ಪುಟ:Naavu manushyare - Niranjana.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಭಾರತೀಯ ಜನತಾ ರಂಗಭೂಮಿ' ಮತ್ತು

ಪ್ರಗತಿಶೀಲ ಲೇಖಕರು

ಕುಳುಕುಂದ ಶಿವರಾಯ ಕಾರ್ಯದರ್ಶಿ, ಜನತಾ ರಂಗಭೂಮಿ ಮಂಗಳೂರು ಸವಿುತಿ


ಹೊಸ ವ್ಯವಸ್ಥೆಯ ಪ್ರಸವಕಾಲವಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ

ಜನಜೀವನವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಹಲವು ಶಕ್ತಿಗಳಲ್ಲಿ ಭಾರತೀಯ ಜನತಾ ರಂಗಭೂಮಿಯ ಆಂದೋಲನವೂ ಒಂದು. ಹತ್ತಾರು ಮಹಾರಾಜರ-ಹತ್ತಾರು ಶ್ರೀಮಂತರ-ಆಸೆ ಲಾಲಸೆಗಳಿಗೆ ಪೋಷಕವಾಗಿರು ತ್ತಿದ್ದ ಭಾರತೀಯ ಕಲೆಯಿಂದು-ಅಧಃಪತನದ ಗಂಡಾಂತರದಲ್ಲಿದೆ. ಮಿಲಿ ಯಾಂತರ ಜನ ಆ ಕಲೆಯನ್ನು ಉಳಿಸಲೆತ್ನಿಸುತ್ತಿದ್ದಾರೆ.

ಅವರು ಉಳಿಸುತ್ತಿರುವ ಕಲೆ ಮಾತ್ರ ಹೊಸ ರೂಪವನ್ನು ತಳೆಯು

ತ್ತಿದೆ!

ನಾಲ್ಕಾರು ಗವಿ ಗುಹೆಗಳಲ್ಲಿ, ಶಾಸ್ತ್ರೀಯ ವಿಜ್ಞಾನದ ಬಂಧನದಲ್ಲಿ

ಹೇಳುವ-ಕೇಳುವರಿಲ್ಲದೆ, ನಶಿಸಿಹೋಗುತ್ತಿದ್ದ ನೃತ್ಯಕಲೆಯನ್ನು ಜನತೆ ತನ್ನ ದಾಗಿ ಸ್ವೀಕರಿಸಿದೆ. ಬಂಗಾಲದ ಜನಜೀವನದ ದುರಂತ ಚಿತ್ರಪ್ರಸಾದ, ಸುಧೀರ ಕಾಷ್ತ್ ಗಿರರಂತಹ ಚಿತ್ರಕಾರರನ್ನು ಬೆಳಕಿಗೆ ತಂದಿದೆ. ಪ್ರೇಮ ಆಲಾಪನೆಗಳ 'ಸಂಗೀತರತ್ನ ಆಸ್ಥಾನವಿದ್ವಾನ್'ರ ಸಂಗೀತ ಮುಂಬಯಿ ಬಂಗಾಳಗಳ ಮಜೂರರ, ಆಂಧ್ರ-ಕೇರಳಗಳ ಕಿಸಾನರ ದಲಿತಧ್ವನಿಯಲ್ಲಿ

1. Indian People's Theatre Association : IPTA.

2.1944ರಲ್ಲಿ ಅ. ನ. ಕೃಷ್ಣರಾಯರು 'ಪ್ರಗತಿಶೀಲ ಸಾಹಿತ್ಯ' ಎoಬ ಲೇಖನ ಸಂಕಲನವನ್ನು ಪ್ರಕಟಿಸಿದರು. ಅದರಲ್ಲಿ ಜನತಾ ರಂಗಭೂಮಿಯನ್ನು ಕುರಿತ ನನ್ನ ಈ ಲೇಖನವಿತ್ತು. ಆ ಮೂರು ಪುಟಗಳನ್ನು ಕ್ಸೆರೋಕ್ಸ್ ಮಾಡಿಸಿ ನೆನಗೆ ಕೊಟ್ಟು ನೆರವಾದವರು ಆ ಅಲಭ್ಯ ಪ್ರತಿಯ ಒಡೆಯರಾದ ಪ್ರೊ| ಚಿ. ಶ್ರೀನಿವಾಸ ರಾಜು ಅವರು. ನಾನು ಅವರಿಗೆ ಋಣಿ. -ನಿರಂಜನ