ಈ ಪುಟವನ್ನು ಪ್ರಕಟಿಸಲಾಗಿದೆ
೬ / ನಾವೂ ಮನುಷ್ಯರು!
ರುಕ್ಕು : ನೋಡಿ ನೋಡಿ, ಕೆಟ್ಟ ಮಾತು ಹೇಳಬಾರ್ದು.......ಸತ್ಯ,
ಸತ್ಯ.ಕೆಮ್ಮು ಬಂತೋ ಇಲ್ವೋ?
(ರಾಮಣ್ಣ ನಗುವನು-ಮತ್ತೂ ಕೆಮ್ಮು. ರುಕ್ಕು ಎದ್ದು ಅವನ
ಬೆನ್ನು ಸವರುವಳು. ಶಾಂತವಾದ ಮೇಲೆ-)
ರುಕ್ಕು : ಅಧ್ಯಕ್ಷರು ಜೋರೇ.. ಹದಿನೆಂಟು ರೂಪಾಯಿ ಇದ್ದ --
ಹಂಚಿಗೆ ಎಪ್ಪತ್ತಾಯ್ತು, ನಮ್ಮ ನಾಲ್ಕಾಣೆ ಎಂಟಾಣೆ
ಯಾದರೂ ಆಗುವುದು ಬೇಡ್ವೋ? ಆರುಮುಕ್ಕಾಲಿನ
ಅಕ್ಕಿಗೆ ಆರಾಣೆಯಾಯಿತು; ನಮ್ಮ ಕೂಲಿ ಎರಡು
ಪಟ್ಟಾದರೂ ಆಗಬೇಕೊ, ಬೇಡ್ವೊ?
ರಾಮಣ್ಣ : ಮತ್ತೆ ಚಿಮಿಣಿ ಎಣ್ಣೆ, ಹುಳಿ, ಮೆಣಸು, ಬಟ್ಟೆ, ಕಟ್ಟಿಗೆ-
ರುಕ್ಕು : ಹೂಂ ಹೂಂ-ಎಲ್ಲಾ! ಹಿಡಿದದ್ದಕ್ಕೆ ಮುಟ್ಟಿದ್ದಕ್ಕೆ ಎಲ್ಲ
ವಿಪರೀತ ಕ್ರಯ ಆದ ಮೇಲೆ ನಾವು ಬದುಕಬೇಕೊ,
ಬೇಡ್ವೊ? ನಾವು ಮನುಷ್ಯರು ಹೌದೋ ಅಲ್ಲವೋ
ಅಂತ..ರೈಟರು ಮತು ದೊರೆ ಕಂಡಿಯ ಹತ್ರ ನಿಂತು
ನಮ್ಮನ್ನೆ ನೋದಡ್ತಿದ್ರು....ನಾವೇನೂ ಹೆದರ್ಲೇ ಇಲ್ಲ.
ರಾಮಣ್ಣ : ನೀವು ಹೆಂಗಸ್ರು, ಯಾವಾಗಲೂ ಹಾಗೆಯೇ-ಹೆದರೋದು
ಯಾಕೇಂತ ಬೇಡ್ವೊ? ನಾವೇನಾದರೂ ಅವರಿಗೆ ವಿರುದ್ಧ
ಮಾತಾಡ್ತೇವೊ?.ನ್ಯಾಯವಾದ್ದು ಕೇಳ್ಲಿಕ್ಕೆ ಯಾರ
ಹೆದ್ರಿಕೇಂತ?
ರುಕ್ಕು : ಮತ್ತೊಂದು ಗೊತ್ತುಂಟೋ ನಿಮ್ಗೆ...? ಇವತ್ತು ಉರ್ವ
ದಿಂದ ಒಬ್ಳು ಬಂದಿದ್ಳು ಯೂನಿಯನಿನವಳಂತೆ. ಅವಳ್ದು
ದೊಡ್ಡ ಲೆಕ್ಚರು ನಮಗೆ...ಅವಳ ಗಂಡನೂ ಬಂದಿದ್ದ...
ಮೊದಲು ಅವನು ಬಹಳ ಕುಡೀತಿದ್ನಂತೆ, ಮತ್ತೆ
ಅವನನ್ನು ಯೂನಿಯನಿಗೆ ಸೇ ಕಂಡಾಬಟ್ಟೆ ಕಳ್ಳು
ಗಿಳ್ಳು ಕುಡಿಯೋದನ್ನೆಲ್ಲ ನಿಲ್ಲಿಸಿ ಬಿಟ್ಲಂತೆ ಆ ಹೆಂಡ್ತಿ.