ಪುಟ:Naavu manushyare - Niranjana.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಡುವ ಕಷ್ಟ ಕಂಡು, ಖುಷಿಪಡುವವರೂ ಆಗ ಇದ್ದರು. ಅಂಥ ಕಪಟಿಯ ಪರಿಚಯವೂ ನನಗೆ ಬೇಗನೆ ಆಯಿತು. ಮುಖ್ಯೋಪಾಧ್ಯಾಯರ ಮನಸ್ಸನ್ನೇ ಆತ ನೋಯಿಸಿದ್ದ.... ಸುದ್ದಿಗಾರನ ಪಾತ್ರವನ್ನೂ ಎಚ್ಚರಿಕೆಯಿಂದ ಅಭಿನಯಿಸತೊಡಗಿದೆ.

ಆಗ ಶಾಲೆಯಲ್ಲಿ ತಿಂಗಳ ಹಬ್ಬ ನಡೆಯುತ್ತಿತ್ತು. ಒಮ್ಮೆ ಅಧ್ಯಾಪಕರು "ಈ ಸಲ ನೀನು ಅಧ್ಯಕ್ಷನಾಗು" ಎಂದರು. ಹೊಸ ಪಾತ್ರ. ಎಲ್ಲ ವಿಧ್ಯಾರ್ಥಿಗಳದೇ ಕಾರಭಾರು. ಹಾಡು, ಕಥೆ, ಭಾಷಣ ಎಲ್ಲವೂ. ಅಧ್ಯಕ್ಷನಾದ ಮಾತ್ರಕ್ಕೆ ನನ್ನದೇ ಕಾರ್ಯಕ್ರಮ ಇರಬಾರದೆಂಬ ನಿಯಮವಿರಲಿಲ್ಲ. ಸ್ವಿಜರ್ಲೆಂಡಿನ ದೇಶಪ್ರೇಮಿ ವಿಲಿಯಂಟೆಲ್ ನ ಕತೆಯನ್ನು ಆಯ್ಧುಕೊಂಡೆ. ಒಬ್ಬ ಕಿರಿಯ ಹುಡುಗನಿಗೆ ಟೆಲ್ ನ ಪಾತ್ರಕೊಟ್ಟು (ಕತ್ತರಿಸಿ, ಮತ್ತೆ ನಯವಾಗಿ ಜೋಡಿಸಿದ ನಿಂಬೆಹಣ್ಣು ಅವನ ತಲೆಯಮೇಲೆ. ಅದಕ್ಕೆ ಕಟ್ಟಿದ ನೂಲು ನೇಪಥ್ಯದಲ್ಲಿ ಕಣ್ಮರೆ.) ನಾನೇ ಟೆಲ್. ಸಾಭಿನಯ ಕಥನ. (ದೃಶ್ಯ-ಶ್ರಾವ್ಯ ಎರಡೂ.) "ಬಾಣಬಿಟ್ಟು, ನಿನ್ನ ಮಗನ ತಲೆಯ ಮೇಲಿನ ಹಣ್ಣನ್ನು ಎರಡು ಹೋಳು ಮಾಡು! ಇಲ್ಲವಾದರೆ-!" ವೈರಿಭೂಪನ ಗರ್ಜನೆ. ಆ ಮಾತು ಹೇಳಿ ಮತ್ತೆ ದೇಶಪ್ರೇಮಿ ಟೆಲ್ ಆಗಿ, ಹೆದೆ ಏರಿಸಿ ಬಾಣಬಿಟ್ಟೆ, ಮರೆಯಲ್ಲಿದ್ದವನು ನೂಲು ಎಳೆದ. ನಿಂಬೆ ಹಣ್ಣಿನ ಎರಡು ಹೋಳುಗಳು ಉರುಳಿದುವು! (ಕರತಾಡನ)

ಹೈಸ್ಕೂಲು ಅಧ್ಯಯನಕ್ಕೆಂದು, ನೀಲೇಶ್ವರಕ್ಕೆ ಹೋದೆ ೧೯೩೮ರ ಬೇಸಗೆಯಲ್ಲಿ. ಪುತ್ತೂರು ಕಾಸರಗೋಡು ತಾಲೂಕುಗಳಿಂದ ಕನ್ನಡ ಹುಡುಗರು ಅಧ್ಯಯನಕ್ಕಾಗಿ ಅಲ್ಲಿಗೆ ಬರುತ್ತಿದ್ದರು. ಮಲಯಾಳಿಗಳು ಸಮಾನ ಪ್ರಮಾಣದಲ್ಲಿದ್ದರು. ಅಲ್ಲಿನವರು, ಸುತ್ತುಮುತ್ತಲಿನವರು. ಇಬ್ಬರ ನಡುವೆ ಸಂಪರ್ಕಭಾಷೆ, ಇಂಗ್ಲಿಷ್. ಆ ಸಲದ (೧೯೩೯) ವಾರ್ಷಿಕೋತ್ಸವದಲ್ಲಿ ಮದರಾಸಿನ ಯಾರೋ (ಚೆಟ್ಟೂರ್?) ಬರೆದ ಇಂಗ್ಲಿಷ್ ನಾಟಕವನ್ನು ಅಭಿನಯಕ್ಕೆ ಗೊತ್ತುಮಾಡಿದ್ದರು. (ಹೆಸರು ಮರೆತಿದ್ದೇನೆ.)ನಾನು ನಾಯಕಿ. ಹಿರಿಯ ಅಧಿಕಾರಿಯ ಪತ್ನಿ ಅಲಮೇಲು. ವಕ್ಷಸ್ಥಲ?