ಈ ಪುಟವನ್ನು ಪ್ರಕಟಿಸಲಾಗಿದೆ
೪ / ನಾವೂ ಮನುಷ್ಯರು!
(ರುಕ್ಕು " ಹಿ ಹ್ಹಿ " ಎಂದು ನಗುತ್ತ ಒಳಗೆ ಹೋಗುವಳು.
ರಾಮಣ್ಣ ಕೆಮ್ಮುವನು. ರುಕ್ಕು ನೀರಿನೊಡನೆ ಬಂದು-)
ಸ್ವಲ್ಪ ಕುಡೀರಿ.
(ಎಂದು ಕುಡಿಸಿ, ಅವನನ್ನು ಹಾಗೆಯೆ ಒರಗಿಸಿ
ಮಲಗಿಸುವಳು.)
ರಾಮಣ್ಣ : ಹಾಂ. ಹೂಂ- ನೋಡುವ, ಹೇಳು ನೋಡುವ-
ಏನಾಯ್ತು ಮೀಟಿಂಗ್ನಲ್ಲಿ? ಸಭೆ ದೊಡ್ದಿತ್ತೊ? ಯಾರೆಲ್ಲ
ಲೆಕ್ಚರ್ ಕೊಟ್ರು?
ರುಕ್ಕು : ಹೇಳ್ತೀನೀಂದ್ರೆ.....
( ಉತ್ಸಾಹದಿಂದ, ತಿಟ್ಟಿಯ ಒಂದು ಮೂಲೆಯಲ್ಲಿ ಕೂತು)
ದೊಡ್ದ ಸಭೆ.... ಆ ಎರಡು ಗದ್ದೆ ತುಂಬ ಇದ್ರು- ಕೆಂಪು
ಬಾವುಟ ಹಾಕಿದ್ರು....
(ರಾಮಣ್ಣ ಕಣ್ಣರಳಿಸಿ ಕೇಳುವನು)
ರಾಮಣ್ಣ : ಹುಂ, ಮತ್ತೆ? ರುಕ್ಕು : ಮತ್ತೆ- ಮತ್ತೆ-
( ಙ್ಞಾಪಿಸಿಕೊಳ್ಳುವವಳಂತೆ)
ರಾಮಣ್ಣ : ಹೂಂ, ಮತ್ತೆ ಏನಾಯಿತು? ರುಕ್ಕು : ಲೆಕ್ಚರಿತ್ತು. ರಾಮಣ್ಣ : ಓಹೋ..... ಮೀಟಿಂಗ್ನಲ್ಲಿ ಲೆಕ್ಚರು ಯಾವಾಗ್ಲೂ ಉಂಟು,
ಅಲ್ಲಾ ಏನೂಂತ ಲೆಕ್ಚರು?.....
ರುಕ್ಕು : ಓ- ಹಾಗೆಯೊ? ಜೋರು ಲೆಕ್ಚರು ಕೊಟ್ರು... ನೋಡೀ...
ದೊರೆಗಳ ಎರಡು ಕಾರ್ಖಾನೆ ಬಿಟ್ಟು ಬೇರೆಯೋರೆಲ್ಲ
ರೂಪಾಯಿಗೆ ರೂಪಾಯಿ ಯುದ್ಧ ಭತ್ತೆ ಕೊಡ್ತಾರಲ್ಲ?
ಅದು ಸರಿ . ಆದರೆ ಈ ದೊರೆಗಳು ಕೂಡ ಕೊಡ್ಬೇಕೂಂತ....