೊಟ್ಟೆ. ನಾಚಿಕೆಯಿಂದಲೋ ಏನೋ, ಓದಿಯಾಯ್ತು' ಎನ್ನಲಿಲ್ಲ. ಆದರೆ, 'ನಿಮ್ಮ ಹೆಸರೇನು?'ಎಂದು ಕೇಳಿದೆ. ಉತ್ತರ: 'ಪಿ.ಕೆ.ನಾರಾಯಣ', 1 ಪಟೇಲರು ನಾಟಕಗಳ ಒಂದೊಂದು ಪ್ರತಿಕೊಂಡು,ಊರಿನ ಮಾನ ಉಳಿಸಿ ದರು!

'‍ಕಾವು ಊರಿನಿಂದ ಸುಳ್ಳಕ್ಕೆ ವಲಸೆ (1934,ಅಲ್ಲಿ ಶಿಕ್ಷಣದ ಮುಂದು ವರಿಕೆ, ಲೋವರ್ ಎಲಿಮೆಂಟರಿ ಕೊನೆಯ ಹಂತ ಮತು ಹಯರ್ ಎಲಿಮೆಂಟರಿ) ಈಗ ತಾಲೂಕು ಕೇಂದ್ರವಾಗಿರುವ ಸುಳ್ಯಕ್ಕೆ ಇರುವ ಮಹತ್ವ, ಆಗಿನ ಸುಳ್ಯಕ್ಕೆ ಇರಲಿಲ್ಲ. (ಬ್ರಿಟಿಷರಿಗೆ ಬಲಿಯಾಗುವುದಕ್ಕೆ ಮುಂಚೆ ಕೊಡಗಿನ ಒಂದು ಭಾಗವಾಗಿತ್ತು. ದಾಖಲೆಗಳಲ್ಲಿ ಆ ಕಾಲದಲ್ಲಿ ಅದರ ಹೆಸರು 'ಅಮರಸುಳ್ಳ') ಆ ದಾರಿಯಾಗಿ ಗಾಂಧೀಜಿ ಬಂದರು. ಜನಸಮುದಾಯ, ಜಯಕಾರ, ಬಡಕಲು ಜೀವದ ಭಾಷಣ, ಭ್ರಮೆಯ ಲೋಕ ಸೃಷ್ಟಿಯಾಗಿತು, ಕೆಲವೇ ಮಿನಿಟುಗಳಲ್ಲಿ, ಆಳುವ ವರ್ಗದ ಪಾಲಿಗೆ ಅರಿಭಯಂಕರನಾಗಿದ್ದ, ಆ ಅರ್ಧನಗ್ನ ಫಕೀರ.

'‍ಅದಕ್ಕೂ ಸುಮಾರು ಐದು ವರ್ಷ ಹಿಂದೆ ಅದೇ ದಾರಿಯಾಗಿ ಬಂದಿದ್ದ ಮದರಾಸು ಆಧಿಪತ್ಯದ (ಆಂಗ್ಲ) ಗವರ್ನರನಿಗೆ ಹಾರಹಾಕಲು ಕಾವು

1. ಮುಂದೆ ಪಿ.ಕೆ.ಯವರನ್ನು ನಾನು ಕಂಡದ್ದು 1941ರಲ್ಲಿ ಮಂಗಳೂರಲ್ಲಿ. ವಯಸ್ಸಿನಲ್ಲಿ ಹತ್ತು ವರ್ಷ ದೊಡ್ಡವರು.ಅಂದಿನಿಂದ ಬದುಕಿನುದ್ದಕ್ಕೂ ಗೆಳೆಯರಾಗಿ ದಿನಕಳೆದೆವು