ಈ ಪುಟವನ್ನು ಪ್ರಕಟಿಸಲಾಗಿದೆ
೧೪ | ನಾವೂ ಮನುಷ್ಯರು!
ಸಾಯಂಕಾಲ ಮರತೇ ಹೋಯಿತು.ಮೆರವಣಿಗೆ ಒಟ್ಟಿಗೆ
ಓಡಿದ್ದೇ. ಪುನಃ ತಂದುಬಿಟ್ಟೆ .
(ರುಕ್ಕು ಬುಟ್ಟಿಯನ್ನು ಎತ್ತಿಟ್ಟು, ಮಗನನ್ನು ತಬ್ಬಿಕೊಳ್ಳು
ವಳು.)
ರಾಮಣ್ಣ : ನಮ್ಮ ಹಸಿ ಬಂಗುಡೆ ಈ ದಿನ ಬಿಸಿಯಾದೀತು....
ಕಿಟ್ಟು : (ತಾಯಿಯಿಂದ ಬಿಡಿಸಿಕೊಂಡು)
ಹೇಯ್! ನನಗೊಂದು ಪದ್ಯ ಗೊತ್ತುಂಟು:
ಕಾಸಿಗೆ ಎರಡು ಬೆಳ್ಳುಳ್ಳಿ
ಬಂಗುಡೆಮಿನಿಗೆ
ಸಂಗಡವಾದ
ಅಂಗಡಿಯೊಳಗಿನ ಬೆಳ್ಳುಳ್ಳಿ
ರುಕ್ಕು : ಕಾಸಿಗೆ ಎರಡು ಬೆಳ್ಳುಳ್ಳಿ ಇಲ್ಲವೆ ಇಲ್ಲ. ಈಗ ಅದರ
ಅಗತ್ಯವೂ ಇಲ್ಲ.
ಈ ಪದ್ಯ ಹೇಳು ಕಿಟ್ಟ-ಮಿಟಿಂಗ್ನಲ್ಲಿ ಹೇಳಿದ್ರಲ್ಲ ಅದು....
(ತಾಯಿ ಮೊದಲು,ಮತ್ತೆ ತಾಯಿ ಮಗ ಜತೆಯಾಗಿ)
ಊರಿನಲ್ಲಿ ದುಡಿವ ನಮಗೆ ಹೊಟ್ಟೆಗಿಲ್ಲದಾಗಿದೆ
ಊರಹಂಚು ಮಾಡುವೆಮಗೆ ಮನೆಯೆ ಇಲ್ಲವಾಗಿದೆ ೧
ದುಡಿವುದೊಂದೆ ಗೊತ್ತು ನಮಗೆ, ನಮ್ಮ ಬೆವರ
ಫಲವನು
ದುಡಿಯದೆಯೇ ಕುಡಿದು ತಿಂಬ ಜಡಧನಿಕನು ಸುಲಿವನು ೨
ನಮ್ಮದು ಹೊಲ ನಮ್ಮದು ನೆಲ ನಮ್ಮದಿಡೀ ರಾಜ್ಯವು
ನಮ್ಮದನ್ನು ನಾವು ಪಡೆಯೆ ನಮಗೆ ಯಾರ ವ್ಯಾಜ್ಯವು? ೩
ಊರ ಸುಲಿವ ಚೋರತನದ ಪಾರುಪತ್ಯ ಈಗಿದೆ
ಊರಿಗಿಲ್ಲ ಸುಖವು ಇದನ್ನು ವೀರತನದಿ ನೀಗದೆ ೪