ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೮
ನನ್ನ ನಲ್ಲ
ಕಿಂಭೂತ ಕೊರಡೊಂದು ತುಂಬೀತು ಕೊನರಾಗಿ
ಹೂವಾಗಿ ಹಣ್ಣು ಬಿಡಲಿಲ್ಲ | ಏಳಮ್ಮಾ
ಮಲಗಿರುವ ತಾಯಿ ಪೃಥಿವೀ 16
ಎಲ್ಲಿsಯ ಈ ನಿದ್ದಿ ಕಾಳsನ ಕರಿ ನಿದ್ದಿ
ಇದ್ದೇನು ಇಲ್ಲದಿದ್ದೇನು | ಏಳಮ್ಮಾ
ಮಲಗಿರುವ ತಾಯಿ ಪೃಥಿವೀ 17
ತಟ್ಟಿದರು ಮಿಸುಕಿಲ್ಲ ಹಲುಬಿದರು ಉಲುವಿಲ್ಲ
ತುಟಿಯಲ್ಲಿ ತಟಕು ಅಲುಗಿಲ್ಲ | ಏಳಮ್ಮಾ
ಮಲಗಿರುವ ತಾಯಿ ಪೃಥಿವೀ 18
ಮರೆತು ಮಲಗುವಳಲ್ಲ ಅರಿತು ಆತುರಳಲ್ಲ
ನಿನಗಾಟ ನನಗ ಎದೆಗಿಚ್ಚ | ಏಳಮ್ಮಾ
ಮಲಗಿರುವ ತಾಯಿ ಪೃಥಿವೀ 19
ಅಂದು ಆಗಿಸಬಲ್ಲಿ ನೆನೆದು ನಾಟಿಸಬಲ್ಲಿ
ಮಾರೀಯ ಮುಸುಕು ತೆರದೇಳ | ಏಳಮ್ಮಾ
ಮಲಗಿರುವ ತಾಯಿ ಪೃಥಿವೀ 20
ಹಾಲುನಿದ್ದಿಯ ತೊರೆಯೆ ಜೇನುನಿದ್ದಿಯ ತೊರೆಯೆ
ಸಕ್ಕರಿಯ ನಿದ್ದಿ ತೊರದೇಳ | ಏಳಮ್ಮಾ
ಮಲಗಿರುವ ತಾಯಿ ಪೃಥಿವೀ 21
ಕನಸೀನ ಕನ್ನಕ್ಕಿ ಮನಸೀನ ಮಾಯಮ್ಮಾ
ಎಚ್ಚತ್ತು ತಾಯಿ ಎವೆಬಿಚ್ಚ | ಏಳಮ್ಮಾ
ಮಲಗಿರುವ ತಾಯಿ ಪೃಥಿವೀ 22
ಏಳಮ್ಮ ಏಳಮ್ಮಾ ಏಳೆನ್ನ ತಾಯಮ್ಮಾ
ಏಳದೆ ಜೀವ ಕೇಳದ | ಏಳಮ್ಮಾ
ಮಲಗಿರುವ ತಾಯಿ ಪೃಥಿವೀ 23