ಪುಟ:Naavu manushyare - Niranjana.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಊರಿನ ಪ್ರತಿಷ್ಠಿತರು ಜುಟ್ಟಿನ ಪುಟ್ಟ ಬಾಲಕನಾದ ನನ್ನನ್ನು ಆರಿಸಿದ್ದರು. ಯಾರೋ ಕಂಟ್ರಾಕ್ಟುದಾರರ ಖಾಕಿ ಹ್ಯಾಟಿನಿಂದ ನನ್ನ ತಲೆಯನ್ನು ಅಲಂಕರಿ ಸಿದ್ದರು. ಹಾರ ಹಾಕಿಸುವ ಸಂಭ್ರಮದಲ್ಲಿ ಹ್ಯಾಟು ಕೆಳಗೆ ಬಿತ್ತು!ಏನೇ ಆಗಲಿ, ಗಾಂಧೀಜಿಯನ್ನು ಕಾಣುವುದಕ್ಕೆ ಮುನ್ನವೇ ನನಗೆ ತಿಳಿದಿತ್ತು ಆ ಮಾಲಾರ್ಪಣೆ ನಾನು ಎಸಗಿದ್ದ ದ್ರೋಹ ಎಂದು. ಅದಕ್ಕೆ ಪ್ರಾಯಶ್ಚಿತ್ರ ಅಪ್ಪಟ ಗಾಂಧೀವಾದಿಯಾಗುವದು! ಸುಲಭದ ಕೆಲಸ ಸುಳ್ಯ ಶಾಲೆಯ ವುುಖೆಸ್ಕೋಪಾಧಾಯರು ದೇಶಪ್ರೇಮಿಯಾಗಿದ್ದರು.

ದೇಶಪ್ರೇಮ ಪುಲಕಕ್ಕಾದರೆ, ಮನೋರಂಜನೆಗೆ ಯಕ್ಷಗಾನ. ಆಗ ನನ್ನ ಮೇಲೆ ಪ್ರಭಾವ ಬೀರಿದ ಒಂದು ಪಾತ್ರ ಅಕ್ರೂರನದು. ಚಿಣ್ಣರು ಒಂದಾಗಿ ಅಣಕಪ್ರಸಂಗ ಏರ್ಪಡಿಸಿದೆವು. ಅದರಲ್ಲಿ ನಾನು ಅಕ್ರೂರನಾದೆ. ಭಾಗವತರಿರಲಿಲ್ಲ. ಎಲ್ಲ ಗದ್ಯಮಯ. ಮಾರನೆಯ ದಿನ, ಹಿರಿಯರ ಕಾರ್ಯ ಕ್ರಮದಲ್ಲಿ ಅಕ್ರೂರಪಾತ್ರ ವಹಿಸಿದ್ದವರ (ಶಗ್ರಿತ್ತಾಯರು?) ಮನೆಗೆ ಹೋದೆ. 'ಏನು ಹುಡುಗ? ಎಂದರು. ಚಿಣ್ಣರು ಮಾಡಿದ್ದನ್ನು ತಿಳಿಸಿದೆ.

ಹಾ! ಹಾ! ಎಂದು ನಕ್ಕರು. 'ನಾನು ಅಕ್ರೂರನಾಗಿದ್ದೆ ಎಂದೆ. ಮತ್ತೊಮ್ಮೆ ನಕ್ಕರು. ಹೆಮ್ಮೆಪಡುತ್ತ ಅಲ್ಲಿಂದ ಓಡಿದೆ.

1935ರಲ್ಲಿ ಸುದ್ದಿ ಹಬ್ಬಿತು: ಸುಳ್ಯದಲ್ಲಿ ಮಕ್ಕಳಕೂಟವಂತೆ! ಹತ್ತಾರು ಶಾಲೆಗಳ ಮಕ್ಕಳು ಬರುತ್ತಾರಂತೆ! ಆತಿಥ್ಯಕ್ಕೆ ಸಂಬಂಧಿಸಿದ ಸಕಲ ಏರ್ಪಾಟಿಗೆ ಮುಖ್ಯೋಪಾಧ್ಯಾಯ ರಾಮಪ್ಪಯ್ಯನವರ ಹಿರಿತನ. ಅವರ ಸಹೋದ್ಯೋಗಿಗಳೇ ಅತಿರಥ ಮಹಾರಥರು. ಶಾಲೆಯ ಬಾಲಕರು ವಾನರ ಸೇನೆ. ಊರ ಹತ್ತು ಸಮಸ್ತರ ಬೆಂಬಲ ಇದ್ದೇ ಇತ್ತು, ಐದನೆಯ ತರಗತಿ ಯಲ್ಲಿದ್ದ ನಾನು ಸ್ವಯಂಸೇವಕರಲ್ಲೊಬ್ಬ, ಅವರಿವರು ಹೇಳಿದ ಆ ಕೆಲಸ ಈ ಕೆಲಸಮಾಡಿದೆ. ಬಿಡುವಾದಾಗಲೆಲ್ಲ ಅದನ್ನು ಇದನ್ನು ನೋಡಿದೆ. ನನ್ನಲ್ಲಿ ಅಕ್ರೂರನ ಪಾತ್ರವಿರುವ ಪ್ರಸಂಗ ಬಾಲಲೀಲೆ ಕಂಸವಧೆ' ಎಂದು ಗೆ, ರಾಮಚಂದ್ರ ಉಚ್ಚಿలరు 3ళిసిದ್ದಾರೆ.