ಈ ಪುಟವನ್ನು ಪ್ರಕಟಿಸಲಾಗಿದೆ
ನಾವೂ ಮನುಷ್ಯರು!/೫
ರಾಮಣ್ಣ : ಹೂ೦. ಸರಿ. ನನಗೆ ಗೊತ್ತಿತ್ತು.....ಉಪಾಧ್ಯಕ್ಷರು ಮತ್ತು
ಕಾರ್ಯದರ್ಶಿ ಮಾತಾಡಿದ್ರಲ್ವೊ? ಕೈ ಹೀಗೆ ಹೀಗೆ
ಮಾಡಿ?
ರುಕ್ಕು ; ಹೌದು, ಹೌದು.
ರಾಮಣ್ಣ : ಹೂಂ. ನೋಡು, ನನ್ಗೆ ಗೊತ್ತಿತ್ತು.....ಸಭೆಗೆ ಯಾರೆಲ್ಲ
ಬಂದಿರ್‍ಲಿಲ್ಲ ?
ರುಕ್ಕು : ನಾನು ಲೆಕ್ಕ ಮಾಡ್ತಾ ಕೂತದ್ದೂಂತ.... ತೋರ್‍ತದೆ
ಹುಂ?... ಯೂನಿಯನ್ ನಲ್ಲಿ ನಾವಿಲ್ಲಾಂತ ಕೆಲವರು
ಸೀದಾ ಹೋದ್ರು.ಮತ್ತೆ ಕೆಲವರು ಬೇಗ ಮಾರ್ಕೆಟಿಗೆ
ಹೋಗಿ ಬಂಗುಡೆ ತೆಕ್ಕೊಂಡು ಮೀಟಿಂಗಿಗೆ ಬಂದ್ರು..ಸೀತ
ಹಾಗೇ ಮಾಡಿದ್ದು.....ನಾನು ಮೊದ್ಲೇ ಬಂದು ಕೂತೆ.....
ರಾಮಣ್ಣ :(ಹಲ್ಲು ಕಿರಿದು)
ಸರಿ, ಸರಿ. ನಿನಗೆ ಕೊಟ್ಟ ಬಂಗುಡೆಗೆ ಸೀತ ಎಷ್ಟು
ವಸೂಲು ಮಾಡಿದ್ಲು?
ರುಕ್ಕು : ಓಹೋ..ನನಗೆ ತಲೆಯೇ ಇಲ್ಲಾಂತ ತೋರ್‍ತದೆ
ನಿಮಗೆ ಯಾವಾಗಲೂ ಹಾಗೆಯೇ. ಮತ್ತೊಬ್ರ ವಿಷಯ
ದಲ್ಲಿ ಅಪನಂಬಿಕೆ.... ಅಲ್ಲಾಂದ್ರೆ.. ಆ ಸೀತು, ಅಲ್ಲ ಹಿಂದೆ
ನಾವು ಭಾರೀ ಲಡಾಯಿ ಮಾಡಿಕೊಂಡಿದ್ದೆವೂಂತ ಹೇಳ್ವ・・・
ಈಗ ಯೂನಿಯನ್ ಆದ ಮೇಲೆ ನಾವೆಲ್ಲ ಒಂದೇಂತ
ಹೇಳಿದ್ರೆ..... ನಾಲ್ಕು ಬಂಗುಡೆ ಕೊಟ್ಟು ದುಡ್ಡು ತಕ್ಕೊಳ್ಲೇ
ಇಲ್ಲ, ನಾಳೆ ಬಂಗುಡೆಯೇ ಬದಲಿ ಕೊಡೂಂತ ಹೇಳಿದ್ಲು.
ರಾಮಣ್ಣ : ಹೂಂ... ಹೂಂ.... ಆಗ್ಲಿ. ಎಲ್ಲಾ ಒಳ್ಳೇದಕ್ಕೇ... ಏನು
ಹೇಳಿದ್ರು ಭಾಷಣದಲ್ಲಿ? ...... ಅಯ್ಯೋ.... ಒಂದಿಷ್ಟು ತಲೆ
ಯಲ್ಲಿ ತುಂಬಿಸ್ಬಾರ್‍ದೋ ....... ವರ್ಷ ಮೂವತ್ತಾಯ್ತು
ಎಮ್ಮೆಗೆ ಆದ ಹಾಗೆ (ಕೆಮ್ಮು)