ವಿಷಯಕ್ಕೆ ಹೋಗು

ಪುಟ:Nanna Nalla.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೭

ನನ್ನ ನಲ್ಲ


47. ಉಷಾದೇವಿ

ಬಂದಳು ಉಷೆಯು

ಬೆಳಗಿತು ದಿಶೆಯು

ಬಣ್ಣಬಣ್ಣಗಳ ಸಂಭಾರಂ

ಸುಂದರ ಮೊಗದಲಿ

ಪಾಟಲ ವರ್ಣದ

ದಿವ್ಯ ಪ್ರೇಮದ ಭಾಂಡಾರಂ


ಜರದಂಚಿನ ಸಿರಿ

ನೀಲಿಯ ವಸನಕೆ

ಒಪ್ಪುವ ನಗೆಹೂ ಅಲ್ಲಲ್ಲಿ

ಚರಣವ ಸ್ಪರ್ಶಿಪ

ಹಸುರಿನ ಕುತನಿಯ

ಹಡದಿಯ ಸಂಭ್ರಮ ಧರೆಯಲ್ಲಿ


ಜೀವ ಜಡಂಗಳ

ಹಿರಿಹಿಗ್ಗಿನ ಸೆಲೆ

ದಿನದ ವಸಂತದ ಸವಿ ಸಿರಿಯು

ದೇವ ದಿವಸ್ಪತಿ

ಜೀವ ವನಸ್ಪತಿ

ಗೆದೆಯೂಡಲು ಕಳಿಸಿದ ಹಿತೆಯು


ಬಣ್ಣದ ಜೋಗುಳ

ಬಣ್ಣದ ಲಾಲನೆ

ಬಣ್ಣಬಣ್ಣದಮೃತದ ಹಾಲು

ಕಣ್ಗಳ ತಣಿಸುವ

ಬಣ್ಗಳ ಹರಕೆಯು

ಮತರ್ಯ್‌ಕೆ ಅಮರತ್ವದ ಕುಕಿಲು