ಈ ಪುಟವನ್ನು ಪ್ರಕಟಿಸಲಾಗಿದೆ
ನಾವೂ ಮನುಷ್ಯರು!| ೧೭
ಅವತ್ತು ಸೌಖ್ಯ ಇದ್ರೆ ನೀವೂ ಬನ್ನಿ....ರುಕ್ಮಕ್ಕ ಕಿಟ್ಟು
ಬರಲೆಬೇಕು. ಹತ್ತಿರದ ಎಲ್ರನ್ನೂ ಸೇರಿಸಿ ಮೆರವಣಿಗೆ
ಯಲ್ಲಿ ಬನ್ನಿ. ಅವತ್ತು ಯಕ್ಷಗಾನ ಉಂಟು-ನಾಟಕ
ವುಂಟು-ಭಾಷಣ ಉಂಟು.
ಕಿಟ್ಟು : ಇಂಕ್ವಿಲಾಬ್ ಜಿಂದಾಬಾದ್ ಉಂಟು.
ಕಾರ್ಯದರ್ಶಿ : (ನಗುತ್ತ)
ಹಾ೦ ಹಾ೦-ಅದೂ ಉಂಟು.
(ಲಸ್ರಾದೋ ಕಡೆತಿರುಗಿ)
ಪೊರ್ಬುಗಳೆ, ಹ್ಯಾಗೆ ನಡೀತಿದೆ ನಿಮ್ಮ ಕಂಕನಾಡಿಯ
ಮಗ್ಗದ ಯೂನಿಯನು? ಸದಸ್ಯ ಚಂದಾ ಎಲ್ಲ
ಕೊಟ್ಟಿದ್ದೀರೊ?
(ಲಸ್ರಾದೋ ಮಾತನಾಡಲೆಂದು ಬಾಯಿ ತೆರೆಯುವಷ್ಟರಲ್ಲೆ)
ರಾನುಣ್ಣ : ಓಹೋ! ಪೊರ್ಬುಗಳು ಬಹಳ ಉಮೇದಿನಿಂದ ಕೆಲಸ
ಮಾಡ್ತಾ ಇದ್ದಾರೆ....
ಕಾರ್ಯದರ್ಶಿ : ಸಂತೋಷ. ಬರ್ತಿವೆ ಹಾಗಾದರೆ, ಲಾಲ್ ಸಲಾಂ!
(ಕಾರ್ಯದರ್ಶಿ,ಆದಂ ಸಾಹೇಬ್ ಇಬ್ಬರೂ ಹೊರಡುವರು.
ರಾಮಣ್ಣ ಕೂತುಕೊಳ್ಳುವನು. ಪ್ರಸನ್ನತೆ. ಮತ್ತೆ ಹೊಟ್ಟೆ
ನೋವು ಕೆಮ್ಮು....)
ರಾಮ್ಮಣ್ಣ : (ಚೇತರಿಸಿಕೊಳ್ಳುತ್ತ)
ಬಂದವರ ವಿದುರಲ್ಲಿ ಕೆಮ್ಮಲಿಲ್ಲವಲ್ಲ....ಅಷ್ಟಸಾಕು....
ಅಮ್ಮ....ಆಯ್ಯೊ....ಪೂರ್ತಿ ಕತ್ತಲಾಯ್ತು....ಚಿಮಿಣಿ
ಎಣ್ಣೆ ಏನಾದರೂ ಉಂಟೊ ರುಕ್ಕೂ ?
ರುಕ್ಕು : (ವಿಷಾದದ ನಗೆ ಬೀರುತ್ತೆ)