ವಿಷಯಕ್ಕೆ ಹೋಗು

ಪುಟ:Nanna Nalla.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧

ನನ್ನ ನಲ್ಲ


ಕಣ್ಣ ಕಿಂಡಿಯ ಒಳಗೆ ಹಣಿಕೆ ಹಾಕುವ ಜಾಣಿ

ಒಳಗೆ ಜೀವದ ಬೆನ್ನು ಬಡಿವ ಜಾಣೀ |

ಕಣ್ಣುಗಾಣದೆ ನಾನು ಕೊರಿ ಸಂಕಟಬಡುವೆ

ಚೆಲುವ ಚೆನ್ನಗನೆಡೆಯ ತೋರೆ ರಾಣೀ || 17 ||


ತರುವೆ ನೀ ಹೇಳೆನಗೆ ಮರವೆ ನೀ ಹೇಳೆನಗೆ

ಕಲ್ಲೆ ಕೊರಡೇ ನೆಲೆಯ ಹೇಳಿರೆನಗೆ |

ಮೊರೆವ ``ಕಾಮಾರ್ತಾಹಿ ಪ್ರಕೃತಿ ಕೃಪಣಾಶ್ಚೇತ-

ನಾಚೇತನೇಷು ವೆಂಬಂತೆ ನಿಮಗೆ || 18 ||


ನನ್ನ ಕಣ್ಣೀರಿನಲಿ ಕಲ್ಲು ಕರಗುತಲಿಹುದು

ನನ್ನೊಡನೆ ದಿಕ್ಕು ದನಿಗುಡತಲಿಹುದು |

ನನ್ನ ನಿಟ್ಟುಸಿರಿನಲಿ ಬನವು ಬಾಡುತಲಿಹುದು

ಕರುಳೆಂಬ ಕರುಳೇಕೆ ಕರಗದಿಹುದು || 19 ||


ಬರುವದೇನುಂಟೊಮ್ಮೆ ಬರುವಕಾಲಕೆ ಬಹುದು

ಬಯಕೆ ಬರುವದರ ಕಣ್ಸನ್ನೆ ಕಾಣೋ |

ಅರಿಯದಾ ಹವಣಿಕೆಯು ಜೀವಜೀವನ ಲೀಲೆ

ದೇವದೇವನ ಗೂಢ ವಿಧಿಯು ಕಾಣೋ || 20 ||



4ನೇ ಎಸಳು


ನಿಶ್ಶಬ್ದ ನಿಶ್ಶಬ್ದ ಶಬ್ದದಾಚೆಯ ಶಬ್ದ

ನಿಶ್ಶಬ್ದವಿದ್ದರೂ ಮೌನವಲ್ಲ |

ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ

ನಿಸ್ಸೀಮವೆಂದರೂ ಶೂನ್ಶವಲ್ಲ || 1 ||