ವಿಷಯಕ್ಕೆ ಹೋಗು

ಪುಟ:Nanna Nalla.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪

ನನ್ನ ನಲ್ಲ


9. ಮುಸುಕು

ನೀನು ನಿನ್ನ ತೋಟದಲ್ಲಿ

ನಾನು ನನ್ನ ಕೊಂಪೆಯಲ್ಲಿ

ಅತ್ತೆ ಕೊಡುವ ಕಾಟ ಬೇರೆ

ಮತ್ತೆ ಅಡ್ಡ ಗುಡ್ಡ ಬೇರೆ

ಜೀವವೆಲ್ಲ ತೋಟದಲ್ಲಿ

ಖೋಡಿ ಕೆಲಸ ಕೊಂಪೆಯಲ್ಲಿ

ತೋಟ ಮನೆಗೆ ದೂರ ಬೇರೆ

ಕಾವಲತ್ತೆ ಕಾಳ ಬೇರೆ

ಕೊಂಪೆ ನನಗೆ ಜನ್ಮಗಂಟು

ತೋಟ ನಿನಗೆ ಗಚ್ಚಿಗಂಟು

ಅತ್ತೆ ಕದನ ಮರೆವಳಲ್ಲ

ಜೀವ ಸುಮ್ಮುನಿರುವದಿಲ್ಲ


ತೂಗದಂಥ ದಗದ ನನಗೆ

ನೀಗದಷ್ಟು ಕೆಲಸ ನಿನಗೆ

ಧೀರವಿರದ ಬಾಲೆ ನಾನು

ಘೋರ ಗಂಭೀರ ನೀನು

ನಿನಗೆ ನಿನ್ನ ದುಡಿವ ಲಕ್ಕು

ನನಗೆ ಸತತ ನಿನ್ನ ಬಿಕ್ಕು

ನೀನು ನಿನ್ನ ತೋಟದಲ್ಲಿ

ನಾನು ನನ್ನ ಕೊಂಪೆಯಲ್ಲಿ


ಸುಗ್ಗಿಯಲ್ಲಿ ನಿನಗೆ ತೊಡಕು

ಅಗ್ಗಿಯಲ್ಲಿ ನನಗೆ ಮಿಡುಕು

ನಿನ್ನ ದಗದ ನಿನಗೆ ಹಿರಿದು