ಪುಟ:Naavu manushyare - Niranjana.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಮಣ್ಣ :

ಹೆದರಿಕೆ ಎಂಥದು ಇವತ್ತೋ ನಾಳೆಯೋ ಸಾಯುವವ್ನಿಗೆ -

ಆದರೆ ಸ್ವಲ್ಪ -....

ರುಕ್ಕು:

ನೋಡಿ - ಈಗ ನಿಲ್ಲಿಸ್ತೀರೋ ಇಲ್ವೋ ನಿಮ್ಮ ಚಿರಿ ಚಿರಿ?

ರಾಮಣ್ಣ:

ಅಲ್ವೆ? ಸ್ವಲ್ಪ ನೀರಾದ್ರೂ ಬೇಕೋ ಬೇಡ್ವೋ ಇಲ್ಲಿ?

(ರುಕ್ಕು ಹತ್ತಿರ ಹೋಗಿ ಮಣ್ಣಿನ ಪಾತ್ರ ಎತ್ತುವಳು...

ರಾಮಣ್ಣ ಅವಳ ಕೈಯಲ್ಲಿದ್ದ ಬಂಗುಡೆ ಕಟ್ಟು ನೋಡುವನು.)

ಎಷ್ಟು ತಂದಿಯೇ ಇವತ್ತು ?

ರುಕ್ಕು:

(ನೆಟ್ಟಗೆ ನಿಂತು - ಒಂದು ಕೈಯಲ್ಲಿ ಬುತ್ತಿ ಪಾತ್ರೆ,

ಇನ್ನೊಂದರಲ್ಲಿ ಬಂಗುಡೆ....)

ಹೆಚ್ಚಿಲ್ಲಾಂದ್ರು... ಕೆಲಸ ಬಿಟ್ಕೂಡ್ಲೆ ಮಾರ್ಕೆಟಿಗೆ ಓಡ

ಬೇಕೂಂತಿದ್ದೆ...... ಮತ್ತೆ ಸೀತ ತಂದ್ಕೊಟ್ಲು...

ರಾಮಣ್ಣ:

ಓಹೋ! ಸೀತ ತಂದ್ಕೊಟ್ಲು ! ನೀನು ಯಾಕೆ

ಹೋಗ್ಲಿಲ್ಲ?...... ಹಾಗಾದರೆ ಇಷ್ಟು ಹೊತ್ತು ಏನು

ಮಾಡಿದಿ? ಯಾರ ಒಟ್ಟಿಗೆ ಇದ್ದಿ?

ರುಕ್ಕು:

ನಿಲ್ಸೀಂದ್ರೆ ಒಮ್ಮೆ. ಯೂನಿಯನ್ ನವರು ಯಾರಾದರೂ

ಕೇಳಿದರೆ ಚಂದಾದೀತು

(ರಾಮಣ್ಣ ತಲೆ ಕೆಳ ಹಾಕುವನು)

ಇವತ್ತು ಮೀಟಿಂಗು ಇತ್ತೂಂತೇಳ್ತೇನೆ.

ರಾಮಣ್ಣ:

ಹಾಂ. ಹಾಗಾದರೆ ಸರಿ. ಮೊದಲೇ ಹೇಳ್ಲಿಕ್ಕೆ ಏನಾಗಿತ್ತು?

ಅಲ್ಲಾ, ಹೌದೊ ರುಕ್ಕು? ಯಾವಾಗ ನೀನು ಬುದ್ಧಿ

ಕಲಿಯುವುದು? ಮೂರು ತಿಂಗಳಾಯ್ತು ನಾವು

ಯೂನಿಯನ್ ಸೇರಿ. ಎರಡು ತಿಂಗಳಾಯ್ತು ನಾನು

ಚಾಪೆ ಹಿಡ್ದು. ಇನ್ನೂ ಬುದ್ಧಿ ಬರಲಿಲ್ವಲ್ಲ ನಿನಗೆ?