ವಿಷಯಕ್ಕೆ ಹೋಗು

ಪುಟ:Nanna Nalla.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩

ನನ್ನ ನಲ್ಲ


ದೇವರೆನಗೆ ರೆಕ್ಕೆಗಳನು

ಡೇಗೆಯಂಥ ಕಣ್ಣುಗಳನು

ಯೋಗಿಯಂಥ ಮನವ ಕೊಡುವನೇ ?

ಕೊಟ್ಟರೀಗ-

ಮುಗಿಲನೇರಿ ನೋಡಿ ಬರುವೆನೇ | 9


ಎಂದು ಹಲುಬಿ ಹಂಬಲಿಸುವ

ತಾಯಿ ಜೋಲುಮೋರೆ ಹಾಕಿ

ಹುಚ್ಚಳಂತೆ ಕುಳಿತುಬಿಟ್ಟಳು

ಮಂದಿ ಮಕ್ಕ-

ಳಳುವ ಕೇಳಿ ಕಣ್ಣು ತೆರೆದಳು || 10


ಗಿಡವೆ ಧ್ರುವನು, ದನವೆ ಧ್ರುವನು

ಕಲ್ಲೆ ಧ್ರುವನು. ಸೊಲ್ಲೆ ಧ್ರುವನು

ಎಲ್ಲ ಕಡೆಗೆ ಧ್ರುವನ ಭ್ರಾಂತಿಯೇ

ಸುನೀತಿಯಲ್ಲಿ-

ಮೂಡಿತಿಂದು ಧ್ರುವನ ಮೂರ್ತಿಯೇ || 11


_______