ವಿಷಯಕ್ಕೆ ಹೋಗು

ಪುಟ:Nanna Nalla.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦

ನನ್ನ ನಲ್ಲ


ನಡುವಿನವರಿಗಲ್ಪಜ್ಞಾನ ನಿಜ

ಹಿರಿಯರಿಗೇ ಹಿರಿ ಜ್ಞಾನದ ಹುಟ್ಟು

ಹಿರಿತನಕೇ ಜಗ ಬಂದಂತುಂಟು


  • * * *


ಹಿರಿಮಕ್ಕಳ ಈ ಘನತರ ಕಾಲ

ವರ ಪಿತರುಗಳೇ ತರಲಿಹ ಕಾಲ

ತಾಯ್ತಂದೆಗಳಿಂದೀ ಯುಗದಲ್ಲಿ

ಮಾಯಾ ಲೀಲೆಯ ಹರವಿಹರಿಲ್ಲಿ

ಅವರ ಲೀಲೆಯಾ ಪರಮ ರಹಸ್ಯ

ಅವರಿಂದಲೆ ಅರಿಯುವುದು ಅವಶ್ಯ

ಅವರ ಕೃಪೆಯ ಗಳಿಪುದೆ ಸಾಧನವು

ಅವರಿಚ್ಛೆಗೆ ಬಾಳ್ವುದೆ ಸಾಧನವು

ಅವರ ಹರಕೆಯಿಂದಲೆ ಪಥದರಿವು

ಅವರ ಆಶ್ರಯವೆ ಪಯಣಕೆ ವರವು


  • * * *


ನಾವಾತ್ಮರು ಜೀವಕೆ ಪ್ರಭುವರರು

ಜೀವಗುಣವ ಗೆದಿಯುವ ಹೊಣೆಯವರು

ನಮಗೆ ಹೊರಿಸಿದೀ ಹೊಣೆಯನು ಗಡನೆ

ಸಮಯ ಮೀರದಲೆ ತೀರಿಸಲೊಡನೆ

ಜನನೀ ಜನಕರು ತಮ್ಮಯ ತೇಜ

ಅನುಮತದಿಂದೆಮಗೀವರು ಸಾಜ

ಇದುವೇ ಗುರಿಯೂ ಇದುವೇ ಸಿರಿಯೂ

ಇದುವೇ ನನಗಿಹ ಕಾರ್ಯದ ಪರಿಯು

ಜಯಜಯ ತಾಯೇ ಜಯಜಯ ತಂದೇ

ಭಯರಹಿತನ ಮಾಡಿರಿ ನನಗಿಂದೇ


  • * * *