೧೩೫
ನನ್ನ ನಲ್ಲ
ಇದೋ ನೋಡಿರೀ ಪ್ರೇಮಮೂರ್ತಿಯಾ ಭವ್ಯ ರಥ
ವೆಂತು ಲಕಲಕಿಸುತಿಹುದು
ಅದರ ಸುತ್ತಲು ನಾಶರಹಿತ ತೇಜಃಪುಂಜ
ತಾರಾಂಗಣವು ಹೊಳೆವುದು
ಪಸದನಗಳೊಳ್ವೆಳಗಿಂ ನೆಲದ ಕಪ್ಪು ಬಣ್ಣಮನೆಲ್ಲ
ಬಿಳಿದಾಗಿಸಿ
ನಸುನಗುತ ಕಿಸುಗುದುರೆಗಳನುಳ್ಳ ಹೊಸದೇರೊ-
ಳೆಸೆಯುತುಷೆ ಬರುತಲಿಹಳು
3
ಪ್ರಿಯಕರನ ಕಾಂತಿಯಿಂದೊಡಗೂಡಿದುಷೆಯು ತಂ-
ಗಿಯನು ರಾತ್ರಿಯನು ಸರಿಸಿ
ರಯದಿಂ ದ್ಯುಲೋಕದೆಲ್ಲೆಯವರೆಗೆ ತನ್ನ ಬೆಳಕನು
ಶೋಭಿಸುವಳು
ಬಳೆಬಣ್ಣದುಷೆಯ ಬರವನು ನೋಡಿ ಶಾಮಲಾಂಗಿಯು
ನಿಶಾರಮಣೀ ಮಣಿಯು
ಸಲೆ ತನ್ನ ವಾಸಸ್ಥಳಂಗಳನವಳ ತುಸುಕ
ತೆರವುಮಾಡಿಟ್ಟಿರುವಳು
ಅಕ್ಕರೆಯ ಅಕ್ಕ-ತಂಗಿಯರಿವರು ತಮ್ಮೊಳೊ-
ರ್ವರನೊರ್ವರನುಸರಿಸುವ
ಅಕ್ಕ-ತಂಗಿಯರು ಲೋಕದ ಬಣ್ಣ ಪಲ್ಲಟಿಸಿ
ನಡೆವರೀ ಬಾಂಬಟ್ಟೆಯಿಂ
ಉಭಯ ಭಗಿನಿಯರಿವರನಂತ ಮಾರ್ಗದೆ ನಡೆವರೀಶ
ನಾಣತಿಯನಾಂತು
ನಭದಲೊಂದೆ ವಿಚಾರದಿಂ ನಡೆವರಾದೊಡಂ
ಪರಿಜಮಿತ್ತೆರವಿರ್ಪುದು
ನಡಿಗೆಕಾರ್ತಿಯರಿವರು ರಜನೀವಧೂಟಿ ಮೇಣುಷೆಯು
ತಾವೆಲ್ಲೆಲ್ಲಿಯುಂ
ನಾಡೆ ನಿಲ್ಲರು; ಮತ್ತೆ ವಿಶ್ರಾಂತಿಯನ್ನೆಂದಿಗುಂ
ಬೇಡಿ ಬಯಸದಿಹರು