ಪುಟ:Naavu manushyare - Niranjana.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

o

ಹಂಚಿನ ಕಾರ್ಖಾನೆಯ ಕೆಲಸಗಾರ ರಾಮಣ್ಣನ ಗುಡಿಸಲು. ಹೊಟ್ಟೆನೋವು,

ಕಫ ಪೀಡಿತನಾಗಿ ರಾಮಣ್ಣ ಮಣ್ಣಿನ ತಿಟ್ಟೆಯ ಮೇಲೆ ಹಾಸಿದ ಹರಕು

ಚಾಪೆಯಲ್ಲಿ ಒಂದು ಹೊದಿಕೆ ಹೊದ್ಡುಕೊ೦ಡು ಮಲಗಿದ್ದಾನೆ. ನಾಟಕ

ಆರಂಭವಾದಾಗ ಕಾಣುವುದು ಈ ದೃಶ್ಯ.

ಸ್ವಲ್ಪ ಹೊತ್ತು ಮೌನ....ಕೆమ్ము.... "ಅಯ್ಯೋ" ನರಳುವಿಕೆ....

ಹತ್ತಿರದಲ್ಲಿರುವ ಮಣ್ಣಿನ ಪಾತ್ರವನ್ನು ಅಲ್ಲಾಡಿಸಿ ನೋಡುವನು.

ರಾಮಣ್ಣ :

ಥೂ! ನೀರೂ ಮುಗಿದುಹೋಯಿತು....ಯಾರಪ್ಪ ಈಗ

ಒಳಗಿಂದ ತರುವುದು? ರಾಮಾ! ಲಕ್ಷ್ಮಣಾ!....ಸೀತೆ!

ಸಾವಿತ್ರಿ!....ನಮ್ಮರುಕ್ಕುವಾದರೂ ಬರಬಾರ್ದೆ....ಬಯ್ಯ

ಆಯಿತು ಇಷ್ಟರಲ್ಲೇ-

(ಮೆల్లನೆ ಎದ್ದು, ಹೊದಿಕೆ ಸರಿಸಿ, ಕೆಳಕ್ಕೆ ತೆವಳಲು ನೋಡು

ವನು. ಕೃಶವಾದ ದೇಹ. ಮುಖ ಕಳೆಗು೦ದಿದೆ. ಗಡ್ಡ

బందిದೆ....ಮೈಮೇಲೆ ಅ೦ಗವಸ್ತವಿಲ್ಲ....ಸೊ೦ಟದಲ್ಲೊಂದು

ಸಣ್ಣ ಬಟ್ಟೆ....ಕೆಮ್ಮುವನು.)

(ರುಕ್ಕು ಒಳಬರುವಳು. ಕೈಯల్లి బుತ್ತಿಯ ಪಾತ್ರ....ಕೆಂಪು

ಬಣ್ಣದ ನೂಲಿನ ಸೀರೆ ಉಟ್ಟಿದ್ದಾಳೆ....ಇನ್ನೊಂದು ಕೈಯಲ್ಲಿ

ಬಂಗುಡೆ ಕಟ್ಟು.)

ರುಕ್ಕು:

ಕೂತಲ್ಲಿ ಕೂತುಕೊಳ್ಲಿಕ್ಕೂ ಆಗುವುದಿಲ್ವೊ ನಿಮಗೆ?

ರಾಮಣ್ಣ:

ಹಾo!

(ಬಾಯ್ತೆರೆದು)

ಹೆಸರು ಎತ್ತಿದ್ದೇ ಎತ್ತಿದ್ದು ಬಂದೇ ಬಿಟ್ಲಲ್ಲ! ಪಡ್ಡ

ಆಯ್ತು....ನೂರು ವರ್ಸ ಇಡೀ ಬದುಕ್ಲಿಕ್ಕೆ ಉಂಟಲ್ಲ

ಮಾರಾಯ್ತಿ ನೀನಿನ್ನು!

ರುಕ್ಕು:

(ಬುತ್ತಿ ಪಾತ್ರೆಯನ್ನು ಮೂಲೆಯಲ್ಲಿರಿಸಿ)

ನಿಮ್ಗೆ ಹೆದರಿಕೆ ಅಂತ ತೋರ್ಥದೆ ನಾನು ನೂರು ವರ್ಸ

ಬದುಕಿದ್ರೆ?....