ವಿಷಯಕ್ಕೆ ಹೋಗು

ಪುಟ:Nanna Nalla.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬

ನನ್ನ ನಲ್ಲ


10. ದೇವತಾ ಪೃಥಿವಿ

ಮೊಲೆಹಾಲು ಸಾಕಮ್ಮಾ ಸವಿಲಾಲಿ ಬೇಕಮ್ಮಾ

ಮುದ್ದಾಡಿ ರಮಿಸಿ ಮೈದಡವ | ಏಳಮ್ಮಾ

ಮಲಗಿರುವ ತಾಯಿ ಪೃಥಿವೀ 1


ಹೊಟ್ಟೀಗಿ ಹಸಿವಿಲ್ಲ ಕರುಳೀಗಿ ಸೊಗಸಿಲ್ಲ

ಮೊಲೆ ಸಾಕು ಮುದ್ದುಕೊಡು ತಾಯಿ | ಏಳಮ್ಮಾ

ಮಲಗಿರುವ ತಾಯಿ ಪೃಥಿವೀ 2


ಹಸಿವೀಗಿ ಮೊಲೆಯುಂಡೆ ಕಸವೀಸಿಗೇನುಳ್ಳೆ

ಹಾಲೊಲ್ಲೆ ಸಾಕು ಬಿಗಿದಪ್ಪ | ಏಳಮ್ಮಾ

ಮಲಗಿರುವ ತಾಯಿ ಪೃಥಿವೀ 3


ಮೊಲೆಹಾಲು ರುಚಿಗೊಂಡು ಮನದ್ಹಾಲ ಬಯಸೀನ

ಗುಟುಗುಟುಕಿಗೊಮ್ಮೆ ಮಿಕಿಮಿಕಿ | ಏಳಮ್ಮಾ

ಮಲಗಿರುವ ತಾಯಿ ಪೃಥಿವೀ 4


ಹೂವಿsನ ಮಕರಂದ ಹಂಣಿsನ ಮಾಧುರಿಯ

ಹಾಲ್ಹೀಂಗ ಇನ್ನ ಮನಹ್ಯಾಂಗ | ಏಳಮ್ಮಾ

ಮಲಗಿರುವ ತಾಯಿ ಪೃಥಿವೀ 5


ಚಂದರನ ಚೆಲುವೀಕಿ ಇಂದರನ ಹೋಲೀಕಿ

ಮೈ ಹೀಂಗ ನಿನ್ನ ಮನ ಹ್ಯಾಂಗ | ಏಳಮ್ಮಾ

ಮಲಗಿರುವ ತಾಯಿ ಪೃಥಿವೀ 6


ಹಿಂದಿತ್ತು ಕಾರಿರುಳು ಇಂದೀಗಿ ಹೂಬಿಸಿಲು

ಅಂದಿಗಿಂದೀಗಿ ಒಂದೇನ ? | ಏಳಮ್ಮಾ

ಮಲಗಿರುವ ತಾಯಿ ಪೃಥಿವೀ 7