ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೭
ನನ್ನ ನಲ್ಲ
ಕಣ್ಣು ಅರಳದ ಕೂಸು ಮ್ಯಾಲ ಕತ್ತಲೆ ಗವಿಯು
ಆಗಲ್ಲ ಕಂಡೆ ನಾನೀಗ | ಏಳಮ್ಮಾ
ಮಲಗಿರುವ ತಾಯಿ ಪೃಥಿವೀ 8
ಮೊಲೆಹಾಲ ಧಾರೀಗಿ ಎಲ್ಲೀದೊ ಸೆಲೆಯೆಂದೆ
ಆಗೆಲ್ಲಿ ತಾಯಿ ಈ ನೆಲಿಯೆ | ಏಳಮ್ಮಾ
ಮಲಗಿರುವ ತಾಯಿ ಪೃಥಿವೀ 9
ಏನಂತೊ ಅಂದಿದ್ದ ತಾಯಂತ ಈಗಂದ
ಕಣ್ಣೀಲೆ ಕಂಡು ಮನಗಂಡು | ಏಳಮ್ಮಾ
ಮಲಗಿರುವ ತಾಯಿ ಪೃಥಿವೀ 10
ಉಂಡದ್ದು ಹೌದಮ್ಮಾ ಕಂಡದ್ದು ನಿಜವಮ್ಮಾ
ಉಂಡೇನು ? ಈಗ ಕಂಡೇನು ? ಏಳಮ್ಮಾ
ಮಲಗಿರುವ ತಾಯಿ ಪೃಥಿವೀ 11
ಕತ್ತಲೆಯ ಆ ಸೋಂಕು ಹೂಬಿಸಿಲ ಈ ಮಂಕು
ಕಪ್ಪೇನು ಮತ್ತ ಬಿಳುಪೇನು | ಏಳಮ್ಮಾ
ಮಲಗಿರುವ ತಾಯಿ ಪೃಥಿವೀ 12
ಕಾಣsದ ಆ ಕುರುಡು ಕಾಣೂವ ಈ ಕುರುಡು
ಕಂಡೇನು ಕಾಣದಿದ್ದೇನು | ಏಳಮ್ಮಾ
ಮಲಗಿರುವ ತಾಯಿ ಪೃಥಿವೀ 13
ಅರುವಲ್ಲ ಮರುವಲ್ಲ ಅರಿತದ್ದು ಸ್ಥಿರವಲ್ಲ
ಅರಿತೇನು ಆಸೆ ತೀರದೆ | ಏಳಮ್ಮಾ
ಮಲಗಿರುವ ತಾಯಿ ಪೃಥಿವೀ 14
ಇಲ್ಲಂಬು ಮರುಗಲ್ಲ ಅಲ್ಲಂಬು ಅಳುಕಲ್ಲ
ಇದ್ದಿಲ್ಲದಂಥ ಪರಿ ಹೊಲ್ಲ | ಏಳಮ್ಮಾ
ಮಲಗಿರುವ ತಾಯಿ ಪೃಥಿವೀ 15