ಪುಟ:Naavu manushyare - Niranjana.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜನತೆಯ ಬಳಿಗೆ ಬಂದಿರುವುದು; ಆಲ್ಮೊರದ ಮಹಾ ಶಿಖರದಿಂದಿಳಿದ್ದು ಉದಯಶಂಕರರು ಜನನಿವಾಸಕ್ಕೆ ಸಮೀಪದಲ್ಲಿ ಇರತೊಡಗಿರುವುದು - ಈ ಎರಡು ದೃಷ್ಟಾಂತಗಳು ಶಾಸ್ತ್ರಿಗಳ ಬಾಯಿ ಮುಚ್ಚಿಸಬಲ್ಲುವು.

ಇಲ್ಲ: ಯಥಾರ್ಥ-ವಾಸ್ತವ ವಿಷಯವೆಂದರೆ, ಕೆರಳುತ್ತಿರುವ

ಜನತೆಯ ವಿಚಾರಶಕ್ತಿಯೊಡನೆ ನಮ್ಮ ಕಲೆಗಳು ಹೊಸರೂಪವನ್ನು ತಾಳುತ್ತಿವೆ.

ಭಾರತೀಯ ಜನತಾ ರಂಗಭೂಮಿ

೧೯೪೨ರಲ್ಲಿ ಭಾರತೀಯ ಜನತಾ ರಂಗಭೂಮಿ ಸಮಿತಿ ಮುಂಬಯಿ

ಯಲ್ಲಿ ರೂಪುಗೊಂಡಿತು. ಜವಾಹರರು ಆಗ ಸಂದೇಶ ಕಳುಹಿಸಿ,ಆ ಹೊಸ ಆಂದೋಲನಕ್ಕೆ ಯಶಸ್ಸನ್ನು ಕೋರಿದರು. ಆದರೆ ಆ ವರ್ಷ ಆಗಸ್ಟಿನ ಬಳಿಕ ದೇಶದಾದ್ಯಂತ ಉಂಟಾದ ಅನಾಹುತ, ಸರಕಾರದ ಅಮಾನುಷ ಮರ್ದನ, ಸಮಿತಿಯನ್ನು ಶಕ್ತಿಗುಂದಿಸಿದುವು. ದೇಶವು ತನ್ನ ಮೇಲೆ ಬಿದ್ದ ಅಘಾತದಿಂದ ಚೇತರಿಸಿದಂತಯೇ ಜನತಾ ರಂಗಭೂಮಿ ಸಮಿತಿಯೂ బల ಗೊಂಡು ೧೯೪೩ ಮೇ ತಿಂಗಳ ೨೫ರಂದು ಪ್ರಥಮ ಸಮ್ಮೇಳನವನ್ನು ಜರಗಿಸಿತು. ಕರ್ಣಾಟಕವನ್ನೂ 2 ಕೂಡಿ ವಿವಿಧ ಪ್ರಾಂತಗಳವರು ಅದರಲ್ಲಿ ಭಾಗವಹಿಸಿದರು. ಮುಂಬಯಿ, ಬಂಗಾಳ, ಪಂಜಾಬ್, ಆಂಧ್ರ ಸಂಯುಕ್ತ ಪ್ರಾಂತ ಮತು ಮಲಬಾರ್ ಪ್ರತಿನಿಧಿಗಳು ವರದಿಗಳನ್ನೊಪ್ಪಿಸಿದರು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪ್ರೊ| ಹಿರೆನ್ ಮುಖರ್ಜಿಯವರು ಜನತಾ ರಂಗಭೂಮಿಯ ಮುರಿದಿದ್ದ ಕಷ್ಟದ ಹಾದಿಯನ್ನು ತೋರಿಸಿಕೊಟ್ಟ, ಸುಂದರ ಭವಿಷ್ಯತ್ತನ್ನು ಚಿತ್ರಿಸಿದರು.

ಆಗಲೇ ಭಾರತೀಯ ಪ್ರಗತಿಶೀಲ ಲೇಖಕರ ಸಮ್ಮೇಳನ ಜರಗು

ತ್ತಿದಾಗ, ಜನತಾ ರಂಗಭೂಮಿಯವರು ಕಾರ್ಮಿಕ ವಸತಿ ಪ್ರದೇಶವಾದ ಪರೇಲಿನಲ್ಲಿ ತಮ್ಮ ನಾಟಕಗಳನಾಡಿದರು. - -

ಪ್ರಗತಿಶೀಲ ಲೇಖಕರ ನೆರವಿನಿಂದ ಮುಂದೊತ್ತಬೇಕೆಂಬುದು ಜನತಾ

ರಂಗಭೂಮಿ ಸಮಿತಿಯ ತನ್ನ ಸಮ್ಮೇಳನದಲ್ಲಿ ಸ್ವೀಕರಿಸಿದ ಪ್ರಧಾನ ನಿರ್ಣಯಗಳಲ್ಲೊಂದು.


೧.ಕರ್ನಾಟಕವನ್ನು ಪ್ರಾಧಿಸಿದ್ದು ಕುಳುಕು೦ದ ಶಿವರಾಯ.