ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೪೮
ನನ್ನ ನಲ್ಲ
ಯಾರು ಮಾರಾಯರೋ ಹಡೆದು ಹೊರೆಯನು ಹೊರಿಸಿ
ಹೊರದೂಡಿ ಹೊರಳಿ ಸಹ ನೋಡದವರೋ 1
ಹುಟ್ಟಿಸುವ ಮೊದಲು ಮೊಲೆಹಾಲು ಮೂಡಿಸಿದವಗೆ
ಮೊರೆಯಿಟ್ಟರೂ ಇಂಥ ಮೌನವೇಕೊ
ಕೊಟ್ಟು ಮಳೆಬೆಳೆ ಭೂಮಿಸೀಮಿ ರವಿಶಶಿಗಳನು
ಕರುಣಧಾಭಾಸವನ್ನಿಟ್ಟನೇಕೊ 2
ಘೋರಾಂಧಕಾರದಲಿ ಬೆಳಕು ಮುಚ್ಚಿಡಬಲ್ಲ
ಬಟ್ಟಬಯಲನೆ ಗಟ್ಟಿಗೊಳಿಸಬಲ್ಲ
ಮೀರಿದಾ ಮಹಿಮ ತಾನೆಲ್ಲ ಬಲ್ಲವನಯ್ಯ
ನಮ್ಮ ಮನಸನ್ನೇಕೆ ತಿಳಿಯಲೊಲ್ಲ ? 3
ತಮ್ಮ ಕರ್ಮವೆ ತಮ್ಮ ಸರ್ವಫಲಗಳ ಮೂಲ
ಅರುವಿಲ್ಲದತ್ತರವನೇಕೆ ಕಾದಾ?
ನಮ್ಮ ಬೆರಳೇ ನಮ್ಮ ಕಣ್ಣಿಗಿಕ್ಕುವುದೊಂದು
ಸೋಜಿಗದ ಹಂಚಿಕೆಯು ಕರ್ಮವಾದ 4
ಹುಟ್ಟಿಸೆಂದಾತನಿಗೆ ಬಿನ್ನವಿಸಿದವರಾರೊ
ಕೆಟ್ಟ ಕೃತಿ ತಡೆಯಬೇಡೆಂದರಾರೊ
ಇಷ್ಟೆಲ್ಲ ತಾ ಮಾಡಿ ತಪ್ಪುಹೊರಿಸಿದ ಬಳಿಕ
ಸೆರೆಸಿಕ್ಕ ಜೀವರಿಗೆ ದಿಕ್ಕು ಯಾರೊ 5
ಏನಾದರೇನಾತ್ಮ ನಾಶವಾಗುವದಲ್ಲ
ಸುಳ್ಳು ಕೂಗಿನ ಬೆಲೆಯೆ ಅವನಿಗಿಲ್ಲ
ಏನೆ ಆದದ್ದೆಲ್ಲ ನಮ್ಮ ಹಿತಕೆಂದೆಂಬ
ಜುಲುಮೆಯಾ ನಿಶ್ವಿಂತೆಗರ್ಥವಿಲ್ಲ 6
ಸುಖದುಃಖವೆಂಬುವುದು ಮನದ ಭ್ರಮೆಯೆಂದೆಂಬ
ಆನಂದವಾದಿಗಳ ನೆಲೆಯನರಿಯೆ