೫೨
ನನ್ನ ನಲ್ಲ
ತಿಳಿದವರ ಪರಿ ಹೀಗೆ ಉಳಿದವರ ಪಾಡೇನು
ಅರಿತದ್ದು ಆಚರಣೆಗಿಳಿಸುವಲ್ಲಿ
ಕೊಳಕು ಬಣ್ಣದ ಮಾತು ಕೆಲಸಕ್ಕೆ ಬಂದೀತೆ
ತತ್ವ ಬರಿ ಬಾಯಿಮಾತೆಂದೆನಲ್ಲಿ 5
ಹೊತ್ತುಗಳೆಯಲು ಮತ್ತೆ ಹೆಮ್ಮೆಗಳಿಸಲು ಮತ್ತೆ
ಬುದ್ಧಿ ಗೊಂದುದ್ಯೋಗವಿಲ್ಲದಿರಲು
ತತ್ವದುಪಯೋಗವಿನ್ನೇತಕೂ ಅಲ್ಲೆಂದು
ಮನವು ಮುದುಡಿತು ಜೀವನದಲ್ಲಿ ದಿಗಿಲು 6
ಹಳೆಯ ಕತೆಗಳ ಮಾತು ಕನ್ನಡಿಯ ಹುಸಿ ಗಂಟೊ
ಮುಗಿಲ ಮಂಟಪವೊ ಕಲ್ಲಲ್ಲಿ ನಾರೋ
ಬಳಸಿ ಕಂಡವರಾರು ಬೆಳೆಸಿ ಬರೆದಿಟ್ಟಿಹರೊ
ಓದಿದವರುಂಟುಂಡು ಬಲ್ಲರಾರೋ 7
ಮತಿಗೆ ಮಿತಿಯೇನಯ್ಯ ಬಾಯಿಗೇತರ ಬಂಧ
ಬಲ್ಲಂತೆ ಬರೆವ ಕೈಗೇನು ಕಷ್ಟ
ಕ್ಷಿತಿಯನುರುಳಿಸಬಹುದು ಬೆಳಕ ಕರಗಿಸಬಹುದು
ಮುಗಿಲ ಮುಟ್ಟುವದೇನು ಮನಕೆ ಕಷ್ಟ 8
ಹಸುವ ನುಡಿಸಲುಬಹುದು ಹೆಣವ ಕುಣಿಸಲುಬಹುದು
ಕಲ್ಲಕಡಲೆಯ ಮೆಲ್ಲಲೇನು ಕಷ್ಟ
ಉಸುರಳಿದರೂ ಕೂಡ ಮಿಸುಕಳಿಯಲಿಲ್ಲೆಂದು
ಹೇಳುವುದು ಬಿಗಿಯೆ ತಿಳಿಯುವುದು ಕಷ್ಟ 9
ಮನೆಯನಿತ್ತವರುಂಟು ಧನವನಿತ್ತವರುಂಟು
ಸತಿಸುತರ ಕೊಟ್ಟ ಕಥೆ ಸಾವಿರುಂಟು
ಇನುವನಿತ್ತವರುಂಟು ನಿಃಸ್ವಾರ್ಥ ಭಾವದಲಿ
ಇಂಥ ಕಥೆ ನಮ್ಮಲ್ಲಿ ಗಂಟುಗಂಟು 10