ಪುಟ:Naavu manushyare - Niranjana.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



             ೧೦ / ನಾವೂ ಮನುಷ್ಯರು!
                 ಹಾಳು ಕೆಮ್ಮೊಂದು ತಿನ್ತದೆ  ನನ್ನನ್ನು.
    ಲಸ್ರಾದೋ:(ಗಂಟಲು ಸರಿಮಾಡಿಕೊಂಡು) 
        ನೀವು ಹೇಳಿದ್ದು ಸರಿ....ಆದ್ರೆ ನೋಡಿ...ನಾನು ಕೆಲ್ಸಕ್ಕೆ 
               ಹೋಗದ ಕಾರಣವೇ ಬೇರೆ. ಬಾಯಿಗೆ ತಿಂಗಳಾಯಿತು....
       ನೋವೂಂತ ಹೇಳ್ತಾಳೆ....ಏಳನೆ ಹೆರಿಗೆ...
      (ರಾಮಣ್ಣ 'ಮೊದಲು ಸಂತೋಷ ಸೂಚಿಸುವನು.. ಮಾತು
              ಮುಂದುವರಿದಂತೆ, ತುಟಿಮುಚ್ಚಿ ತಲೆಬಾಗಿಸಿ ನಿಟ್ಟುಸಿರು
              ಬಿಡುವನು.)
      ಕಳೆದ ಸಲವೇ ಕಷ್ಟವಾಗಿತ್ತು. ಈಗ ಯುದ್ಧಕ್ಕೆ ಹೋದ
             ಜೂನಿಯ ಸುದ್ದಿಯೂ ಇಲ್ಲ....ಅಳಿಯನ ಮನೆಯಿಂದ
           ಮಗಳ ವಿಚಾರ ಕಾಗದವೂ ಇಲ್ಲ. ಕಳೆದ ವರ್ಷ ಮಗು 
           ತೀರಿಕೊಂಡದ್ದು ద్చే ಬೇರೆ.ಒಟ್ಟು ದುಃಖ. ಏನೂ
            ಇಲ್ಲಾಂತೇಳ್ತ್ನೆನೆ ಜೀವದಲ್ಲಿ. ಯೇಸು ದೇವರು ಕಾಪಾಡ
            ಬೇಕು ನಮ್ಮನ್ನು....ಹೂ೦–
 ರಾಮಣ್ಣ:ಏನು ಮಾಡುವುದು ಹೇಳಿ? ಸ್ವಂತ ಬೆವರಿಳಿಸಿ, ಬೇಡಿ-
      ಕಾಡಿ ಕೂಲಿ ಸಂಪಾದಿಸಿ ಬದುಕುವವರಲ್ಲವೊ ನಾವು?
      ಇದೇನು ನಮ್ಮ ರಾಜ್ಯವೊ?
ಲಾಸ್ರಾದೋ:ಏನೋ ರಮಣ್ಣ....ಈಗೀಗ ನೀವು ಮಾತಾಡುವುದೆಲ್ಲ 
                ಹೊಸ್ಥಗಿ ಕಾಣೀದೆ. ಕೆಟ್ಟದೂಂತ ಅಲ್ಲ.ನನಗೇನೋ
               ಬಾಳ ವ್ಯಥೆ ಆಗ್ತ.ದೆ-ಸಂತೋಷವೂ ಆಗ್ರದೆ....ಬಾಯಿ
                  ರುಕ್ಮಕ್ಕನನ್ನು ಕೇಳೀದ್ಲು....

ರಾಮಣ್ಣ: ಹೇಳ್ತೀನೆ, ಹೇಳ್ತೀನೆ....ರುಕು ಹೆತ್ತದು ಒಂದೇ

           ಒಂದಾದ್ರೂ ಬೇರೆಯವರನ್ನು ಹೆರಿಸಲಿಕ್ಕೆ ಅವಳು 
            ಯಾವಾಗ್ಲೂ ತಯಾರೇ.ಖಂಡಿತ ಬಂದು ಹೋಗ್ತ್ಳಳೆ.