ವಿಷಯಕ್ಕೆ ಹೋಗು

ಪುಟ:Nanna Nalla.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮

ನನ್ನ ನಲ್ಲ


ನೀನು ನಿನ್ನಯ ಹೊಳೆವ ಮನದನ್ನನೆಡೆಗೈದು-

ವುದನೆಲ್ಲ ನಾನು ಒಲ್ಲೆ

ನಿನ್ನಂತೆ ನಿನ್ನಿನಿಯನುಂ ಮಹೋತ್ಸುಕನಾಗಿ ಹಣಿಕೆ

ಹಾಕುವುದು ಸುಳ್ಳೇ?

ಸಂತಸದಿ ನೀಂ ಮುಗುಳುನಗೆ ನಗುತಲೊನಪಿನಿಂ

ಹರೆಯದೇರುವಿಕೆಯಲ್ಲಿ

ಅಂತೆಯೇ ಕುಚಪೂದೇಶದ ವಸ್ತ್ರವನಿಂತು

ತುಸು ಸರಿಸಿ ತುಸು ಮುಚ್ಚುವೆ


8

ಏಳಿರೇಳಿರಿ ನಮಗೆ ಚೈತನ್ಯವನು ಕೊಡುವ

ಪ್ರಾಣಮೂರುತಿ ಬಂದಳು

ಏಳಿರೇಳಿರಿ ಕತ್ತಲೋಡಿ ಹೋಯಿತು ಬೆಳಗುತಿಹ

ಬೆಳಕು ಬರುತಲಿಹುದು

ಜನರೆದ್ದು ದುಡಿಯಹತ್ತಿದರೀಗ ಹಕ್ಕಿಪಕ್ಕಿಗಳುಲಿಯ

ಹತ್ತಿರುವವು

ಧಣಧಣಿಸಹತ್ತಿದವು ಮಂಗಳದ ವಾದ್ಯಗಳು

ನೋಡುನೋಡುವ ಕಡೆಯೊಳು

ಹೊತ್ತು ಹುಟ್ಟುವ ಮೊದಲು ಬರುವ ಮುಂಜಾವುಗಳೆ

ಬರುತಿರಲಿ ಬಹಳವಾಗಿ

ಹೊತ್ತಿನೊಡನಿರ್ಪುಷೆಯು ಎತ್ತಾದಿಗಳ ಕೊಂಡು

ನಮಗಾಗಿ ಬರುತಲಿರಲಿ

ಜಗದ ಕಡೆಗೊಂದು ಸಲ ದಿಟ್ಟಿಯನು ಚೆಲ್ಲು ಮತ್ತಾ

ದಿಟ್ಟಿಯನು ತಿರುಗಿಸಿ

ಜಗದೊಳ್ ಪ್ರಕಾಶವಂ ಹರಡಿ ಸುಳಿವವಳನಿದೊ

ಕವಿಕುಲವು ನುತಿಗೆಯ್ವುದು


ಕಂದ || ಸಲೆ ಋಗ್ವೇದದ ಋಚೆಗಳ

ಸುಲಲಿತ ಗದ್ಯಾನುವಾದದಿಂ ಮನವೊಲೆದು

ಕೆಲವಂಶಗಳನಾಯ್ದು ಸ-

ರಲ ಛಂದದಿನಿಂತು ಚೆನ್ನಮಲ್ಲಪನೊರೆದಂ

_____