ವಿಷಯಕ್ಕೆ ಹೋಗು

ಪುಟ:Nanna Nalla.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪

ನನ್ನ ನಲ್ಲ


15. ಮಧುರಗೀತ

``ಸಕಲ ನಿಃಕಲನಯ್ಯಾ, ನಿಃಕಲ ಸಕಲನಯ್ಯಾ

ಸಕಲನಾಗಿ ಸಂಸಾರಿಯಲ್ಲ, ನಿಃಕಲನಾಗಿ ವೈರಾಗಿಯಲ್ಲ

ಸಂಸಾರಿಯಲ್ಲದ ಸಂಗ, ವೈರಾಗಿಯಲ್ಲದ ನಿಸ್ಸಂಗ

ಉಭಯ ಸಂಗದಿಂದ ಮಹತ್ತನೈದಿರ್ಪನಾಗಿ

`ಸ್ಥಾವರಂ ಜಂಗಮಂ ಚೈವ ದ್ವಿವಿಧಂ ಲಿಂಗಮುಚ್ಯತೇ'

ಎಂಬುದಾಗಿ ಕೂಡಲಚೆನ್ನಸಂಗಾ ನೀನಿದ್ದುದಂತೆ ಇರ್ಪನಲ್ಲದೆ

ನಿಮ್ಮ ಶರಣ ಕ್ಷೀಣನಲ್ಲ.

- ಚೆನ್ನ ಬಸವಣ್ಣ


ಮೊದಲನೆಯ ಮುದ್ದು

(ಕುಸುಮ ದ್ವಿಪದಿ)


ಬಲುದಿನದ ಬಯಕೆಯೊಂದಿತ್ತೆನ್ನ ತಮ್ಮಯ್ಯ

ನಿನ್ನ ಮೇಲೊಂದು ಹಾಡೇನೆಂಬುವಾ

ಹಲವು ದಿನದಿಂದಲೂ ಪ್ರತಿಭೆ ಮಲಗಿದ್ದವಳು

ಇಂದಿದೇ ಎದ್ದಿಹಳು ಬಾ ನೋಡುವಾ 1


ನಿನ್ನ ನೆವದಿಂದೆನ್ನ ಗೆಳೆತನದ ಕುಲಕೋಟಿ

ಗೆಲ್ಲ ನನ್ನೊಲವಿನಾ ಸಿರಿಯ ಪೇಳ್ವೆ

ಇನ್ನೇನು ಈ ಸಂಧಿ ನನ್ನ ಕಕ್ಕುಲತೆಯಾ

ಬರವ ಹಿಂಗಿಸಿತೆಂದೆ ತಿಳಿದುಕೊಳ್ವೆ 2


ಸಂಗ ಸಂಸ್ಕೃತಿ ಮೂಲ ಬುದ್ಧಿ ಬಳಕೆಯ ಸುಫಲ

ಇದು ತಾನೆ ಭೌತಿಕದ ಬೀಜಮಾತು

ಅಂಗ ಬಾರದ ಮುನ್ನ ಆತ್ಮ ಬಾರದೆ ಇಲ್ಲ

ಹಿಂದಿನದೆ ಇಂದು ಇದು ಶಾಸ್ತ್ರಹೇತು 3