ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೦
ನನ್ನ ನಲ್ಲ
3. ಶಿವಶರಣರ ಸವಿನುಡಿಗಳು
ಮರದೊಳಗೆ ಬೆಂಕಿಯನು | ಉರಿಯದಂತಿರಿಸಿದಯ್
ಬಿತ್ತಿನೊಳು ಗಿಡವನ್ನು | ಗೊತ್ತಾಗದಂತಿಟ್ಟೆ
ಸೊಂಪಿನಾ ತುಪ್ಪವನು | ಕಂಪಿಲ್ಲದಂದದಿಂ
ನೊರೆವಾಲೊಳಿರಿಸಿರುವ | ದೊರೆಯೆ | ದೊರೆ ನೀನಾರು ?
ಜಿಗಿವ ಮಿಂಚಿನ ಬಳ್ಳಿ | ಮುಗಿಲ ಮರೆಗಿರುವಂತೆ
ಹೊಳೆವ ಕಂಗಳ ಮರೆಗೆ | ಬೆಳಕು ತಾನಿರುವಂತೆ
ಇಲಿದೇರನಯ್ಯನಾ | ನಿಲವು ತಾನಿರ್ಪುದೈ
ಹೊಲೆಯರಾ ಬಾವಿಯೊಳು | ಎಲುವೊಂದು ನಟ್ಟಿರಲು
ಹೊಲೆಯೆನುವದೀ ಜಗವು | ಹಲವೆಲುವಿನಿಂದಾದ
ಮೆಲುವಂಥ ಬಾಯಿಂದೆ | ಬಲು ಸಟೆಯ ನುಡಿಯಲದು
ಹೊಲೆಯರಾ ಬಾವಿಯಿಂ | ಬಲು ಕೀಳು ತಾನಲ್ಲೆ ?
ಉರಿಯೊಳಿಹ ಕಪ್ಪುರಕೆ | ಕರಿಯುಂಟೆ ? ಮೃಗಜಲಕೆ
ಕೆಸರುಂಟೆ ? ಗಾಳಿಯೊಳು | ಪಸರಿಸಿದ ಪರಿಮಲಕೆ
ನೈರ್ಮಲ್ಯವುಂಟೇನೊ ? | ನಿಮ್ಮಡಿಯೊಳಿಂಬಾದ
ಕಲಿಗೆ ಭವವುಂಟೆ ? ಕೂ | ಡಲ ಸಂಗಮೇಶ್ವರಾ
______