ಪುಟ:Naavu manushyare - Niranjana.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

‌‌‌xvi/ ನಾವೂ ಮನುಷ್ಯರು!

ಬಂಧುಗಳೇ ಪಾತ್ರಧಾರಿಗಳು. ಇದ್ದೂ ಇರದ ಮೇಕಪ್. ಎಲ್ಲಾ ನೈಜತೆಗೆ ಹತ್ತಿರ. ಕಾಲೇಜು ವಿದ್ಯಾರ್ಥಿಗಳಾದ ಆರೂರು ಪಟ್ಟಾಭಿ-ಕುಪ್ಳುಚಾರ್ ರಾಮಕೃಷ್ಣ ಭಟ್ಟರಿಂದ ನೃತ್ಯ.

ಮೂರು ನಾಲ್ಕು ತಿಂಗಳ ಬಳಿಕ ಬೆಂಗಳೂರಿಗೆ ಹೊರಟೆ, ಪತ್ರಿ

ಕೋದ್ಯಮದ 'ದೊಡ್ಡಾಟ'ದಲ್ಲಿ ಭಾಗವಹಿಸಲು. 'ನಾವೂ ಮನುಷ್ಯರು'! ಹಸ್ತಪ್ರತಿ ನನ್ನ ಜತೆ ಪ್ರಯಾಣ ಬೆಳೆಸಿತು. ಬೆಂಗಳೂರಿನ ಪುಟ್ಟದೊಂದು ಮಾಸಪತ್ರಿಕೆ ಅದನ್ನು ಪ್ರಕಟಿಸಿ ಹಸ್ತಪ್ರತಿ ಹಿಂತಿರುಗಿಸಿತು. ಇಲ್ಲಿ ಸ್ವಚ್ಛ ನಕಲಿಗಾಗಿ ಬಳಸಿರುವುದು ಅದನ್ನೇ.

ನಾನಾ ಸಾಹಸ ದುಸ್ಸಾಹಸಗಳ ಬಳಿಕ ೧೯೫೧ರಲ್ಲಿ ಬೆಂಗಳೂರಲ್ಲಿ

ಮತ್ತೆ ಕಾಣಿಸಿಕೊಂಡೆ, ಪ್ರಕಾಶಕನಾಗಿ. ನಿರಂಜನ ಮತ್ತು ನನ್ನ ಮುಂಬಯಿ ಸ್ನೇಹಿತ ವಾಸುದೇವ ಜತೆ ಸಂಪಾದಕರು. ಹೊರತಂದ ಪ್ರಕಟಣೆಗಳಲ್ಲಿ (ಪುರೋಗಾಮಿ ಪ್ರಕಾಶನ) ಒಂದು-'ಕವಿಪು೦ಗವ' ನಾಟಕ. ತೆಲುಗಿನ ಅತ್ರೇಯ ಬರೆದದ್ದು, ವಾಸುದೇವರು ಕನ್ನಡಿಸಿದ್ದು. ೧೯೫೨ರಲ್ಲಿ ಅದನ್ನು ಓದಿದ ಅ. ನ. ಸುಬ್ಬರಾಯರು-'ಕೂಲಿ'-ನಾಟಕ ಬರೆದವರು-"ಆಡೋಣ" ಎಂದರು. ಅವರ ಮನೆಯ ಕಿರಿಯರು ಮತ್ತು ನಾನು ನಟ-ನಟಿಯರು. (ಹುಡುಗ ಸ್ತ್ರೀಪಾತ್ರ ಮಾಡುವ ಕಾಲ ಕಳೆದಿತ್ತು!) ಗುಬ್ಬಿ ವೀರಣ್ಣನವರ ಗಾಂಧಿನಗರದ ರಂಗಮಂದಿರದಲ್ಲಿ ಒಂದು ದೇಖಾವೆ. ಬಳಿಕ ಮೈಸೂರಿನ ಪುರಭವನದಲ್ಲೊಮ್ಮೆ. ನನ್ನದು ಕಾರ್ಮಿಕ ಧುರೀಣನ ಪಾತ್ರ. ನನಗೆ ದೊರೆ ತದ್ದು ಕಳಪೆ ಅಂಕ. ಅದೇ ಕೊನೆಯದು. ಈ ವರೆಗೂ ಯಾವ ನಾಟಕ ದಲ್ಲೂ ಮತ್ತೆ ಆಭಿನಯಿಸಿಲ್ಲ.

ಮಿತ್ರ ಚದುರಂಗರನ್ನು ಒಮ್ಮೆ ಮೈಸೂರಿನಲ್ಲಿ ಕಂಡಾಗ."ಶಿವಸ್ವಾಮಿ

ಯವರನ್ನು ನೋಡಿ ಬರೋಣವಾ?" ಎಂದರು. ಆಗ ಮೈಸೂರು ಆಕಾಶ ವಾಣೆಯ ಅಧಿಕಾರಿಯಾಗಿದ್ದರು ಎಸ್.ಎನ್.ಶಿವಸ್ವಾಮಿ.ಇಬ್ಬರೂ ಅವರ ಮನೆಗೆ ಹೋದೆವು. ಶಿವಸ್ವಾಮಿ ಸ್ನೇಹಪರ. ಆದರೆ ಸೂಕ್ಷ್ಮಗ್ರಾಹಿ.