ಈ ಪುಟವನ್ನು ಪ್ರಕಟಿಸಲಾಗಿದೆ
ನಾವೂ ಮನುಷ್ಯರು! / ೭
ರಾಮಣ್ಣ : ಆಯ್ತಲ್ಲಿಗೆ! ಅವಳೇ ಯಜಮಾನ್ತೀಂತಾಯ್ತು ಹಾಗಾದರೆ....
ಬದುಕಿದೆ. ಸದ್ಯಃ ನಾನೇನೂ ಕಳ್ಳು ಕುಡಿಯೋದಿಲ್ಲವಲ್ಲ!
(ಕೆಮ್ಮು , ರುಕ್ಕು ಅವನ ಬೆನ್ನು ಸವರುವಳು.)
ರುಕ್ಕು : ಹೌದೊ? ಈಗ ಮದ್ದಿಗೇನು ಮಾಡುವುದು? ನಾಳ್ದು
ಶನಿವಾರ ದುಡ್ಡು ಸಿಕ್ತದೇಂತ ಹೇಳ್ವ...ಮತ್ತೆ ತರು
ವುದೋ...ಅಲ್ಲ....ಆ ನಾಲ್ಕಾಣೆ-
ರಾಮಣ್ಣ : ಏನು? ಯೂನಿಯನಿಗೆ ಕೊಡ್ಲಿಕ್ಕಿರುವ ನಾಲ್ಕಾಣೆ
ಮದ್ದಿಗೊ? ಛೆ! ಛೆ! ನಾನು ಹುಷಾರಾಗಿದ್ದೇನೆ. ಇನ್ನು
ಒಂದು ಸರ್ತಿ ಮದ್ದು ತಂದ್ರೆ ಆಯ್ತು, ಮತ್ತೆ ಒಮ್ಮೆ
ತಲೆ ಕೆಲಸಿಗೆ ಕೊಟ್ಟು ಕೆಲಸಕ್ಕೆ ಬರುವುದೇ. ನಮ್ಮ
ರೈಟರನ್ನು ನೋಡದೆ ಬಾಳ ಸಮಯ ಆಯ್ತು......
ರುಕ್ಕು : (ಮುಖ ತಿರುಗಿಸಿ)
ಅವನಿಗೆ ಪಾಪ......ಜೀವದಲ್ಲಿ ಜೀವ ಇಲ್ಲ. ಒಟ್ಟು
ಹೇಗಾದರೂ ಮಾಡಿ ಯೂನಿಯನ್ ಮುರೀಬೇಕೂಂತ
ಆಗಿದೆ ಅವನಿಗೆ.
ರಾಮಣ್ಣ : ಕಣ್ಣು ಹಾಕ್ಲಿಕ್ಕೂ ಪುರಸತ್ತಿಲ್ವೋ ಏನೊ ಈಗ?
ರುಕ್ಕು : ಹೋದ ಅವ. ಕಣ್ಣು ಹಾಕುವವ ಮಣ್ಣು ತಿಂದ.....
ಒಮ್ಮೆ ಮಾತಾಡ್ಲಿಕ್ಕೆ ಬರಲಿಯಂತೆ ನಮ್ಮಲ್ಲಿ ಯಾರ
ಹತ್ತಿರವಾದ್ರೂ, ಯೂನಿಯನಿಗೆ ಹೇಳಿ ಅವನಿಗೆ ತಕ್ಕ ಶಾಸ್ತಿ ಮಾಡಿಸ್ತೇವೆ. :
ರಾಮಣ್ಣ : ಭೇಷ್! ಇನ್ನು ನಾವು ಗಂಡಸ್ರು ಮನೆಯಲ್ಲೇ ಕೂತು
ನೀವು ತಂದದ್ದನ್ನುತಿಂದರಾಯ್ತು. ನೀವೂ ಯೂನಿಯನೂ
ಇಬ್ರೇ ಎಲ್ಲಾ ಮಾಡ್ತೀರಿ.