ಪುಟ:Naavu manushyare - Niranjana.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾರನೆ ದಿನ ಬ೦ತು.

ಡಿ.ಎಸ್.ಪಿ. ಆಫೀಸಿಗೆ ಹೋಗುವ ಕಡೆ ಬಲಬದಿಯಲ್ಲಿ ಲಾಕಪ್ಪು. ಒಳಗಿದ್ದರು ಕೇಶವ ಕಾಮತ್. ಮಜೂರ ನಾಯಕ. ಅತ್ತ ಇತ್ತ. ಹುಲಿ ಹೆಜ್ಜೆ ಇಡುತ್ತಿದ್ದವರು ನನ್ನನ್ನು ನೋಡಿ ನಕ್ಕರು.

ಅಧಿಕಾರಿಯೊಂದಿಗೆ ವ್ಯರ್ಥ ಚರ್ಚೆ.

ಡಿ.ಎಸ್.ಪಿ. ವಿಚಾರಣೆಗೆ ಮುಂಚೆಯೇ ತೀರ್ಪುಕೊಟ್ಟರು:"ಇಂಥ ನಾಟಕ ಆಡಬಾರದು. No!"

ಹೊರಟು ಬ೦ದೆ.ಹಸ್ತಪ್ರತಿ ಅಲ್ಲಿಯೇ ಉಳಿಯಿತೊ,ತ೦ದೆನೊ, ನೆನಪಿಲ್ಲ.ನಿಮಗೆ ತೋರಿಸಲು ಆ 'ನೋ' ನಾಟಕ ಇಲ್ಲವಲ್ಲ ಎಂದು ಬೇಸರ. ಹರಿದು ಎಸೆದಿರಬಹುದು. ಬೇಡದ್ದನ್ನು ತಕ್ಷಣ ಹರಿದುಬಿಡುವುದು ಮೊದಲಿನಿಂದಲೂ ನನಗಿದ್ದ ಚಾಳಿ.(ಆ ಚಾಳಿಯಿಂದ ಮುಕ್ತನಾಗಲು ಈಗ ಪ್ರಯತ್ನಿಸುತ್ತಿದ್ದೇನೆ. ಆದರೆ, ತಡವಾಗಿ ಬಂದ ಬುದ್ಧಿಯಿಂದ ಪ್ರಯೋಜನ ಕಡವೆು.)

ವಿವಿಧ ವಿನೋದಾವಳಿಗೆ ಪೋಲೀಸ್ ಕಣ್ಯಾಪು ಬೇಡವಲ್ಲ? ಕೆನರಾ ಹೈಸ್ಕೂಲಿನಲ್ಲಿ ಕಾರ್ಯಕ್ರಮ ಇಟ್ಟುಕೊಂಡೆವು. ಸಪ್ಪೆಯಾಯಿತು.

ಆಗ ಬಂತು ಮುಂಬಯಿಯಿಂದ ಒಂದು ನಾಟಕದ ಬೆರಳಚ್ಚು ಪ್ರತಿ. ಶೀರ್ಷಿಕೆ: 'ಅಮೃತ್'. ಬರೆದವರು ಖ್ವಾಜಾ ಅಹಮದ್ ಅಬ್ಸಾಸ್. ಭಾಷೆ ಇಂಗ್ಲಿಷ್ವಿ.ವಿಡಂಬನಾತ್ಮಕ ಕೃತಿ. No? or Yes? ಅನುವಾದಿಸುವುದಕ್ಕೆ ಮುಂಚೆ ಮೊದಲು ಇದರ ತೀರ್ಮಾನವಾಗಲಿ ಎಂದು,ಡಿ.ಎಸ್.ಪಿ.ಯವರಿಗೆ 'ಅಮೃತ್' ಕೊಟ್ಟೆ. ಅವರು ಜಿಲ್ಲಾ ಕಲೆಕ್ಟರಿಗೆ ರವಾನಿಸಿದರು. ಕರಮತುಲ್ಲಾ,ಐ.ಸಿ.ಎಸ್.

ಬುಲಾವ್. ಸಂಜೆ ಹೊತು ಹೋದೆ ವಸತಿ-ಕಾರ್ಯಾಲಯ ಎರಡೂ ಇದ್ದಕಟ್ಟಡಕ್ಕೆ. ಅಬ್ಬಾಸರ ನಾಟಕವನ್ನು ಓದಿ ಮುಗಿಸಿದ್ದರು, ಏನು ನಯ! ಏನು ವಿನಯ! ನಮ್ಮ ಮಾತುಕತೆ ನಡೆಯುತ್ತಿದಾಗ, ಬೇಗಂ ಸಾಹೇಬರೂ ಎಲ್ಲಿಂದಲೋ ಇಣಿಕಿ ನೋಡಿದರು.