ಪುಟ:Naavu manushyare - Niranjana.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



                                  ನಾವೂ ಮನುಷ್ಯರು! / ೧೩

ರಾಮಣ್ಣ : ಹಾಂ....

        (ಹೆಂಡತಿಯ ಕೈಕೆಡೆಗೆ ದೃಷ್ಟಿ ಹರಿಸಿ)
        ನೀನು ಹಾಗೇ ಬಂದಿಯಲ್ಲ. ಎಲ್ಲಿ ಉಂಟೇ ಕಟ್ಟಿಗೆ?

ರುಕ್ಕು  : ಸಿಕ್ಕಲಿಲ್ಲ....ಕತ್ತಲಾಗ್ತ బంತಲ್ಲ....ಶೆಟ್ಟರ ಡಿಪೋದಲ್ಲಿ

        ಬಾಗಿಲು.

ರಾಮಣ್ಣ : ಮತ್ತೆ - ರುಕು  : ಮತ್ತೆ, ಕಾಂತಪ್ಪಣ್ಣ ಇವತ್ತು ಮಿಟಿಂಗಿನಲ್ಲಿ ಹೇಳಿದ

        ಹಾಗೆ....ಬಂಗುಡೆ ತಂದು, ಸುಟ್ಟು ತಿನ್ನದೆ ಮಣ್ಣಲ್ಲಿ
        ಹೂಳಿಡೋದು!
ರಾಮಣ್ಣ :(ಆ ಮಾತನ್ನು ಮೆಚ್ಚಿದವನಂತೆ)
        ನೋಡಿ ಪೊರ್ಬುಗಳೆ ಎಂಥ ಮಾತು! ಬಂಗುಡೆ ತಂದು,
        ಸುಡಲಿಕ್ಕೆ ಬೆಂಕಿ ಇಲ್ಲಾಂತ ಮಣ್ಣಲ್ಲಿ ಹೂಳಬೇಕೆ? ಹೂಳ
        ಬೇಕೊ ಪೊರ್ಬುಗಳೆ? 
        (ಲಸ್ರಾದೋ ಕೂಡ ಮೆಚ್ಚುಗೆಯಿಂದ ತಲೆಯಾಡಿಸುವನು.)
        (ಮಗ ಕಿಟ್ಟು ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು "ఇಂಕ್ವಿಲಾಬ್
        ಜಿಂದಾಬಾದ್" ಎನ್ನುತ್ತ ಒಳಬರುವನು. ಕೈಯಲ್ಲೊಂದು 
        ಬುಟ್ಟಿ....)

ರಾಮಣ್ಣ :(ಕುಳಿತಿದ್ದಲ್ಲಿಂದಲೇ)

        ಏ-ಏನೋ ಇದು?
       (ರುಕ್ಕು ಹೆಮ್ಮೆಯಿಂದ ಮಗನನ್ನು ನೋಡುವಳು)

ಕಿಟ್ಟು  : ಶ್!! ಇದು ಮೆರವಣಿಗೆ! ಮಜೂರ ಸಂಘಕ್ಕೆ ಜಯ

        ವಾಗಲಿ!
       (ಪೊರ್ಬು ಟೊಪ್ಪಿ ಇಡುವನು. ತೆಗೆಯುವನು. ಕಿಟ್ಟು ಬುಟ್ಟಿ
        ಯನ್ನು ಮುಂದೆಮಾಡಿ.)
       ನೋಡಮ್ಮ ಒಣಗಿದ ಕಟ್ಟಿಗೆ ಚೂರು....ಮಧ್ಯಾಹ್ನ
       ಬುತ್ತಿ ಊಟ ಆದಮೇಲೆ ಇವನ್ನು ಒಟ್ಟುಮಾಡಿಟ್ಟೆ....