ಪುಟ:Naavu manushyare - Niranjana.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರಾರ್ದನಿಗೊಳ್ಳುತ್ತಿದೆ. ಆ ಇತಿಹಾಸದ ಚಿತ್ರಗಳು ನಾಟಕಗಳ ವಸ್ತು ಗಳಾಗತೊಡಗಿವೆ. ಚೀನೀಯ ನಾಟಕಗಳ ಅಪೂರ್ವ ಶಕ್ತಿ-ಸಾಮರ್ಥ್ಯ,ರಷ್ಯದ ಸ್ವತಂತ್ರ ಕಲಾವಿದರ ಪ್ರದರ್ಶನ ನೈಪುಣ್ಯ ನಮ್ಮ ಪುರೋಗಾಮಿಗಳ ಮನಸ್ಸಿಗೆ ತಟ್ಟಿದೆ!ವಿಚಾರ ಕ್ರಾಂತಿಗೆ ಎಡೆಗೊಟ್ಟಿದೆ.

ಇನ್ನೂ ನಮ್ಮ ಕಲಾಸಂಪತ್ತು ಶ್ರೀಮಂತರ ಮಹಾರಾಜರ ಕಾಲಕ್ಷೇ

ಪದ ಸಾಧನವಾಗಬೇಕೆ?

ಇನ್ನೂ ದೇಶದ ಸ್ವಾತಂತ್ರ್ಯ ಸಂಗ್ರಾಮ-ಅಂತರರಾಷ್ಟ್ರೀಯ ಮಹಾ

ಸಮರಗಳಲ್ಲಿ, ಹೊಸ ಜಗತ್ತಿನ ನಿರ್ಮಾಣದ ಬೃಹದ್ಯ ತ್ನದಲ್ಲಿ, ನಮ್ಮ ಕಲಾಸಂಪತ್ತು ಸಹಾಯಕವಾಗದೆ ಹೋಗಬೇಕೆ?

ಭಾರತದ ಮೂಕ ಮಿಲಿಯಗಳಲ್ಲಿ ಅಲ್ಲೊಂದು ಇಲ್ಲೊಂದು ಸ್ವರ

ಹೀಗೆ ನೂರಾರು ಸ್ವರ-ಮುಷ್ಟಿಯೆತ್ತಿ "ಇಲ್ಲ!" ಎನ್ನುತ್ತಿದೆ.

“ಕಲೆ ಕಲೆಗಾಗಿಯಲ್ಲ! ಜನತೆಗಾಗಿ" ಎಂಬ ಘೋಷ ಜನತಾ ರಂಗ

ಭೂಮಿಯ ಸ್ಥಾಪನೆ-ಬೆಳವಣಿಗೆಗಳಿಗೆ ಕಾರಣವಾಗಿದೆ.

ಅರೆ ಹೊಟ್ಟೆಯ ಕೂಗನ್ನು ಕುರಿತು ಕವಿತೆ ಬರೆಯಬಲ್ಲ ಕವಿ ಜನತಾ

ರಂಗಭೂಮಿಯ ಅಂಗಣದಿಂದ ತನ್ನ ಕೃತಿಯನ್ನು ಹಾಡಿಸುತ್ತಾನೆ: ಜನತೆಯ ಜೀವನವನ್ನು ಚಿತ್ರಿಸಿ, ವಿಚಾರ ಕ್ರಾಂತಿಯನ್ನು ಕೆರಳಿಸಿ ಪ್ರಗತಿಶೀಲ ಲೇಖಕನು ಭರೆದ ನಾಟಕವನ್ನು ಜನತಾ ರಂಗಭೂಮಿ ಆಡುತ್ತಿದೆ!.'ಜನರ ಸಂಕಷ್ಟವನ್ನು ಚಿತ್ರಿಸುತ್ತ ಉಷಾರಾಣಿ ಅನುದಾಸಗುಪ್ತರು ನರ್ತಿಸುತ್ತಿದ್ದಾರೆ.

ಹೀಗೆ ಪ್ರಗತಿಶೀಲ ಲೇಖಕರ ಸಹಾಯ-ಸಹಕಾರಗಳಿಂದ ಭಾರತೀಯ

జನತಾ ರಂಗಭೂಮಿ ಬೆಳಯುತ್ತಿದೆ.

"ಇದೆಲ್ಲ ಬರಿಯು ಕಲ್ಪನೆ-ಮರುಳು" ಎನ್ನುವ ಕಲಾಶಾಸ್ತ್ರಿಗಳಿಗೆ

ನಮ್ಮ ದೇಶದಲ್ಲಿ ಬರಗಾಲವಿಲ್ಲ.ಕೊಚ್ಚಿ ಮಹಾರಾಜರ ಅಡಿಯಾಳಾಗಿ ತಮ್ಮ ಕಲಾಮಂಡಲವನ್ನು ನಡೆಸುತ್ತಿದ್ದು, ಅವರ ದಾಕ್ ಕಟ್ಟುಬಿದ್ದು ದೇವದಾಸಿ ಪದ್ಧತಿಯನ್ನು ಎತ್ತಿ ಹಿಡಿದ ಮಹಾಕವಿ ವಲ್ಲತ್ತೋಳರೇ ಈಗ