ಪುಟ:Naavu manushyare - Niranjana.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

 ೧೨ / ನಾವೂ ಮನುಷ್ಯರು!


           ನೋಡುವ, ನೋಡುವ-ನಿಮ್ಮ ಪಿತ್ವ ಎಲ್ಲಿವರೆಗೆ ಏರ್ರ್ತ್
                    ದೇಂತ!....ಲಸ್ರಾದೋ! 
         (ಕೊಂಕಣಿ ಭಾಷೆಯಲ್ಲಿ) 
         ನೆನಪುಂಟಲ್ಲ್ವೊ? ಒಂದನೆ ತಾರೀಕಿಗೆ ಇಡಬೇಕು ಬಾಡಿಗೆ! 
         ನಿನ್ನ ಮನೆಯಿಂದ ಈಗ ಬಂದದ್ದಷ್ಟೇ ನಾನು. ಬಾಯಿ
                 ಒಬ್ಳೇ ಇದ್ಲು....
       (ಕಣ್ಣು ಕೆರಳಿಸಿ ಹಿಂದಿರುಗುವನು)
  ರಾಮಣ್ಣ : (ರಾಮಣ್ಣನನ್ನೂ  ಕಯನ್ನೂ ನೋಡುತ್ತ ಬೆಪ್ಪನಂತೆ
                  ನಿಂತಿದ್ದ ಲಾಸ್ರಾದೋನನ್ನು ಕುರಿತು)
         ಬಾಯಿ ಎಕ್ಲೀ  ಅಸ್ಲ್ಲಿ - ಒಬ್ಲೆ  ಇದ್ದಂತೆ. ಏನು ಪೊರ್ಬು
                ಗಳೇ....ನಾವು ಮನುಷ್ಯರು ಹೌದೋ ಅಲ್ಲವೋ....ಯಾವ 
               ತಪ್ಪಿಗೆ ಈ ಅವಮಾನದ ಮಾತು ಕೇಳ್ಳೇಕು? 
       (ಲಸ್ಸಾದೋ ಕುಳಿತುಕೊಳ್ಳುವನು.) 
      ಬಂದಾಗ ಎದ್ದು ನಿಲ್ಬೇಕಂತೆ....ಎದ್ದು ನಿಲ್ಲುವುದು- 
      ( ಹೊಟ್ಟೆಯನ್ನು ತೋರಿಸಿ)
     -ಈ ಉರಿ! 
     (ರುಕ್ಕು ಲಗುಬಗೆಯಿಂದ ಹೊರಗಿಂದ ಒಳಬರುವಳು)
 
 ರುಕ್ಕು : ಬಂದಿತ್ತಲ್ಲ ಬಾಡಿಗೆ ಯಜಮಾನರ ಸವಾರಿ?ಏನಂತೆ?
 ರಮಣ್ಣ : ಏನು? ಸಿಕ್ಥೊ ಹಾದಿಯಲ್ಲಿ?
 ರುಕ್ಕು:ಹೊಂ.ಹೀಗೆ-
     (ಅಣಕಿಸಿ) . . . . 
   ನೋಡಿತು.ಮುಂದಿನ ತಿಂಗಳ ಬಾಡಿಗೆ ಕೇಳ್ಳಿಕ್ಕೆ 
       ಬಂದದ್ದೂ?