ಈ ಪುಟವನ್ನು ಪ್ರಕಟಿಸಲಾಗಿದೆ
೧೬ / ನಾವೂ ಮನುಷ್ಯರು!
ರಾಮಣ್ಣ : ನೋಡಿ-ನೋಡಿ. ವೆಂಕಟರಮಣನ ಮುಡಿಪಿಗಿಂತಲೂ
ಹೆಚ್ಚು ಪವಿತ್ರ ಈ ಎರಡೆರಡಾಣೆ.
ಕಿಟ್ಟು: ಅಪ್ಪಾ, ನನ್ನದೂ ಎರಡಾಣೆ ಕೊಡು, ನಾನೂ ಮೆಂಬ
ರಾಗ್ಬೇಕು.
(ಎಲ್ಲರೂ ನಗುವರು.)
ಕಾರ್ಯದರ್ಶಿ: ಈಗ ನೀನು ಕೆಲಸಕ್ಕೆ ಹೋಗುವುದಿಲ್ಲವಲ್ಲ. ಕೆಲಸಕ್ಕೆ
ಹೋಗಲಿಕ್ಕೆ ಶುರುಮಾಡಿದ ಮೇಲೆ ನೀನೂ ಮೆಂಬರು.
ಈ ವರ್ಷ ಶಾಲೆಗೆ ಬಾ. ಯುನೂನಿಯನ್ ಶಾಲೆಗೆ
ಕಲೀಲಿಕ್ಕೆ, ಬರ್ತೀಯೊ?
ಕಿಟ್ಟು: ಓ!
(ರಾಮಣ್ಣ-ರುಕ್ಕು ಸಂತೋಷದಿಂದ ಪರಸ್ಪರ ದೃಷ್ಟಿ
ವಿನಿಮಯ ಮಾಡಿಕೊಳ್ಳುವರು)
ಕಾರ್ಯದರ್ಶಿ: ಇನ್ನು ನಾನು ಚಂದಾ ವಸೂಲಿಗೆ ಬರಲಿಕ್ಕಿಲ್ಲ. ನೀವೇ
ತಂದುಕೊಡಬೇಕು.
(ರಶೀದಿ ಬರೆಯುತ್ತ)
ಈ ಸಲದ ರಶೀದಿ ಇಲ್ಲಿಯೇ ಕೊಡ್ತೇನೆ.
ರಾಮಣ್ಣ : ಇನ್ನೇನು-ಇನ್ನೊಂದು ವಾರ ಬಿಟ್ಟು ನಾನೂ ಕೆಲಸಲಕ್ಕೆ
ಬರುವವನೇ!
ಆದಂ : ನಾಡ್ದು ಮಿಟಿಂಗಿಂದೂ ಹೇಳಿಬಿಡಿ.
ಕಾರ್ಯದರ್ಶಿ: ಹಾಂ..ಮಂಗಳವಾರ ಸಾಯಂಕಾಲ ದೊಡ್ಡ ಮೈದಾನಿ
ನಲ್ಲಿ ಭಾರಿ ದೊಡ್ಡ ಸಭೆ ಉಂಟು....ರಷ್ಯಾದ ಕ್ರಾಂತಿ
ದಿನದ ಆಚರಣೆ.
(ರಾಮಣ್ಣನತ್ತ ನೋಡಿ)