ವಿಷಯಕ್ಕೆ ಹೋಗು

ಪುಟ:Nanna Nalla.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೧

ನನ್ನ ನಲ್ಲ


ಹುಚ್ಚುತನವೋ ಕಾಣೆ ಜಾಣತನವೋ ಕಾಣೆ

ಹುಚ್ಚುತನ ಯಾರಿಗೂ ಬಿಟ್ಟೆಯಿಲ್ಲ

ಅಚ್ಚ ಅನುಭವರಾಶಿ ಬಿಚ್ಚಿ ಬೈಲಿಗೆ ಇಟ್ಟೆ

ಮುಚ್ಚುಮರೆಯಿದರೊಳೇನೇನು ಇಲ್ಲ 17


ಈ ಹುಚ್ಚಿಗಳ ಕೇಕೆಯಿದ್ದಂತೆ ಹಾಡಿದೆನು

ನನ್ನಂತರಂಗದಾ ಪ್ರಕೃತಿಯಂತೆ

ಹೋಹೊ ``ಸದೃಶಂ ಚೇಷ್ಟತೆ ಜ್ಞಾನವಾನಪಿ ತು

ಸ್ವಸ್ಯಾಃ ಪ್ರಕೃತೆ ಯೆಂಬ ಗೀತೆಯಂತೆ 18


ಕರ್ಮ ಮರ್ಮದ ನೆಲೆಯ ಅರಿತವರಿಗೂ ಅರಿದು

ನಾನು ನೀನಾವ ತಕ್ಕಡಿಯ ಕಾಣಿ

``ಕರ್ಮಣ್ಯ ಕರ್ಮಯಃ ಪಶ್ಯೇದ ಕರ್ಮಣಿ ಚ

ಕರ್ಮಯಃ ಪಶ್ಶೇತ್ ಸಬುದ್ಧಿಮಾನ್ಹೀ 19


ಜನರಾಡಿಕೊಳಬಹುದು ನನಗು ನಿನಗೂ ಕೂಡೆ

ಅವರೇನು ಬಲ್ಲರೋ ಒಳನಿಧಾನ

ನನಗೆ ನೀನತಿ ಮಧುರ ನಿನಗೆ ನಾ ಬಲು ಚೆನ್ನ

ಹೀಗೆಂತಲೇ ನಾವು ``ಮಧುರಚೆನ್ನ 20


ದೇವಲೀಲೆಯೊ ಕಾಣೆ ಕರ್ಮಜಾಲವೊ ಕಾಣೆ

ಅದು ನಮ್ಮ ಬುದ್ಧಿಯಾಚೆಗಿನ ಮಾತು

ಯಾವುದೇನೇ ಇರಲಿ ಪ್ರೀತಿಯಂಥಾ ವಸ್ತು

ಭವದಲ್ಲಿ ಕಾಣೆ ಮನಗಂಡ ಮಾತು 101


______