ವಿಷಯಕ್ಕೆ ಹೋಗು

ಪುಟ:Nanna Nalla.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೯

ನನ್ನ ನಲ್ಲ


ಅಲ್ಲದೆ ಸ್ವಾಮಿಯ ಶಕ್ತಿಯು ತಾನು

ಶಕ್ತಿಯೆ ತಾಯಿ ಸ್ವಾಮಿಯೆ ತಂದೆ

ಭಕ್ತಿ ಶಾಂತಿಗಳ ನೆಲೆಯಿವರೆಂದೆ

ಶಾಂತನ ಇಚ್ಛೆಯ ನಿಧಿಯೇ ಶಕ್ತಿ

ಇಂತಿವರೇ ಹೆಚ್ಚಿನ ಶಿವಶಕ್ತಿ

ಇವರಂಶಕೆ ಆ ದೇವಾಧಿಕರು

ಅವರು ವಿಶ್ವಕಾರ್ಯದಿ ತತ್ಪರರು

ಅಂಶರಲ್ಲಿ ಆತ್ಮಾಂಶರು ಬೇರೆ

ಅಂಶರಲ್ಲಿ ಜೀವಾಂಶರು ಬೇರೆ

ಆತ್ಮಾಂಶರು ಆತ್ಮರ ಜಗಗಳಲಿ

ಜೀವಾಂಶರು ಜೀವರ ಜಗಗಳಲಿ

ಆತ್ಮಾಂಶರು ಆತ್ಮನ ಹಿತಕಾಗಿ

ಜೀವಾಂಶರು ಜೀವನ ಹಿತಕಾಗಿ

ದಿವ್ಯ ಜೀವನಕೆ ಮಾತಾಪಿತರು

ದಿವ್ಯ ಜೀವನಕೆ ಇವರೇ ಇವರು


  • * * *


ಆತುಮವೆಂದರು ಸ್ವಾಮಿಯ ಅಂಶ

ಆತುಮದಲೆ ಸರ್ವಸಮಾವೇಶ

ಆತ್ಮನ ಮೂಲಕ ಭ್ರಾತರು ಜನರು

ಆತ್ಮರಿಗೆಲ್ಲಾ ಇಬ್ಬರೆ ಪಿತರು

ಪಿತರೆಂದರೆ ಶ್ರೀ ಮಾತಾಪಿತರು

ಪಿತಮಾತೆಯರಿಗೆ ಸರ್ವರು ಸುತರು

ಹುಡುಗರು ತರುಣರು ಬಲ್ಲವರೆಂದು

ಮಿಡಿಗಾಯ್ ಕಸುಗಾಯ್ ಹಣ್ಗಾಯ್ ಎಂದು

ಮಕ್ಕಳಿವರಿಗೆ ಮೂಬಗೆಯುಂಟು

ಮಕ್ಕಳೆ ಎಲ್ಲರು ಈ ಪರಿಯುಂಟು

ಹುಡುಗರಿಗಜ್ಞಾನವೆ ಅದು ಸಹಜ