ವಿಷಯಕ್ಕೆ ಹೋಗು

ಪುಟ:Nanna Nalla.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩

ನನ್ನ ನಲ್ಲ


ಶೂಲದಂತೆನ್ನೆದೆಗೆ ಬಾಧಿಸಿತು ಸಂದೇಹ

ಆತ್ಮ ತಾತ್ಸಾರತೆಯ ಮೊದಲೆ ಗಾಯ

ಮೇಲೆ ರಾಧೆಯ ಕಥೆಯು ಮನದಲ್ಲಿ ನಟ್ಟಿತ್ತು

ಆತ್ಮಾತ್ಮದೈಕ್ಯದಾದರ್ಶವಯ್ಯ 11


ಅಂದಿನಿಂದದೆ ಧ್ಯಾನ ಅಂದಿನಿಂದದೆ ಚಿಂತೆ

ಅಂದಿನಿಂದದೆ ಮನದ ಮುಖ್ಯ ವಿಷಯ

ಅಂದಿನಿಂದದೆ ಇಂದ್ರ ಅಂದಿನಿಂದದೆ ಚಂದ್ರ

ಅಂದಿನಿಂದದೆ ನನ್ನ ಜನ್ಮಧ್ಯೇಯ 12


ಇಷ್ಟು ದಿನಗಳ ಪ್ರೀತಿ ಅಷ್ಟು ತಳಕಿರಲಿಲ್ಲ

ಅಲ್ಲಿ ಭಕ್ತಿಯ ಬೆಂಕಿ ಹೊತ್ತುತ್ತಿತ್ತು

ಇಷ್ಟಕಾಗಿಯೆ ಪ್ರೀತಿ ಸ್ಪಷ್ಟ ರೂಪಕೆ ಬರದೆ

ಅಷ್ಟಷ್ಟಕೆಲ್ಲೆಲ್ಲೊ ಸುತ್ತುತಿತ್ತು 13


ಪ್ರೀತಿ ರೂಪಕೆ ಬರದೆ ಭಕ್ತಿ ಫಲಿಸುವುದುಂಟೆ

ಪ್ರೇಮವಿಲ್ಲದ ಭಕ್ತಿ ಬಂಜೆಯೆಂದು

ಹೇತು ಮನದಲಿ ಮೂಡಿ ಪ್ರೀತಿಗಾಸೆಯ ಮಾಡಿ

ಹೃದಯ ಒಳಗೊಳಗೆ ಮಿಡುಕಾಡಿತಂದು 14


ಆನೆಗಂಕುಶದಂತೆ ಪ್ರೀತಿ ಸ್ವಾರ್ಥಕ್ಕೆಂದೆ

ಹಾವಿಗ್ಹತ್ತುವ ಮೂಲಮಂತ್ರವೆಂದೆ

ಜ್ಞಾನವನು ಜಪಿಸುತ ಶುದ್ಧಿಸಲು ಸ್ವಾರ್ಥವನು

ಪ್ರೀತಿಯಂಥಾ ವಸ್ತುವಿಲ್ಲವೆಂದೆ 15


ದಾನಮೂಲಕವಾಗಿ ಕ್ಷೀಣ ಸ್ವಾರ್ಥಿಗಳಾಗಿ

ಆತ್ಮಭಾವಕೆ ಬಂದರಂದಿನವರು

ಏನು ಹೇಳುವೆನಯ್ಯ ಪ್ರೇಮಮೂಲಕವಾಗಿ

ಸಾಗಿದರೆ ಸಾಗಬಹುದಿಂದಿನವರು 16