ವಿಷಯಕ್ಕೆ ಹೋಗು

ಪುಟ:Nanna Nalla.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೨

ನನ್ನ ನಲ್ಲ


ಹುಡುಹುಡುಕಿ ದಣಿಯುವದು ನಿನ್ಹುಡುಗ ನೋಡು

ಅಡಗುವದು ಎಷ್ಟೊತ್ತು ? ಮೂಡು ಒಡಮೂಡು 10


ಬಳಲಿ ಆ ಬಳಿಕ ಎಳೆ ಮಗು ತೊಳಲಬಹುದೇ ?

ಅಳಿಸಿ ಮಗುವನು ತಾಯಿ ಸುಮ್ಮನಿರಬಹುದೇ ? 11


ಬಲು ಬಿಸುಪು ಹೆಚ್ಚಾಗಿ ಹೌಹಾರದಿರಲು

ನೆಲಮುಗಿಲನೊಂದಿಸುವ ಮಳೆ ಬಹುದೆ ಮಿಗಿಲು 12


ಬಳಲಿಕೆಗೆ ಬೆಚ್ಚಿ ನಾನಳುವವನಲ್ಲ

ಬಳಲುತಿರಲೆದೆಗರಗಿ ನೀ ಬರುವೆಯಲ್ಲ 13


ಕರೆದರೂ ಬಾರದಲೆ ಮರೆಗಿರುವ ನೀನು

ಕರೆಯದೇ ಹುರಿಗೊಂಡು ಆಗ ಬಹೆ ಏನು? 14


`ಆಗ' `ಈಗ'ಗಳ ನಡುವಿರುವ ಆಗಲೊಂದೇ

ಆಗಿಹುದು ಅಗಲಿಕೆಯ ಆಗಲು ಬೇರೆ ಮುಂದೆ 15


ಈ ಸಂದನಡ್ಡಲಗು ಹತ್ತೆಯಾದಂತೆ

ಈಸೊಂದು ಚಿಂತೆಗಳದುಂಟೆ 16


ಶ್ರೀವಿವೇಕಾನಂದ ಮೂಡು ಒಡಮೂಡು

ಶ್ರೀವಿವೇಕಾನಂದವನು ನೀಡು ! ನೀಡು 17


  • * *


ಆಶೆ ಕಡಿದರು ಕೂಡ ಆಶೆಯನು ಬಿಡದೆ

ಏಸೊ ದಿನವಾದರೂ `ಸೀತೆ' ಬಗೆಗೆಡದೆ 18