ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೪೦
ನನ್ನ ನಲ್ಲ
11. ಶರಣರ ವಚನಗಳು
ರಯದಿ ಕೊಡವನ್ನೊಡೆದು
ಬಯಲ ನೋಡುವುದೇಕೆ ?
ಒಳಗಿಹುದೆ ಬಯಲೆಂದು
ತಿಳಿದಡದು ಸಾಲದೇ ?
ಅಂಗುರೀಯವ ಮುರಿದು
ಬಂಗಾರ ನೋಡುವರೇ ?
ಕನಕವೆಂದದನೆ ಸಲೆ
ನೆನಿಸಲದು ಸಾಲದೇ ?
ತನಗಳಿವ ತಂದು ನೆರೆ
ಘನವ ನೋಡುವದೇಕೆ ?
ಅರಿಯೆ ತಾಂ ಘನವೆಂದು
ಗುರುವೇ | ಅದು ಸಾಲದೇ ?
______