ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೫೧
ನನ್ನ ನಲ್ಲ
ವ್ಯರ್ಥವಾದರು ಸರಿಯೆ ಸಾರ್ಥವಾದರು ಸರಿಯೆ
ಕೈಗೆ ಕೈಯಾಧಾರವೇ ಸುಯೋಗ 19
ದೇವಲೀಲೆಯೊ ಕಾಣೆ ಕರ್ಮಜಾಲವೊ ಕಾಣೆ
ಅದು ನಮ್ಮ ಬುದ್ಧಿಯಾಚೆಗಿನ ಮಾತು
ಯಾವುದೇನೇ ಇರಲಿ ಪ್ರೀತಿಯಂಥಾ ವಸ್ತು
ಭವದಲ್ಲಿ ಕಾಣೆ ಮನಗಂಡ ಮಾತು 20
ಮೂರನೆಯ ಮುದ್ದು
ಗೆಳೆಯರೆಂಬವರೆಲ್ಲ ದಿನದೂಟದೊಳೆ ತುತ್ತ-
ನುಳಿಸಿದರೆ ತನಗೆ ಸಾಕೆಂದು ಮೊರೆದಾ
ಗೆಳೆಯಗೀಯದ ದಿನವೆ ನನ್ನ ನಾ ತಿಳಕೊಂಡೆ
ಅಂದೆ ಕೇಳಿಸಿತೆನಗೆ ಪ್ರೇಮನಾದ 1
ತತ್ಪೂರ್ವದಲಿ ನನಗೆ ಓದಿಗೊತ್ತಾಪ್ರೇಮ
ಕಲ್ಪನೆಯ ಚಿತ್ರವೂ ಮೂಡೆಯಿತ್ತು
ತಾತ್ಪರ್ಯವಿನ್ನೇನು ? ಕಲ್ಪನೆಯು ಬಯಲಾಗಿ
ಸತ್ಯಸ್ವರ ಆಹೊತ್ತೆ ಕೇಳಿಸಿತ್ತು 2
ಬುದ್ಧಿಯುಳ್ಳವ ಮತ್ತೆ ಭಕ್ತಿಯುಳ್ಳವ ಮತ್ತೆ
ವೇದಶಾಸ್ತ್ರವನೋದಿದವನು ಮತ್ತೆ
ಸದ್ವಿಚಾರಿಯು ಮತ್ತೆ ಬುದ್ಧಿವಂತರ ಸಂಗ
ಇಷ್ಟಿದ್ದು ಈ ಪರಿಯೆ ಎಂದು ಅತ್ತೆ 3
ಗೆಳೆತನದ ಬೆಲೆಯರಿತ ಗೆಳೆಯರೋಲಗದವನು
ಗೆಳೆತನದ ಗೀತಗಳ ಹಾಡಿದವನು
ಗೆಳೆಯನೊಬ್ಬನ ಹೊತ್ತಿಗಾಗಲಾರದೆ ನನ್ನ
ಒಡಲಿಗೇ ಬಡಕೊಂಡೆನೆಂಥ ನರನು 4