ಪುಟ:Naavu manushyare - Niranjana.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

 ನಾವೂ ಮನುಷ್ಯರು!| ೧೫

            ಬನ್ನಿರಣ್ಣಗಳಿರ ದುಡಿವ ಜನಗಳೆಲ್ಲ ಈಗಲೇ ..
            ಬನ್ನಿರೆಮ್ಮ ರಾಜ್ಯಭಾರ ಸ್ಥಾಪಿಸಲ್ಕೆ ಬೇಗನೆ   ೫
           (ಪದ್ಯ ಮುಗಿಯುತ್ತಿದ್ದಂತೆ ಯೂನಿಯನಿನ ಕಾರ್ಯ 
            ದರ್ಶಿಯೂ ಆದಂ ಸಾಹೇಬರೂ ಬರುವರು.ರಾಮಣ್ಣ ಕಷ್ಟ
            ಪಟ್ಟಿದ್ದು “ನಮಸ್ಕಾರ”, “ಸಲಾಂ” ಎನ್ನುವನು.) 
           (ಬಂದ ఇಬ್ಬರು "ಲಾಲ್ ಸಲಾಂ", ಎನ್ನುವರು. ಪೊರ್ಬು,
            ರುಕ್ಷು ಎಲ್ಲರಿಗೂ ಸಂತೋಷ. ಕಿಟ್ಟು ಕಾರ್ಯದರ್ಶಿಯ 
            ಬಳಿಗೆ ಬರುವನು. ಕಾರ್ಯದರ್ಶಿಯು ಅವನ ಕೈಹಿಡಿದು 
            ಕೊಳ್ಳುವನು.)
ಕಾರ್ಯದರ್ಶಿ: ಏನು? ಹೇಗಿದ್ದೀರಿ ಎಲ್ಲ? ರಾಮಣ್ಣ, ಗುಣವಾಗ್ತಾ
            ಬಂತೊ?
     ರುಕು : ಹಾ೦. ಈಗ ನೆನಪಾಯ್ತು....ಸಭೆ ಮುಗಿದ ನಂತ್ರ
            ಅಧ್ಯಕ್ಷರೂ ನನ್ಹತ್ರ ಕೇಳಿದ್ರು "ರಾಮಣ್ಣನಿಗೆ
            ಹ್ಯಾಗುಂಟು?" ಅಂತ.
   ರಾಮಣ್ಣ: ಹಾ೦.  ನನಗೆ ಗೊತ್ತಿತ್ತು.ಕೇಳ್ದೆ ಇರೋದಿಲ್ಲಾಂತ
           ನನಗೆ ಗೊತ್ತಿತ್ತು
           (ಪೊರ್ಬು ಸಹಿತ ಎಲ್ಲರೂ ನಗುವರು.) 

ಕಾರ್ಯದರ್ಶಿ : ನೋಡಿ ರಾಮ್ಮಣ. ಈಗಲೇ ಕತ್ತಲೆ ಆಯ್ತು. ನಮ

           ಗಿನ್ನು ನೂರುಮನೆಗೆ ಹೋಗ್ಬೇಕು. ಈ ತಿಂಗಳ ಚಂದಾ
           ವಸೂಲಿಗೆ ಬಂದದ್ದು,  ಇಬ್ಬರದೂ ನಾಲ್ಕಾಣೆ.
          (ರುಕ್ಕು ಒಳಹೋಗುತ್ತಾಳೆ.)
  ರಾಮಣ್ಣ : ರುಕ್ಕೂ....ಹೇಳಿದ್ದು ಕೇಳಿಸಿತೊ?....ಎಲ್ಲಿದ್ದಿ?
    ರುಕ್ಕು :(ಬರುತ್ತೆ)
         ಓ-ಕರೆದಿರೊ? ಹಣ ತರಲಿಕ್ಕೆ ಹೋಗಿದ್ದೆ.